ಟೈಮ್ಸ್ ಪಟ್ಟಿಯಲ್ಲಿ ಭಾರತದ ಪ್ರಭಾವಿಗಳು | ಅಶ್ವಿನಿ ವೈಷ್ಣವ್, ನಂದನ್ ನಿಲೇಕಣಿ, ಕಪೂರ್

KannadaprabhaNewsNetwork |  
Published : Sep 07, 2024, 01:32 AM ISTUpdated : Sep 07, 2024, 04:37 AM IST
 ಎಐ | Kannada Prabha

ಸಾರಾಂಶ

ಟೈಮ್ ಮ್ಯಾಗಜಿನ್‌ನ 'ಎಐನ ಅತ್ಯಂತ ಪ್ರಭಾವಶಾಲಿ ವ್ಯಕ್ತಿಗಳು 2024' ಪಟ್ಟಿಯಲ್ಲಿ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್, ಇನ್ಫೋಸಿಸ್‌ನ ನಂದನ್ ನಿಲೇಕಣಿ ಮತ್ತು ನಟ ಅನಿಲ್ ಕಪೂರ್ ಸ್ಥಾನ ಪಡೆದಿದ್ದಾರೆ. ಈ ಪಟ್ಟಿಯಲ್ಲಿ ಭಾರತದ ಒಟ್ಟು 15 ಮಂದಿ ಇದ್ದಾರೆ.

ನ್ಯೂಯಾರ್ಕ್‌: ಟೈಮ್‌ ಮ್ಯಾಗಜಿನ್‌ ಬಿಡುಗಡೆ ಮಾಡಿರುವ 100 ‘ಎಐನ ಅತ್ಯಂತ ಪ್ರಭಾವಶಾಲಿ ವ್ಯಕ್ತಿಗಳು 2024’ ಪಟ್ಟಿಯಲ್ಲಿ ಕೇಂದ್ರ ಮಾಹಿತಿ ತಂತ್ರಜ್ಞಾನ ಸಚಿವ ಅಶ್ವಿನಿ ವೈಷ್ಣವ್‌, ಇನ್ಫೋಸಿಸ್‌ನ ಸಹ-ಸಂಸ್ಥಾಪಕ ನಂದನ್‌ ನಿಲೇಕಣಿ ಹಾಗೂ ನಟ ಅನಿಲ್‌ ಕಪೂರ್‌ ಪ್ರಮುಖ ಸ್ಥಾನ ಪಡೆದಿದ್ದಾರೆ.

ಈ ಪಟ್ಟಿಯಲ್ಲಿ ಗೂಗಲ್‌ನ ಸುಂದರ್‌ ಪಿಚೈ, ಮೈಕ್ರೋಸಾಫ್ಟ್‌ನ ಸತ್ಯ ನಾದೆಳ್ಲ ಸೇರಿ ಭಾರತದ ಹಾಗೂ ಭಾರತ ಮೂಲದ 15 ಮಂದಿಯ ಹೆಸರುಗಳೂ ಇವೆ.

ಏಕೆ ಇವರು ಪ್ರಭಾವಿ?

ಸಚಿವ ವೈಷ್ಣವ್‌ ಅವರ ನೇತೃತ್ವದಲ್ಲಿ ಮುಂದಿನ 5 ವರ್ಷಗಳಲ್ಲಿ ಎಐನ ಪ್ರಮುಖ ಅಂಶವಾಗಿರುವ ಸೆಮಿಕಂಡಕ್ಟರ್‌ ಉತ್ಪಾದನೆಯಲ್ಲಿ ಭಾರತ ಪ್ರಮುಖ 5 ದೇಶಗಳ ಪಟ್ಟಿಯಲ್ಲಿ ಕಾಣಿಸಿಕೊಳ್ಳುವ ಗುರಿ ಹೊಂದಿದೆ. ಹೀಗಾಗಿ ಅವರಿಗೆ ಟೈಮ್ಸ್‌ನ ಪಟ್ಟಿಯಲ್ಲಿ ಸ್ಥಾನ ದೊರೆತಿದೆ.

ಅನಿಲ್‌ ಕಪೂರ್‌ ಅವರು, ತಮ್ಮ ಪ್ರತಿರೂಪವನ್ನು ಅನಧಿಕೃತವಾಗಿ ಬಳಸಿಕೊಂಡು ತಯಾರಿಸಲಾದ ವೀಡಿಯೋ, ಜಿಐಎಫ್‌ ಹಾಗೂ ಇಮೋಜಿಗಳ ವಿರುದ್ಧ ನ್ಯಾಯಾಂಗ ಹೋರಾಟ ನಡೆಸಿ 2023ರ ಸೆಪ್ಟೆಂಬರ್‌ನಲ್ಲಿ ಜಯ ಗಳಿಸಿದ್ದರು. ಹೀಗಾಗಿ ಅವರನ್ನು ಗುರುತಿಸಲಾಗಿದೆ.

ನಿಲೇಕಣಿ ಅವರು ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯವನ್ನು ಅಭಿವೃದ್ಧಿಪಡಿಸುವಲ್ಲಿ ಸತತ 15 ವರ್ಷಗಳಿಂದ ಸರ್ಕಾರದ ಜೊತೆಗೂಡಿ ಕೆಲಸ ಮಾಡಿದ್ದಾರೆ. ಹೀಗಾಗಿ ಅವರು ಈ ಗೌರವಕ್ಕೆ ಭಾಜನರಾಗಿದ್ದಾರೆ.

ಎಐ ನೌ ಸಂಸ್ಥೆಯ ನಿರ್ದೇಶಕಿ ಅಂಬಾ ಕಕ್‌, ಯುಎಸ್‌ ಆಫೀಸ್ ಆಫ್ ಸೈನ್ಸ್ ಅಂಡ್ ಟೆಕ್ನಾಲಜಿ ಪಾಲಿಸಿಯ ನಿರ್ದೇಶಕಿ ಆರತಿ ಪ್ರಭಾಕರ್‌, ಕಲೆಕ್ಟಿವ್ ಇಂಟೆಲಿಜೆನ್ಸ್ ಪ್ರಾಜೆಕ್ಟ್‌ನ ಸಹ-ಸಂಸ್ಥಾಪಕಿ ದಿವ್ಯಾ ಸಿದ್ದಾರ್ಥ ಕೂಡ ಈ ಪಟ್ಟಿಯಲ್ಲಿ ಸ್ಥಾನ ಪಡೆದ ಮಹಿಳೆಯರು.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ಅಮೆರಿಕ- ಇರಾನ್‌ ಯುದ್ಧ! ಭಾರತ ಗಡಿಯಿಂದ ಸುಮಾರು 300 ಕಿ.ಮೀ. ದೂರದಲ್ಲೇ ಅಟ್ಯಾಕ್‌!
ಅಕ್ಕಪಕ್ಕದ ದೇಶಗಳಿಗೂ ಯುದ್ಧದ ಕೊಳ್ಳಿ