ಭಾರತದ ಮಾದರಿಯಲ್ಲಿಸರ್ಬಿಯಾ ಸಂಸತಲ್ಲೂಹೊಗೆ ಬಾಂಬ್‌ ದಾಳಿ!

KannadaprabhaNewsNetwork |  
Published : Mar 05, 2025, 12:35 AM IST
ಸರ್ಬಿಯಾ | Kannada Prabha

ಸಾರಾಂಶ

ಬೆಲ್‌ಗ್ರೇಡ್‌: 2 ವರ್ಷದ ಹಿಂದೆ ಭಾರತದ ಸಂಸತ್‌ ಒಳಗೆ ಮೈಸೂರು ಮೂಲದ ಮನೋರಂಜನ್‌ ನಡೆಸಿದ್ದ ಹೊಗೆ ಬಾಂಬ್‌ ದಾಳಿ ಮಾದರಿಯಲ್ಲಿಯೇ ಮಂಗಳವಾರ ಸರ್ಬಿಯಾದ ಸಂಸತ್‌ ಮೇಲೆ ವಿಪಕ್ಷಗಳ ಸಂಸದರು ಹೊಗೆ ಬಾಂಬ್‌ ದಾಳಿ ಮಾಡಿ ದಾಂಧಲೆ ಎಬ್ಬಿಸಿದ್ದಾರೆ.

ಬೆಲ್‌ಗ್ರೇಡ್‌: 2 ವರ್ಷದ ಹಿಂದೆ ಭಾರತದ ಸಂಸತ್‌ ಒಳಗೆ ಮೈಸೂರು ಮೂಲದ ಮನೋರಂಜನ್‌ ನಡೆಸಿದ್ದ ಹೊಗೆ ಬಾಂಬ್‌ ದಾಳಿ ಮಾದರಿಯಲ್ಲಿಯೇ ಮಂಗಳವಾರ ಸರ್ಬಿಯಾದ ಸಂಸತ್‌ ಮೇಲೆ ವಿಪಕ್ಷಗಳ ಸಂಸದರು ಹೊಗೆ ಬಾಂಬ್‌ ದಾಳಿ ಮಾಡಿ ದಾಂಧಲೆ ಎಬ್ಬಿಸಿದ್ದಾರೆ. ಅಲ್ಲಿನ ಆಡಳಿತ ಪಕ್ಷವು ವಿಶ್ವ ವಿದ್ಯಾಲಯಗಳಿಗೆ ಹೆಚ್ಚಿನ ಅನುದಾನವನ್ನು ನೀಡುವ ಮಸೂದೆಯನ್ನು ಅಂಗೀಕರಿಸಲು ಸಿದ್ಧವಾಗಿತ್ತು. ಈ ವೇಳೆ ವಿಪಕ್ಷ ಸಂಸದರು ವಿರೋಧ ವ್ಯಕ್ತಪಡಿಸಿ, ಪ್ರತಿಭಟನೆ ನಡೆಸಿದ್ದಾರೆ. ಇದು ತೀವ್ರ ಸ್ವರೂಪಕ್ಕೆ ತೆರಳಿ ಹೊಗೆ ಬಾಂಬ್‌ಗಳನ್ನು ಎಸೆದು, ಭಿತ್ತಿಪತ್ರಗಳನ್ನು ಹಿಡಿದು ಆಕ್ರೋಶ ಹೊರಹಾಕಿದ್ದಾರೆ. ದಾಳಿಯಿಂದಾಗಿ ದಟ್ಟವಾದ ಕಪ್ಪುಬಣ್ಣದ ಹೊಗೆ ಆವರಿಸಿದೆ. ಇದೇ ವೇಳೆ ಕೆಲ ಕಿಡಿಗಳು ಸಹ ಎಬ್ಬಿವೆ. ಆಕ್ರೋಶ ಭರಿತ ಸಂಸದರು ಮೊಟ್ಟೆ, ನೀರಿನ ಬಾಟಲಿಗಳನ್ನು ಎಸೆದಾಡಿದ್ದಾರೆ ಎಂದು ಅಲ್ಲಿನ ಮಾಧ್ಯಮ ವರದಿ ಮಾಡಿದೆ. ಇದರಿಂದಾಗಿ ಓರ್ವ ಸಂಸದರು ತೀವ್ರವಾಗಿ ಗಾಯಗೊಂಡು, ಇನ್ನು ಇಬ್ಬರು ಸಂಸದರು ಗಾಯಗೊಂಡಿದ್ದಾರೆ.

