ದಿಲ್ಲಿ ಸರ್ಕಾರ ನಡೆಸಿದ್ದಕ್ಕೆ ನನಗೆ ನೊಬೆಲ್‌ ನೀಡಬೇಕು: ಕೇಜ್ರಿವಾಲ್‌

KannadaprabhaNewsNetwork | Updated : Feb 26 2024, 01:11 PM IST

ಸಾರಾಂಶ

ಸಂದಿಗ್ಧ ಪರಿಸ್ಥಿತಿಯಲ್ಲೂ ದೆಹಲಿ ಜನತೆಗೆ ಸುಗಮ ಆಡಳಿತ ನೀಡಲು ಶ್ರಮಿಸಿದ್ದಕ್ಕಾಗಿ ತಮಗೆ ನೊಬೆಲ್‌ ಶಾಂತಿ ಪುರಸ್ಕಾರವನ್ನು ನೀಡಬೇಕು ಎಂಬುದಾಗಿ ದೆಹಲಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ ಆರೋಪಿಸಿದ್ದಾರೆ.

ನವದೆಹಲಿ: ಉಪರಾಜ್ಯಪಾಲರು ಮತ್ತು ಕೇಂದ್ರ ಸರ್ಕಾರವು ನಿರಂತರವಾಗಿ ನೀಡುತ್ತಿರುವ ಆಡಳಿತಾತ್ಮಕ ತೊಡರುಗಳ ನಡುವೆಯೂ ಸುಗಮ ಆಡಳಿತ ನಡೆಸುತ್ತಿರುವುದಕ್ಕಾಗಿ ನನಗೆ ನೊಬೆಲ್‌ ಪಾರಿತೋಷಕ ನೀಡಿದರೆ ತಪ್ಪಿಲ್ಲ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ ಲಘು ಶೈಲಿಯಲ್ಲಿ ಹೇಳಿದ್ದಾರೆ.

ದಿಲ್ಲಿ ಜಲಮಂಡಳಿ ಅವೈಜ್ಞಾನಿಕವಾಗಿ ನೀರಿನ ಬಿಲ್‌ ಹೆಚ್ಚಿಸಿರುವ ವಿರುದ್ಧ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದ ಕೇಜ್ರಿವಾಲ್‌, ‘ನಾನು ಮುಖ್ಯಮಂತ್ರಿಯಾದಂದಿನಿಂದಲೂ ಕೇಂದ್ರ ಸರ್ಕಾರವು ಉಪರಾಜ್ಯಪಾಲರ ಮೂಲಕ ನಾವು ಜಾರಿ ಮಾಡಬೇಕೆನ್ನುವ ಜನಸ್ನೇಹಿ ಕಾರ್ಯಕ್ರಮಗಳಿಗೆ ತಡೆಯೊಡ್ಡುತ್ತಿದೆ.

ಇದರ ನಡುವೆಯೂ ನಿಮಗೆ ಸುಗಮ ಆಡಳಿತ ಕೊಟ್ಟಿದ್ದಕ್ಕಾಗಿ ನನಗೆ ನೊಬೆಲ್‌ ಪಾರಿತೋಷಕ ನೀಡಿದರೂ ತಪ್ಪಿಲ್ಲ.

ಆದರೆ ನಿಮ್ಮ ಮತವೇ ನನಗೆ ನೊಬೆಲ್‌ ಪಾರಿತೋಷಕವಾಗಲಿದೆ’ ಎಂದರು.

Share this article