ಭೂಮಿಯ ಮೇಲಿನ ಅತ್ಯಂತ ಅದೃಷ್ಟಶಾಲಿ ವ್ಯಕ್ತಿ ನಾನು: ಅರುಣ್‌ ಯೋಗಿರಾಜ್

KannadaprabhaNewsNetwork |  
Published : Jan 23, 2024, 01:48 AM ISTUpdated : Jan 23, 2024, 11:39 AM IST
Arun Yogiraj

ಸಾರಾಂಶ

ನಾನು ಕನಸಿನ ಲೋಕದಲ್ಲಿದ್ದೇನೆ ಎನ್ನಿಸುತ್ತಿದೆ. ನನ್ನ ಮೇಲೆ ಸದಾ ರಾಮಲಲ್ಲಾ ಆಶೀರ್ವಾದ ಇರುತ್ತದೆ ಎಂದು ನಂಬಿರುವುದಾಗಿ ಮೈಸೂರು ಶಿಲ್ಪಿ ಅರುಣ್‌ ಯೋಗಿರಾಜ್‌ ತಿಳಿಸಿದ್ದಾರೆ.

ಅಯೋಧ್ಯೆ: ರಾಮ್ ಲಲ್ಲಾ ವಿಗ್ರಹ ಶಿಲ್ಪಿ, ಅರುಣ್ ಯೋಗಿರಾಜ್ ಅವರು ತಮ್ಮ ಹಸ್ತದಲ್ಲಿ ಮೂಡಿ ಬಂದ ವಿಗ್ರಹವನ್ನು ಪ್ರಧಾನಿ ನರೇಂದ್ರ ಮೋದಿ ಪ್ರತಿಷ್ಠಾಪನೆ ಮಾಡಿದ್ದಕ್ಕೆ ಅತೀವ ಹರ್ಷ ವ್ಯಕ್ತಪಡಿಸಿದ್ದಾರೆ. 

ತಾನು ಕನಸಿನ ಲೋಕದಲ್ಲಿ ಇದ್ದೇನೆ ಎಂದು ಭಾಸವಾಗುತ್ತಿದೆ ಎಂದಿದ್ದಾರೆ.ಸೋಮವಾರ ಪ್ರಾಣಪ್ರತಿಷ್ಠಾಪನಾ ಸಮಾರಂಭದಲ್ಲಿ ಭಾಗವಹಿಸಿ ಸುದ್ದಿಗಾರರ ಜತೆ ಮಾತನಾಡಿದ ಅವರು, ‘ನಾನು ಈಗ ಭೂಮಿಯ ಮೇಲಿನ ಅತ್ಯಂತ ಅದೃಷ್ಟಶಾಲಿ ವ್ಯಕ್ತಿ ಎಂದು ನಾನು ಭಾವಿಸುತ್ತೇನೆ. 

ನನ್ನ ಪೂರ್ವಜರು, ಕುಟುಂಬ ಸದಸ್ಯರು ಮತ್ತು ಭಗವಾನ್ ರಾಮ ಲಲ್ಲಾ ಅವರ ಆಶೀರ್ವಾದ ಯಾವಾಗಲೂ ನನ್ನೊಂದಿಗೆ ಇದೆ. ಕೆಲವೊಮ್ಮೆ ಕನಸಿನ ಲೋಕದಲ್ಲಿ ನಾನು ಇದ್ದೇನೆ ಎಂದು ನನಗೆ ಅನಿಸುತ್ತದೆ’ ಎಂದರು.

ಅರುಣ್‌ ಯೋಗಿರಾಜ್ ಕೆತ್ತಿರುವ ವಿಗ್ರಹವನ್ನು ಸೋಮವಾರ ಮಧ್ಹಾಹ್ನ 12.30ರ ಮುಹೂರ್ತದಲ್ಲಿ ಪ್ರಧಾನಿ ನರೇಂದ್ರ ಮೋದಿ ಪ್ರತಿಷ್ಠಾಪನೆ ಮಾಡಿದರು. ವಿವಿಧ ಶಿಲ್ಪಿಗಳು ಕೆತ್ತಿದ್ದ 3 ರಾಮನ ವಿಗ್ರಹದಲ್ಲಿ ಅರುಣ್‌ ಕೆತ್ತಿದ ಮೂರ್ತಿ ಇತ್ತೀಚೆಗೆ ಆಯ್ಕೆಯಾಗಿತ್ತು.

PREV

Recommended Stories

ಕಾಶ್ಮೀರದ ರಾಜ್ಯ ಸ್ಥಾನಮಾನ ಇಂದು ವಾಪಸ್‌: ಭಾರೀ ವದಂತಿ
₹30000 ಕೋಟಿಗಾಗಿ ನಟಿ ಕರಿಷ್ಮಾ ಕಪೂರ್‌ ಮಾಜಿ ಪತಿ ಹ*: ದೂರು