ಇತ್ತೀಚೆಗೆ ಬಿಡುಗಡೆಯಾದ ಅಮೆರಿಕದ ರಾಕ್‌ಸ್ಟಾರ್‌ ಗೇಮ್‌ ನಿರ್ಮಾಣದ ಜನಪ್ರಿಯ ವಿಡಿಯೋ ಗೇಮ್‌ ಜಿಟಿಎ 6 (ಗ್ರ್ಯಾಂಡ್‌ ಥೆಫ್ಟ್‌ ಆಟೋ 6) ಗಳಿಕೆಯಲ್ಲಿ ದಾಖಲೆ ಬರೆದಿದೆ. ಬಿಡುಗಡೆಯಾದ 24 ಗಂಟೆಯಲ್ಲಿಯೇ ಜಗತ್ತಿನಾದ್ಯಂತ 35000 ಕೋಟಿ ರು. ಆದಾಯ ಗಳಿಸಿದೆ.

- ವೆಚ್ಚಕ್ಕಿಂತ ಒಂದೇ ದಿನ 4 ಪಟ್ಟು ಹೆಚ್ಚಳ ಲಾಭ

- ಬೆಂಗ್ಳೂರಲ್ಲಿ ತಯಾರಾದ ಗೇಮ್‌ ಸೂಪರ್‌ಹಿಟ್‌

ನವದೆಹಲಿ: ಇತ್ತೀಚೆಗೆ ಬಿಡುಗಡೆಯಾದ ಅಮೆರಿಕದ ರಾಕ್‌ಸ್ಟಾರ್‌ ಗೇಮ್‌ ನಿರ್ಮಾಣದ ಜನಪ್ರಿಯ ವಿಡಿಯೋ ಗೇಮ್‌ ಜಿಟಿಎ 6 (ಗ್ರ್ಯಾಂಡ್‌ ಥೆಫ್ಟ್‌ ಆಟೋ 6) ಗಳಿಕೆಯಲ್ಲಿ ದಾಖಲೆ ಬರೆದಿದೆ. ಬಿಡುಗಡೆಯಾದ 24 ಗಂಟೆಯಲ್ಲಿಯೇ ಜಗತ್ತಿನಾದ್ಯಂತ 35000 ಕೋಟಿ ರು. ಆದಾಯ ಗಳಿಸಿದೆ.

ನ.19ರ ಮಧ್ಯರಾತ್ರಿ ಗೇಮಿಂಗ್‌ ಬಿಡುಗಡೆಯಾಗಿತ್ತು. ಸುಮಾರು 9300 ಕೋಟಿ ರು. ವೆಚ್ಚದಲ್ಲಿ ತಯಾರಾಗಿದ್ದ ಈ ಗೇಮ್‌ ಒಂದೇ ದಿನದಲ್ಲಿ ವೆಚ್ಚಕ್ಕಿಂತ ಅಂದಾಜು 4 ಪಟ್ಟು ಲಾಭ ಗಳಿಸಿದೆ. ಕೇವಲ ಮೊದಲ ದಿನವೇ ಮಾರಾಟದಿಂದ ಗಳಿಸಿದ ಅಂದಾಜು 35000 ಕೋಟಿ ರು. ಆದಾಯವು ಹಾಲಿವುಡ್‌ ಸಿನಿಮಾಗಳ ಆದಾಯ ದಾಖಲೆಯನ್ನು ಮೀರಿಸಿದೆ. ವಿಶ್ವದ ಅತಿ ಹೆಚ್ಚು ಗಳಿಕೆ ಕಂಡ ಸಿನಿಮಾವಾಗಿರುವ ಅವೆಂಜರ್ಸ್: ಎಂಡ್‌ಗೇಮ್‌ ( 27,000 ಕೋಟಿ ರು.)ಗಿಂತಲೂ ಅಧಿಕ.

ಈ ಬೃಹತ್‌ ಗೇಮ್‌ ನಿರ್ಮಾಣದ ಹಿಂದೆ ಕರ್ನಾಟಕದ ಪಾತ್ರವೂ ಇದ್ದು, ರಾಕ್‌ಸ್ಟಾರ್‌ ಇಂಡಿಯಾದ ಬೆಂಗಳೂರು ಕಚೇರಿಯ ಸುಮಾರು 1600 ವೆಬ್‌ ಡೆವಲಪರ್‌ಗಳು ಇದರಲ್ಲಿ ಭಾಗಿಯಾಗಿದ್ದರು.

=

ಹಳೆ ಆವೃತ್ತಿಯಲ್ಲಿದೆ ಕನ್ನಡ ಸಾಂಗ್:

ಜಿಟಿಎದ ಎರಡನೇ ಆವೃತ್ತಿಯಲ್ಲಿ ವಿನೋದ್ ರಾಜ್​ಕುಮಾರ್ ನಟನೆಯ ಕನ್ನಡ ಸಿನಿಮಾ ‘ಡ್ಯಾನ್ಸ್ ರಾಜಾ ಡ್ಯಾನ್ಸ್’ ಸಿನಿಮಾದ ‘ನೀವೇ ನನ್ನ ತಾಯಿ ತಂದೆ’ ಹಾಡು ಸೇರಿಕೊಂಡಿದೆ. 2005ರಲ್ಲಿ ಈ ಆವೃತ್ತಿ ಪ್ರಸಾರವಾಗಿತ್ತು. ಜಿಟಿಎ ಗೇಮ್​​ನಲ್ಲಿ ಒಂದು ಕಲ್ಪಿತ ರೇಡಿಯೋ ಸ್ಟೇಷನ್ ಇದೆ. ಆ ಸ್ಟೇಷನ್ ಹೆಸರು ರೇಡಿಯೋ ಡೆಲ್ ಮುಂಡೋ ಎಂದು, ಅಲ್ಲಿನ ಆರ್​ಜೆ ಹೆಸರು ಗವಾಸ್ಕರ್, ಆತ ರೇಡಿಯೋ ಡೆಲ್ ಮುಂಡೋ ಹಾಡುಗಳನ್ನು ಪ್ರಸಾರ ಮಾಡುತ್ತಾನೆ. ಜಿಟಿಎ ಗೇಮಿನಲ್ಲಿ ವಾಹನ ಏರಿದರೆ ರೇಡಿಯೋ ಡೆಲ್ ಮುಂಡೋದ ಹಾಡುಗಳು ಪ್ರಸಾರ ಆಗುತ್ತವೆ. ಆಗ ಕನ್ನಡದ ‘ನೀವೆ ನನ್ನ ತಾಯಿ ತಂದೆ’ ಹಾಡು ಸಹ ಪ್ರಸಾರ ಆಗುತ್ತದೆ.