ದಾಳಿಕೋರ ಪೈಲಟ್‌ಗೆ ಉಗ್ರಬೋಧನೆ ಆಗಿತ್ತು: ನೆತನ್ಯಾಹು

KannadaprabhaNewsNetwork |  
Published : Oct 02, 2026, 02:00 AM IST
netanyahu

ಸಾರಾಂಶ

ವಿಮಾನ ಪತನಕ್ಕೆ ಯತ್ನಿಸಿದ್ದ ಆರೋಪಿ ಸಹಪೈಲಟ್‌ ಇಸ್ಲಾಮಿಸ್ಟ್, ಉಗ್ರಗಾಮಿ ಸಿದ್ಧಾಂತದ ಬೋಧನೆಗೆ ಒಳಗಾಗಿದ್ದ. ಸೆರೆಸಿಕ್ಕಾಗ ನನ್ನನ್ನು ಕೊಲ್ಲಿ ಎಂದು ಕೂಗಿದ್ದ ಎಂದು ಇಸ್ರೇಲ್‌ ಪ್ರಧಾನಿ ಬೆಂಜಮಿನ್‌ ನೆತನ್ಯಾಹು ಹೇಳಿದ್ದಾರೆ.

ಜೆರುಸಲೇಂ: ವಿಮಾನ ಪತನಕ್ಕೆ ಯತ್ನಿಸಿದ್ದ ಆರೋಪಿ ಸಹಪೈಲಟ್‌ ಇಸ್ಲಾಮಿಸ್ಟ್, ಉಗ್ರಗಾಮಿ ಸಿದ್ಧಾಂತದ ಬೋಧನೆಗೆ ಒಳಗಾಗಿದ್ದ. ಸೆರೆಸಿಕ್ಕಾಗ ನನ್ನನ್ನು ಕೊಲ್ಲಿ ಎಂದು ಕೂಗಿದ್ದ ಎಂದು ಇಸ್ರೇಲ್‌ ಪ್ರಧಾನಿ ಬೆಂಜಮಿನ್‌ ನೆತನ್ಯಾಹು ಹೇಳಿದ್ದಾರೆ.

ವಶಕ್ಕೆ ಪಡೆಯುತ್ತಿದ್ದಂತೆ ನನ್ನನ್ನು ಕೊಲ್ಲಿ ಎಂದಿದ್ದ

ಫಾಕ್ಸ್‌ ನ್ಯೂಸ್‌ ಜತೆ ಮಾತನಾಡಿ, ‘ಆತ ಉಗ್ರಗಾಮಿ ಮನಸ್ಥಿತಿ ಬೆಳೆಯಲು ಕಾರಣವಾಗುವ ಬೋಧನಗೆ ಒಳಪಟ್ಟಿದ್ದ. ಆತ್ಮಾಹುತಿಗೂ ಸಿದ್ಧನಿದ್ದ. ವಶಕ್ಕೆ ಪಡೆದಾಗ, ನನ್ನನ್ನು ಕೊಲ್ಲಿ ಎಂದು ಆತ ಕೂಗಿದ್ದ. ಇರಾನ್‌ ಜತೆ ನಂಟಿತ್ತೇ ಎಂಬುದನ್ನು ಈಗಲೇ ಹೇಳಲಾಗದು. ತನಿಖೆ ನಡೆಯುತ್ತಿದ್ದು, ಅವನ ಮೇಲೆ ಇಸ್ರೇಲ್‌ ಕಣ್ಣಿಟ್ಟಿರುತ್ತದೆ’ ಎಂದು ಹೇಳಿದರು. ಜತೆಗೆ, ಘಟನೆಯ ತನಿಖೆಯಲ್ಲೂ ಇಸ್ರೇಲ್‌ ಅಧಿಕಾರಿಗಳು ಭಾಗಿಯಾಗಲಿದ್ದಾರೆ ಎಂದರು.

ಜಿಹಾದಿ ಭಯೋತ್ಪಾದಕ ದಾಳಿಯ ಪ್ರಯತ್ನ

ಇತ್ತ. ಭಾರತದಲ್ಲಿರುವ ಇಸ್ರೇಲ್‌ ದೂತಾವಾಸ ‘ಇದು ಜಿಹಾದಿ ಭಯೋತ್ಪಾದಕ ದಾಳಿಯ ಪ್ರಯತ್ನ’ ಎಂದಿದೆ. ಆದರೆ ಸಹಪೈಲಟ್‌ನ ಕೃತ್ಯದ ಹಿಂದಿನ ಉದ್ದೇಶ ಇನ್ನೂ ಅಸ್ಪಷ್ಟವಾಗಿದ್ದು, ಅದರ ಪತ್ತೆಗಾಗಿ ವಿಚಾರಣೆ ನಡೆಯುತ್ತಿದೆ.

ಈ ನಡುವೆ ವಿಮಾನ ಲ್ಯಾಂಡ್‌ ಆಗುತ್ತಿದ್ದಂತೆ ಸೌದಿ ಅರೇಬಿಯಾ ಪೊಲೀಸರು ಸಹಪೈಲಟ್‌ನನ್ನು ವಶಕ್ಕೆ ಪಡೆದಿದ್ದರು. ಇದೀಗ ಇಸ್ರೇಲಿ ಗುಪ್ತಚರ ಮತ್ತು ಭದ್ರತಾ ಅಧಿಕಾರಿಗಳು ವಿಚಾರಣೆ ಆರಂಭಿಸಿದ್ದಾರೆ ಎಂದು ಸ್ಥಳೀಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಅತ್ತ ತನ್ನ ತಂಡ ಕೂಡ ತನಿಖೆ ಮಾಡುತ್ತಿದೆ ಎಂದು ಯುಎಇ ಸರ್ಕಾರ ತಿಳಿಸಿದೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.
Read more Articles on

Recommended Stories

ದಾಳಿ ವೇಳೆ ಹನುಮಾನ್‌ ಚಾಲೀಸಾ ಪಠಿಸ್ತಿದ್ದೆ: ಹೀರೋ ಪೈಲಟ್‌
ಸ್ಮಿತ್‌ ಮಚ್ಛರ್‌ ಅವರ ಮೇಲೆ ಕಾಕ್‌ಪಿಟ್‌ನಲ್ಲಿದ್ದ ಕೈಕೊಡಲಿ ಬಳಸಿ ದಾಳಿ