ರಾಜಸ್ಥಾನ ಮಾಜಿ ಸಿಎಂ ಗೆಹ್ಲೋಟ್‌ಗೆ ಕೊರೊನಾ, ಹಂದಿಜ್ವರ

KannadaprabhaNewsNetwork |  
Published : Feb 04, 2024, 01:31 AM ISTUpdated : Feb 04, 2024, 09:11 AM IST
ಅಶೋಕ್‌ | Kannada Prabha

ಸಾರಾಂಶ

ಅಶೋಕ್‌ ಗೆಹ್ಲೋಟ್‌ಗೆ ಆಮ್ಲಜನಕ ಯಂತ್ರ ಅಳವಡಿಕೆ ಮಾಡಲಾಗಿದ್ದು ಆರೋಗ್ಯ ಸ್ಥಿರವಾಗಿದೆ

ಜೈಪುರ: ರಾಜಸ್ಥಾನದ ಮಾಜಿ ಮುಖ್ಯಮಂತ್ರಿ ಅಶೋಕ್‌ ಗೆಹ್ಲೋಟ್‌ಗೆ ಕೊರೊನಾ ಸೋಂಕು ಹಾಗೂ ಹಂದಿಜ್ವರ ದೃಢಪಟ್ಟಿದೆ. ಹೀಗಾಗಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಈ ಕುರಿತು ಟ್ವೀಟ್‌ ಮಾಡಿರುವ ಗೆಹ್ಲೋಟ್‌, ‘ಜ್ವರದ ಹಿನ್ನೆಲೆಯಲ್ಲಿ ನಾನು ಜೈಪುರದ ಸವಾಯ್‌ ಮಾನ್‌ಸಿಂಗ್‌ ಆಸ್ಪತ್ರೆಗೆ ದಾಖಲಾಗಿದ್ದೇನೆ. ವೈದ್ಯರ ಸಲಹೆ ಮೇರೆಗೆ ಇಂದು ಕೊರೊನಾ ಪರೀಕ್ಷೆ ನಡೆಸಿದಾಗ ಸೋಂಕು ಇರುವುದು ದೃಢಪಟ್ಟಿದೆ. 

ಈ ಹಿನ್ನೆಲೆಯಲ್ಲಿ ಮುಂದಿನ ಏಳು ದಿನಗಳ ಕಾಲ ಯಾರನ್ನೂ ಭೇಟಿ ಮಾಡುವುದಿಲ್ಲ’ ಎಂದು ತಿಳಿಸಿದ್ದಾರೆ. ಈ ನಡುವೆ ಗೆಹ್ಲೋಟ್‌ ಅವರಿಗೆ ಆಮ್ಲಜನಕ ಸಿಲಿಂಡರ್‌ ಅಳವಡಿಕೆ ಮಾಡಲಾಗಿದ್ದು, ಅವರ ಆರೋಗ್ಯ ಸ್ಥಿರವಾಗಿದೆ ಎಂದು ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ಅಚಲ್‌ ಶರ್ಮಾ ತಿಳಿಸಿದ್ದಾರೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ಇ.ಡಿ.ರೇಡ್‌ ಖಂಡಿಸಿ ದೀದಿ, ಟಿಎಂಸಿ ಸಂಸದರು ಬೀದಿಗೆ
ಶಬರಿಮಲೆ ಚಿನ್ನಕ್ಕೆ ಕನ್ನ: ಪ್ರಧಾನ ಅರ್ಚಕ ಸೆರೆ