ಕ್ರಿಮಿನಲ್‌ ರಾಜಕಾರಣಿಗಳಅನರ್ಹತೆ ಕಡಿತ, ರದ್ದತಿ ಮಾಹಿತಿ ಕೊಡಿ: ಸುಪ್ರೀಂ

ನವದೆಹಲಿ: ಕ್ರಿಮಿನಲ್‌ ಪ್ರಕರಣಗಳಲ್ಲಿ ಅಪರಾಧಿಯೆಂದು ಸಾಬೀತಾಗಿ, ಚುನಾವಣೆಯಲ್ಲಿ ಸ್ಪರ್ಧಿಸುವುದರಿಂದ ನಿರ್ದಿಷ್ಟ ಅವಧಿಗೆ ಅನರ್ಹಗೊಂಡ ರಾಜಕಾರಣಿಗಳ ಅನರ್ಹತೆಯನ್ನು ರದ್ದುಪಡಿಸಿದ ಅಥವಾ ಅವಧಿ ಕಡಿತಗೊಳಿಸಿದ ಪ್ರಕರಣಗಳ ಬಗ್ಗೆ ಮಾಹಿತಿ ನೀಡುವಂತೆ ಸುಪ್ರೀಂ ಕೋರ್ಟ್‌, ಚುನಾವಣಾ ಆಯೋಗಕ್ಕೆ ಆದೇಶಿಸಿದೆ. ರಾಜಕಾರಣಿಗಳ ವಿರುದ್ಧದ ಕ್ರಿಮಿನಲ್‌ ಅಪರಾಧಗಳು ಸಾಬೀತಾಗಿ 2 ಅಥವಾ ಅದಕ್ಕಿಂತ ಅಧಿಕ ಅವಧಿಗೆ ಶಿಕ್ಷೆಗೊಳಗಾದರೆ, ಅದರ ಅವಧಿ ಮುಗಿದು 6 ವರ್ಷಗಳಾಗುವ ತನಕ ಅವರು ಚುನಾವಣೆಯಲ್ಲಿ ಸ್ಪರ್ಧಿಸುವಂತಿಲ್ಲ. ಇದು ಜಾಮೀನು ಪಡೆದವರಿಗೂ ಅನ್ವಯವಾಗುತ್ತದೆ. ಆದರೆ, ಜನಪ್ರತಿನಿಧಿಗಳ ಕಾಯ್ದೆ 1951ರ ಸೆಕ್ಷನ್‌ 11ರ ಅಡಿಯಲ್ಲಿ, ಅನರ್ಹತೆಯನ್ನು ರದ್ದುಪಡಿಸುವ ಅಥವಾ ಅದರ ಅವಧಿಯನ್ನು ಕಡಿಮೆ ಮಾಡುವ ಅಧಿಕಾರ ಚುನಾವಣಾ ಆಯೋಗಕ್ಕಿದೆ.

ಅಶ್ವಿನಿ ಉಪಾಧ್ಯಾಯ ಅವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಪರಿಗಣಿಸಿದ ನ್ಯಾ। ದೀಪಂಕರ್‌ ದತ್ತಾ ಹಾಗೂ ಮನಮೋಹನ್‌ ಅವರ ಪೀಠ, ಅನರ್ಹತೆಯಿಂದ ಮುಕ್ತರಾದವರು ಯಾವ ಪ್ರಕರಣದಲ್ಲಿ ಅಪರಾಧಿಗಳಾಗಿದ್ದರು ಎಂಬ ಮಾಹಿತಿಯನ್ನು 2 ವಾರಗಳೊಳಗಾಗಿ ಒದಗಿಸುವಂತೆ ಚುನಾವಣಾ ಆಯೋಗವನ್ನು ಕೇಳಿದೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ಮೋದಿ ಜತೆ ಪ್ರಿಯಾಂಕಾ ಗಾಂಧಿ ಆತ್ಮೀಯ ಮಾತು!
ಬಾಂಗ್ಲಾ ಹಿಂದು ಯುವಕನ ನರಮೇಧ - ಬಡಿದು ಕೊಂದು, ಮರಕ್ಕೆ ಕಟ್ಟಿ ಸುಟ್ಟು ಅಟ್ಟಹಾಸ