ಲಕಾಲ ಚಿನ್ನ ಖರೀದಿ ಮುಂದೂಡುವಂತೆ ಕರೆ ನೀಡುವ ಮೂಲಕ ಪ್ರಧಾನಿ ಮೋದಿ ಅವರು ಜ್ಯುವೆಲ್ಲರ್ಸ್ಗಳು ಹಾಗೂ ಹೂಡಿಕೆದಾರರಿಗೆ ಉಂಟಾಗಬಹುದಾಗಿದ್ದ ಭಾರೀ ಪ್ರಮಾಣದ ನಷ್ಟ ತಪ್ಪಿಸಿದ್ದಾರೆ. ಮೋದಿ ಅವರ ಕರೆ ಬಳಿಕ ಚಿನ್ನದ ಬೆಲೆ ಭಾರೀ ಪ್ರಮಾಣದಲ್ಲಿ ಇಳಿಕೆಯಾಗಿದೆ ಎಂದು ಚೇಂಬರ್ ಆಫ್ ಟ್ರೇಡ್ ಆ್ಯಂಡ್ ಇಂಡಸ್ಟ್ರಿ (ಸಿಟಿಐ) ಹೇಳಿದೆ.
ನವದೆಹಲಿ: ‘ನನ್ನ ಮಾತು ಕೇಳಿ ಜನಸಾಮಾನ್ಯರು ಚಿನ್ನದ ಖರೀದಿ ಮುಂದೂಡಿದ್ದರಿಂದ ಜನರ ಹಣ ಉಳಿಯಿತು’ ಎಂಬ ಪ್ರಧಾನಿ ನರೇಂದ್ರ ಮೋದಿ ಹೇಳಿಕೆಗೆ ಇದೀಗ ವ್ಯಾಪಾರಿಗಳ ಒಕ್ಕೂಟದಿಂದಲೂ ಬೆಂಬಲ ಸಿಕ್ಕಿದೆ. ಅಗತ್ಯವಿಲ್ಲದಿದ್ದರೆ ಕೆಲಕಾಲ ಚಿನ್ನ ಖರೀದಿ ಮುಂದೂಡುವಂತೆ ಕರೆ ನೀಡುವ ಮೂಲಕ ಪ್ರಧಾನಿ ಮೋದಿ ಅವರು ಜ್ಯುವೆಲ್ಲರ್ಸ್ಗಳು ಹಾಗೂ ಹೂಡಿಕೆದಾರರಿಗೆ ಉಂಟಾಗಬಹುದಾಗಿದ್ದ ಭಾರೀ ಪ್ರಮಾಣದ ನಷ್ಟ ತಪ್ಪಿಸಿದ್ದಾರೆ. ಮೋದಿ ಅವರ ಕರೆ ಬಳಿಕ ಚಿನ್ನದ ಬೆಲೆ ಭಾರೀ ಪ್ರಮಾಣದಲ್ಲಿ ಇಳಿಕೆಯಾಗಿದೆ ಎಂದು ಚೇಂಬರ್ ಆಫ್ ಟ್ರೇಡ್ ಆ್ಯಂಡ್ ಇಂಡಸ್ಟ್ರಿ (ಸಿಟಿಐ) ಹೇಳಿದೆ.
ಚಿನ್ನದ ವಿಚಾರದಲ್ಲಿ ಪ್ರಧಾನಿ ಅವರ ಸಕಾಲಿಕ ಮಧ್ಯಪ್ರವೇಶದಿಂದ ಲಕ್ಷಾಂತರ ವ್ಯಾಪಾರಿಗಳು ಸಾಲಕ್ಕೆ ತುತ್ತಾಗುವುದು ತಪ್ಪಿದೆ ಎಂದು ಹೇಳಿ ಚೇಂಬರ್ ಆಫ್ ಟ್ರೇಡ್ ಆ್ಯಂಡ್ ಇಂಡಸ್ಟ್ರೀ(ಸಿಟಿಐ) ಪರವಾಗಿ ಮುಖ್ಯಸ್ಥ ಬ್ರಿಜೇಶ್ ಗೋಯಲ್ ಅವರು ಮೋದಿಗೆ ಪತ್ರ ಬರೆದು ಧನ್ಯವಾದವನ್ನೂ ಅರ್ಪಿಸಿದ್ದಾರೆ.ಮೋದಿ ಅವರು ಚಿನ್ನ ಖರೀದಿ ಮುಂದೂಡಲು ಮನವಿ ಮಾಡಿದಾಗ ಚಿನ್ನದ ಬೆಲೆ 1 ಕೆ.ಜಿ.ಗೆ 1.90 ಕೋಟಿ ರು. ಇತ್ತು. ಅದಾದ ಬಳಿಕ ಇದೀಗ ಆ ದರ ಸರಾಸರಿ 1.25 ಕೋಟಿ ರು.ಗೆ ಇಳಿದಿದೆ. ಅಂದರೆ ಕೆ.ಜಿ. ಚಿನ್ನದ ದರ ಪ್ರತಿ ಕೆ.ಜಿ.ಗೆ 65 ಲಕ್ಷ ರು.ನಷ್ಟು ಇಳಿದಿದೆ ಎಂದು ಬ್ರಿಜೇಶ್ ಹೇಳಿಕೊಂಡಿದ್ದಾರೆ.
