ಇವಿಎಂ ತೀರ್ಪು ವಿಪಕ್ಷಗಳಿಗೆ ತಪರಾಕಿ: ಮೋದಿ

KannadaprabhaNewsNetwork |  
Published : Apr 27, 2024, 01:21 AM ISTUpdated : Apr 27, 2024, 05:14 AM IST
ನರೇಂದ್ರ ಮೋದಿ | Kannada Prabha

ಸಾರಾಂಶ

‘ಎಲೆಕ್ಟ್ರಾನಿಕ್‌ ವೋಟಿಂಗ್‌ ಮಷಿನ್‌ (ಇವಿಎಂ)ಗಳ ಮೇಲಿನ ಅನುಮಾನಗಳನ್ನು ನಿವಾರಿಸಿದ ಸುಪ್ರೀಂಕೋರ್ಟ್‌ನ ಶುಕ್ರವಾರದ ತೀರ್ಪು ಕಾಂಗ್ರೆಸ್‌ ನೇತೃತ್ವದ ವಿಪಕ್ಷಗಳಿಗೆ ಹಾಕಿದ ತಪರಾಕಿ.

ಅರಾರಿಯಾ (ಬಿಹಾರ): ‘ಎಲೆಕ್ಟ್ರಾನಿಕ್‌ ವೋಟಿಂಗ್‌ ಮಷಿನ್‌ (ಇವಿಎಂ)ಗಳ ಮೇಲಿನ ಅನುಮಾನಗಳನ್ನು ನಿವಾರಿಸಿದ ಸುಪ್ರೀಂಕೋರ್ಟ್‌ನ ಶುಕ್ರವಾರದ ತೀರ್ಪು ಕಾಂಗ್ರೆಸ್‌ ನೇತೃತ್ವದ ವಿಪಕ್ಷಗಳಿಗೆ ಹಾಕಿದ ತಪರಾಕಿ. ಇದೇ ವಿಷಯ ಮುಂದಿಟ್ಟು ಹಲವು ವರ್ಷಗಳಿಂದ ಜನರಲ್ಲಿ ಗೊಂದಲ ಸೃಷ್ಟಿ ಮಾಡಿದ್ದ ವಿಪಕ್ಷಗಳು, ಈ ಕುರಿತು ದೇಶದ ಕ್ಷಮೆ ಕೇಳಬೇಕು’ ಎಂದು ಪ್ರಧಾನಿ ನರೇಂದ್ರ ಮೋದಿ ಆಗ್ರಹ ಮಾಡಿದ್ದಾರೆ.

ಚುನಾವಣೆಗೆ ಮರಳಿ ಮತಪತ್ರ ಬಳಸಬೇಕು ಮತ್ತು ಇವಿಎಂಗಳಲ್ಲಿ ಚಲಾವಣೆಯಾಗುವ ಎಲ್ಲಾ ಮತಗಳನ್ನು ವಿವಿಪ್ಯಾಟ್‌ನಲ್ಲಿ ಮುದ್ರಿತವಾಗುವ ಪ್ರತಿಯೊಂದಿಗೆ ಮತತಾಳೆ ನಡೆಸಬೇಕು ಎಂದು ಕೋರಿದ್ದ ಎಲ್ಲಾ ಅರ್ಜಿಗಳನ್ನು ಸುಪ್ರೀಂಕೋರ್ಟ್‌ ಶುಕ್ರವಾರ ವಜಾ ಮಾಡಿದ ಬೆನ್ನಲ್ಲೇ ಮೋದಿ ವಿಪಕ್ಷಗಳ ವಿರುದ್ಧ ಹರಿಹಾಯ್ದಿದ್ದಾರೆ. 

ಬಿಹಾರದ ಅರಾರಿಯಾದಲ್ಲಿ ಶುಕ್ರವಾರ ಬಿಜೆಪಿ ಚುನಾವಣಾ ರ್‍ಯಾಲಿ ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ‘ರಾಜ್ಯದಲ್ಲಿ ಕಾಂಗ್ರೆಸ್‌ ಮತ್ತು ಆರ್‌ಜೆಡಿ ಅಧಿಕಾರದಲ್ಲಿದ್ದಾಗ ಮತಗಟ್ಟೆಗಳ ಅಪಹರಣದ ಮೂಲಕ ಬಡವರು, ಹಿಂದುಳಿದವರು ಮತ್ತು ದಲಿತರ ಹಕ್ಕುಗಳನ್ನು ಕಸಿದುಕೊಳ್ಳಲಾಗಿತ್ತು. ಆದರೆ ಇವಿಎಂಗಳ ಜಾರಿ ಬಳಿಕ ಅವರ ಅಟಕ್ಕೆ ಬ್ರೇಕ್‌ ಬಿದ್ದಿತ್ತು. ಹೀಗಾಗಿಯೇ ಅವರು ಜನರಲ್ಲಿ ಇವಿಎಂಗಳ ಬಗ್ಗೆ ಗೊಂದಲ ಸೃಷ್ಟಿಸುವ ತಪ್ಪು ಮಾಡಿದರು. ಆದರೆ ಸುಪ್ರೀಂಕೋರ್ಟ್‌ನ ಶುಕ್ರವಾರದ ತೀರ್ಪು ಈ ಪಕ್ಷಗಳಿಗೆ ಹಾಕಿದ ತಪರಾಕಿಯಾಗಿದೆ. ಮತ್ತೆ ಹಿಂದಿನಂತೆ ಮತಪೆಟ್ಟಿಗೆ ತಂದು ಮತಗಳನ್ನು ಲೂಟಿ ಮಾಡಲು ಸಂಚು ರೂಪಿಸಿದವರಿಗೆ ಮುಖಭಂಗವಾಗಿದೆ’ ಎಂದು ಕಿಡಿಕಾರಿದರು.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ಬಂಗಾಳದಲ್ಲಿ ಶೀಘ್ರ ಜಂಗಲ್‌ ರಾಜ್ಯ ಅಂತ್ಯ : ಮೋದಿ ಪಣ
ಈಗ ತೆಲಂಗಾಣದಲ್ಲೂ ದ್ವೇಷ ಭಾಷಣ ನಿಷೇಧ ಕಾಯ್ದೆ: ರೆಡ್ಡಿ