ಕಛ್‌ನ ಉಪ್ಪು ಮರುಭೂಮಿಯನ್ನು ನೋಡಿಕೊಂಡು ಮರಳುತ್ತಿದ್ದ ವೇಳೆ ರಾಷ್ಟ್ರೀಯ ಹೆದ್ದಾರಿಯಲ್ಲಿ ವೇಗವಾಗಿ ಬಂದ ಟ್ರಕ್‌ ಒಂದು ಕಾರ್‌ಗೆ ಡಿಕ್ಕಿಯಾದ ಪರಿಣಾಮ ಅದು ಇಬ್ಭಾಗವಾಗಿದ್ದು, ಅದರಲ್ಲಿದ್ದ ಉತ್ತರಾಖಂಡದ ಗಢವಾಲ್‌ನ ಪರಿವಾರವೊಂದರ 7 ಮಂದಿ ಸ್ಥಳದಲ್ಲೇ ಪ್ರಾಣ ಕಳೆದುಕೊಂಡಿದ್ದಾರೆ. ಈ ಘಟನೆ ಶನಿವಾರ ರಾತ್ರಿ 10 ಗಂಟೆ ಸುಮಾರಿಗೆ ಸಂಭವಿಸಿದೆ.

ಗುಜರಾತಲ್ಲಿ ಟ್ರಕ್‌ ಡಿಕ್ಕಿ ರಭಸಕ್ಕೆ

ಕಾರು ಇಬ್ಭಾಗ, 7 ಮಂದಿ ಸಾವು

ಭುಜ್‌: ಕಛ್‌ನ ಉಪ್ಪು ಮರುಭೂಮಿಯನ್ನು ನೋಡಿಕೊಂಡು ಮರಳುತ್ತಿದ್ದ ವೇಳೆ ರಾಷ್ಟ್ರೀಯ ಹೆದ್ದಾರಿಯಲ್ಲಿ ವೇಗವಾಗಿ ಬಂದ ಟ್ರಕ್‌ ಒಂದು ಕಾರ್‌ಗೆ ಡಿಕ್ಕಿಯಾದ ಪರಿಣಾಮ ಅದು ಇಬ್ಭಾಗವಾಗಿದ್ದು, ಅದರಲ್ಲಿದ್ದ ಉತ್ತರಾಖಂಡದ ಗಢವಾಲ್‌ನ ಪರಿವಾರವೊಂದರ 7 ಮಂದಿ ಸ್ಥಳದಲ್ಲೇ ಪ್ರಾಣ ಕಳೆದುಕೊಂಡಿದ್ದಾರೆ. ಈ ಘಟನೆ ಶನಿವಾರ ರಾತ್ರಿ 10 ಗಂಟೆ ಸುಮಾರಿಗೆ ಸಂಭವಿಸಿದೆ.

ಅಪಘಾತದಲ್ಲಿ 3 ತಿಂಗಳ ಮಗು ಸೇರಿ 3 ಮಕ್ಕಳು, ಇಬ್ಬರು ಮಹಿಳೆಯರು ಹಾಗೂ 3 ಪುರುಷರು ಅಸುನೀಗಿದ್ದಾರೆ. ಇವರೆಲ್ಲಾ ಭುಜ್‌ನಲ್ಲಿ ನಿಯೋಜನೆಗೊಂಡಿದ್ದ ಯೋಧರೊಬ್ಬರ ಕುಟುಂಬದವರು ಎಂದು ತಿಳಿದುಬಂದಿದೆ. ಘಟನೆಗೆ ಸಂತಾಪ ಸೂಚಿಸಿರುವ ಪ್ರಧಾನಿ ನರೇಂದ್ರ ಮೋದಿ, ಮೃತರ ಕುಟುಂಬಸ್ಥರಿಗೆ ತಲಾ 2 ಲಕ್ಷ ರು. ಹಾಗೂ ಗಾಯಾಳುಗಳಿಗೆ 50 ಸಾವಿರು ರು. ಪರಿಹಾರ ಘೋಷಿಸಿದ್ದಾರೆ.==