ಒಂದು ವೇಳೆ ವ್ಯಾಪಾರಿಗಳು ಮೋದಿ ಅವರ ಮನವಿ ತಿರಸ್ಕರಿಸಿ ಅಂದು ಚಿನ್ನ ಖರೀದಿಸಿಟ್ಟು ದಾಸ್ತಾನು ಮಾಡಿಕೊಂಡಿಟ್ಟುಕೊಂಡಿದ್ದರೆ ಪ್ರತಿ ಕೆ.ಜಿ.ಗೆ 65 ಲಕ್ಷ ರು. ನಷ್ಟ ಅನುಭವಿಸಬೇಕಾಗುತ್ತಿತ್ತು. ಲಕ್ಷಾಂತರ ವ್ಯಾಪಾರಿಗಳು ಸಾಲದ ಕೂಪದಲ್ಲಿ ಸಿಕ್ಕಿಹಾಕಿಕೊಳ್ಳಬೇಕಾಗಿತ್ತು. ಆದರೆ, ಮೋದಿ ಅವರ ಒಂದು ಕರೆ ಜ್ಯುವೆಲ್ಲರ್ಗಳು, ಸಣ್ಣ ವ್ಯಾಪಾರಿಗಳನ್ನು ಭಾರೀ ಸಾಲದ ಕೂಪದಿಂದ ಪಾರು ಮಾಡಿದೆ ಎಂದಿದ್ದಾರೆ.ಸಿಟಿಐನ ಟ್ರೇಡರ್ಗಳ ಗುಂಪಿನಲ್ಲಿ ಮೋದಿ ಅವರಿಗೆ ಕೃತಜ್ಞತಾ ಸಂದೇಶಗಳ ಮಹಾಪೂರವೇ ಹರಿದು ಬರುತ್ತಿದೆ. ಮೋದಿ ನಮ್ಮನ್ನು ಭಾರೀ ನಷ್ಟದಿಂದ ಪಾರು ಮಾಡಿದ್ದಾರೆಂದು ಹೊಗಳಿಕೆ ಬರುತ್ತಿದೆ ಎಂದಿದ್ದಾರೆ ಬ್ರಿಜೇಶ್. ಮೋದಿ ಮನವಿಯನ್ನು ಆರಂಭದಲ್ಲಿ ವಿರೋಧಿಸಿದವರೂ ಈಗ ಅದರಿಂದಾಗಿರುವ ಅನುಕೂಲ ಒಪ್ಪಿಕೊಂಡಿದ್ದಾರೆ ಎಂದು ಅವರು ಹೇಳಿಕೊಂಡಿದ್ದಾರೆ.
