ಇತ್ತೀಚಿನ ಅಮೆರಿಕ ಭೇಟಿ ವೇಳೆ ಭಾರತ ಸರ್ಕಾರದ ಆರ್ಥಿಕ ನೀತಿ, ಚುನಾವಣಾ ವ್ಯವಸ್ಥೆಯಲ್ಲಿ ಲೋಪ ಮುಂತಾದ ವಿಷಯಗಳ ಬಗ್ಗೆ ಆರೋಪ ಮಾಡಿದ್ದ ರಾಹುಲ್‌ ಗಾಂಧಿ, ಇದೀಗ ತಮ್ಮ ಬಾಣವನ್ನು ಮತ್ತೆ ಬಿಜೆಪಿ, ಆರ್‌ಎಸ್‌ಎಸ್‌ ಕಡೆ ತಿರುಗಿಸಿದ್ದಾರೆ.

- ಅರ್ಧನಾರೀಶ್ವರ ಚಿತ್ರ ಹಂಚಿಕೊಂಡು ವಿರೋಧಿಗಳಿಗೆ ಟಾಂಗ್‌

- ಸರ್ಕಾರ, ಚುನಾವಣೆ ಬಳಿಕ ಬಿಜೆಪಿ, ಆರ್‌ಎಸ್‌ಎಸ್‌ ಟಾರ್ಗೆಟ್‌

ನವದೆಹಲಿ: ಇತ್ತೀಚಿನ ಅಮೆರಿಕ ಭೇಟಿ ವೇಳೆ ಭಾರತ ಸರ್ಕಾರದ ಆರ್ಥಿಕ ನೀತಿ, ಚುನಾವಣಾ ವ್ಯವಸ್ಥೆಯಲ್ಲಿ ಲೋಪ ಮುಂತಾದ ವಿಷಯಗಳ ಬಗ್ಗೆ ಆರೋಪ ಮಾಡಿದ್ದ ರಾಹುಲ್‌ ಗಾಂಧಿ, ಇದೀಗ ತಮ್ಮ ಬಾಣವನ್ನು ಮತ್ತೆ ಬಿಜೆಪಿ, ಆರ್‌ಎಸ್‌ಎಸ್‌ ಕಡೆ ತಿರುಗಿಸಿದ್ದಾರೆ. ಬಿಜೆಪಿ ಮತ್ತು ಆರ್‌ಎಸ್‌ಎಸ್‌ ಅಸಂಸ್ಕೃತ, ದುರಾಸೆಯ, ಜಾತಿವಾದಿ ಮತ್ತು ಪುರುಷಾಹಂಕಾರಿ ಮನಃಸ್ಥಿತಿಯವು ಎಂದು ರಾಹುಲ್ ಆರೋಪಿಸಿದ್ದಾರೆ. ಈ ವೇಳೆ ಅವರು, ಶಿವ ಮತ್ತು ಪಾರ್ವತಿ ದೇವಿಯು ಒಂದಾಗಿರುವ ಅರ್ಧನಾರೀಶ್ವರ ರೂಪವನ್ನು ಬಿಂಬಿಸುವ ಶಿಲ್ಪವೊಂದರ ಚಿತ್ರವನ್ನು ಹಂಚಿಕೊಂಡು ವಿರೋಧಿಗಳಿಗೆ ಟಾಂಗ್‌ ನೀಡಿದ್ದಾರೆ.

ತಮ್ಮ ತಾಯಿ ತಂದೆಯ ತೊಡೆಯ ಮೇಲೆ ಕುಳಿತು ಊಟ ಮಾಡುತ್ತಿದ್ದರು ಎಂದು ರಾಹುಲ್‌ ಇತ್ತೀಚೆಗೆ ನೀಡಿದ್ದ ಹೇಳಿಕೆಯನ್ನು ಬಿಜೆಪಿಗರು ಟೀಕಿಸಿದ್ದರು. ಇದಕ್ಕೆ ಟ್ವೀಟ್‌ ಮೂಲಕ ತಿರುಗೇಟು ನೀಡಿರುವ ರಾಹುಲ್‌, ‘ಭಾರತೀಯ ಆಧ್ಯಾತ್ಮಿಕ ಮತ್ತು ಧಾರ್ಮಿಕ ಪರಂಪರೆಗಳ ಆಳಕ್ಕೆ ಹೋದಷ್ಟೂ, ವಿಷಯವು ಹೆಚ್ಚು ಸ್ಪಷ್ಟವಾಗುತ್ತಾ ಹೋಗುತ್ತದೆ. ಬಿಜೆಪಿ ಮತ್ತು ಆರ್‌ಎಸ್‌ಎಸ್ ಅಸಭ್ಯ, ದುರಾಸೆಯ, ಜಾತಿವಾದಿ ಮತ್ತು ಪುರುಷವಾದಿಗಳಾಗಿದ್ದು, ನಮ್ಮ ಆಧ್ಯಾತ್ಮಿಕ ಮತ್ತು ಧಾರ್ಮಿಕ ಸಂಪ್ರದಾಯಗಳ ಬಗ್ಗೆ ಅವರಿಗೆ ಯಾವುದೇ ತಿಳಿವಳಿಕೆಯೇ ಇಲ್ಲ’ ಎಂದು ಕಿಡಿ ಕಾರಿದ್ದಾರೆ.