ರಾಜಸ್ಥಾನ: ತೀರ್ಥಯಾತ್ರೆಗೆಹೊರಟಿದ್ದ 9 ಮಂದಿ ಸಾವುಕೋಟಾ: ಕೋಟಾ-ಉದಯಪುರ ಹೆದ್ದಾರಿಯಲ್ಲಿ ಚಲಿಸುತ್ತಿದ್ದ ಎಂಯುವಿ ಕಾರ್‌ ಒಂದು ರಸ್ತೆ ಬದಿಯಲ್ಲಿ ನಿಂತಿದ್ದ ಟ್ರಕ್‌ಗೆ ಡಿಕ್ಕಿಯಾದ ಪರಿಣಾಮ ಕಾರ್‌ನಲ್ಲಿದ್ದ 9 ಮಂದಿ ಸಾವನ್ನಪ್ಪಿದ ಘಟನೆ ಭಾನುವಾರ ಬೆಳಗಿನಜಾವ 1 ಗಂಟೆಗೆ ಸಂಭವಿಸಿದೆ. 8 ಮಂದಿ ಗಾಯಗೊಂಡಿದ್ದಾರೆ. ಮಹಾರಾಷ್ಟ್ರದ ಧುಲೆ ಜಿಲ್ಲೆಯವರಾದ ಇವರೆಲ್ಲಾ ತೀರ್ಥಯಾತ್ರೆಯ ಭಾಗವಾಗಿ ಶಾಮ್‌ಜಿ ದೇವಸ್ಥಾನಕ್ಕೆ ಭೇಟಿ ನೀಡಿ ಮರಳುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.ಕಾರ್‌ನ ಚಾಲಕ ನಿದ್ದೆ ಮಂಪರಿನಲ್ಲಿದ್ದ ಕಾರಣ ನಿಯಂತ್ರಣ ತಪ್ಪಿ ಈ ದುರ್ಘಟನೆ ಸಂಭವಿಸಿದೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.ಅತ್ತ ಈ ಬಗ್ಗೆ ಮಾತನಾಡಿದ ಟ್ರಕ್‌ ಚಾಲಕ, ‘ವಾಹನದ ದೋಷ ಪರಿಶೀಲಿಸಲು ಅದನ್ನು ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ ವೇಳೆ ವೇಗವಾಗಿ ಬಂದ ಕಾರ್‌ ಡಿಕ್ಕಿ ಹೊಡೆಯಿತು. ನಾನು 20 ಅಡಿ ದೂರಕ್ಕೆ ಎಸೆಯಲ್ಪಟ್ಟೆ ಹಾಗೂ 10 ನಿಮಿಷದ ಬಳಿಕ ಪ್ರಜ್ಞೆ ಬಂದಾಗ ಪೊಲೀಸ್‌ ಹಾಗೂ ಆ್ಯಂಬುಲೆನ್ಸ್‌ಗೆ ಕರೆ ಮಾಡಿದೆ’ ಎಂದಿದ್ದಾರೆ.ದುರ್ಘಟನೆಯಲ್ಲಿ ಮೃತರ ಪರಿವಾರದವರಿಗೆ ಪ್ರಧಾನಿ ಮೋದಿ 2 ಲಕ್ಷ ರು. ಹಾಗೂ ಗಾಯಗೊಂಡವರಿಗೆ 50 ಸಾವಿರ ರು. ಪರಿಹಾರ ಘೋಷಿಸಿದ್ದಾರೆ.

==

ಮರಕ್ಕೆ ಕಾರ್‌ ಡಿಕ್ಕಿ:ತ.ನಾಡಲ್ಲಿ 8 ಸಾವುತಿರುಚಿರಾಪಳ್ಳಿ: ಕರ್ಣವೇಧ ಸಂಸ್ಕಾರ ಕಾರ್ಯಕ್ರಮದಲ್ಲಿ ಭಾಗವಹಿಸಿ ನಾಮಕ್ಕಲ್‌ನಿಂದ ತಂಜಾವೂರ್‌ ಜಿಲ್ಲೆಯ ತಿರುಕಟ್ಟುಪಳ್ಳಿಗೆ ಮರಳುತ್ತಿದ್ದ ಕಾರ್‌ ಕೊತುರ್ಪಟ್ಟಿ ರಸ್ತೆಯಲ್ಲಿ ಸಾಗುತ್ತಿದ್ದ ವೇಳೆ ಮರಕ್ಕೆ ಡಿಕ್ಕಿಯಾದ ಪರಿಣಾಮ ಅದರಲ್ಲಿದ್ದ 8 ಮಂದಿ ಸಾವನ್ನಪ್ಪಿದ್ದು, ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ.ಘಟನೆ ಭಾನುವಾರ ಸಂಜೆ 4 ಗಂಟೆ ಸುಮಾರಿಗೆ ಸಂಭವಿಸಿದ್ದು, 5 ಮಂದಿ ಸ್ಥಳದಲ್ಲೇ ಪ್ರಾಣ ಕಳೆದುಕೊಂಡಿದ್ದಾರೆ. ಇನ್ನು ಮೂವರು ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.ಘಟನೆಗೆ ಸಂಬಂಧಿಸಿದಂತೆ ಪೊಲೀಸರು ತನಿಖೆ ಆರಂಭಿಸಿದ್ದಾರೆ.