ಇದೇ ವೇಳೆ ಚಿನ್ನ, ಬೆಳ್ಳಿಯಂಥ ಬೆಲೆಗಳ ಕುರಿತು ನಿಯಮಿತವಾಗಿ ಮಾರ್ಗದರ್ಶನ ನೀಡುತ್ತಿರಿ ಎಂದು ಪ್ರಧಾನಿಗೆ ಮನವಿ ಮಾಡಿರುವ ಅವರು, ಇದು ಅನಗತ್ಯ ದಾಸ್ತಾನಿನಿಂದ ರಕ್ಷಿಸುತ್ತದೆ ಎಂದು ಹೇಳಿಕೊಂಡಿದ್ದಾರೆ. ಜತೆಗೆ ಸಿಐಟಿ ಮತ್ತು ಸಂಪೂರ್ಣ ಟ್ರೇಡಿಂಗ್ ಸಮುದಾಯದ ಪರ ನಾವು ಮೋದಿ ಅವರಿಗೆ ಕೃತಜ್ಞತೆ ಸಲ್ಲಿಸುತ್ತಿರುವುದಾಗಿ ಪತ್ರದಲ್ಲಿ ಬ್ರಿಜೇಶ್ ತಿಳಿಸಿದ್ದಾರೆ.==ಮದುವೆ ಸೀಸನ್ ವೇಳೆ ದರ ಇಳಿಕೆಮದುವೆ ಸೀಸನ್ ಅವಧಿಯಲ್ಲೇ ಚಿನ್ನದ ಬೆಲೆ ಇಳಿಕೆ ಆಗುತ್ತಿರುವುದು ದೇಶದ ಸಾಮಾನ್ಯ ಕುಟುಂಬಗಳಿಗೆ ನಿರಾಳತೆ ಉಂಟು ಮಾಡಿದೆ. ಸುಮಾರು 52 ಲಕ್ಷ ಮದುವೆಗಳು ಈ ಸೀಸನ್ನಲ್ಲಿ ನಡೆಯುತ್ತವೆ. ಹಳದಿ ಲೋಹದ ಬೆಲೆ ಇಳಿಕೆಯಾಗಿರುವುದು ಚಿನ್ನ ಖರೀದಿಗೆ ಯೋಚಿಸುತ್ತಿದ್ದ ಜನಸಾಮಾನ್ಯರಿಗೆ ದೊಡ್ಡ ನೆಮ್ಮದಿ ನೀಡಿದೆ ಎಂದು ಬ್ರಿಜೇಶ್ ಅಭಿಪ್ರಾಯಪಟ್ಟಿದ್ದಾರೆ.
====ಈ ವಾರ ಚಿನ್ನ, ಬೆಳ್ಳಿ ಬೆಲೆ
ಮತ್ತಷ್ಟು ಕುಸಿತ ಸಾಧ್ಯತೆ- ಅಮೆರಿಕದ ಹಣದುಬ್ಬರ, ಬಡ್ಡಿದರದ ಇಳಿಕೆ ಮೇಲೆ ಎಲ್ಲರ ನಿಗಾನವದೆಹಲಿ: ಕಳೆದ 3 ತಿಂಗಳಲ್ಲಿ 10 ಗ್ರಾಂಗೆ ಭರ್ಜರಿ 30000 ರು.ವರೆಗೆ ಇಳಿಕೆ ಕಂಡಿರುವ ಚಿನ್ನ ಮತ್ತು ಕೆಜಿಗೆ 1.50 ಲಕ್ಷ ರು.ವರೆಗೂ ಇಳಿಕೆ ಕಂಡಿರುವ ಎರಡೂ ಲೋಹಗಳ ದರ ಮುಂದಿನ ವಾರದಲ್ಲಿ ಮತ್ತಷ್ಟು ಇಳಿಯುವ ಸಾಧ್ಯತೆ ಎಂದು ಹೇಳಲಾಗಿದೆ.ಶೀಘ್ರವೇ ಅಮೆರಿಕದ ಸರ್ಕಾರ ಹಣದುಬ್ಬರದ ಅಂಕಿ ಅಂಶಗಳನ್ನು ಬಿಡುಗಡೆ ಮಾಡಲಿದೆ. ಇದನ್ನು ಆಧರಿಸಿ ಅಮೆರಿಕದ ಕೇಂದ್ರೀಯ ಬ್ಯಾಂಕ್ ತನ್ನ ಬಡ್ಡಿದರದಲ್ಲಿ ಬದಲಾವಣೆ ಮಾಡುವ ಸಾಧ್ಯತೆ ಇದೆ. ಹೀಗಾಗಿ ಹೂಡಿಕೆದಾರರು ಅಮೆರಿಕದ ಮೇಲೆ ಕಣ್ಣಿಟ್ಟಿದ್ದಾರೆ. ಮೇಲ್ಕಂಡ ಎರಡೂ ಬೆಳವಣಿಗೆ ಆಗುವವರೆಗೂ ಸದ್ಯ ಇಳಿಕೆ ಹಾದಿಯಲ್ಲಿರುವ ಚಿನ್ನ ಮತ್ತು ಬೆಳ್ಳಿಯ ದರ ಮತ್ತಷ್ಟು ಕುಸಿತ ಕಾಣುವ ಸಾಧ್ಯತೆ ಇದೆ ಎಂದು ಜೆಎಂ ಫೈನಾನ್ಷಿಯಲ್ ಸರ್ವಿಸಸ್ನ ಉಪಾಧ್ಯಕ್ಷ ಪ್ರಣವ್ ಮೇರ್ ಹೇಳಿದ್ದಾರೆ. ಕಳೆದ ಆಗಸ್ಟ್ನಿಂದ ಇಲ್ಲಿಯವರೆಗೆ ಚಿನ್ನ ಹಾಗೂ ಬೆಳ್ಳಿ ಬೆಲೆ ಹಂತ ಹಂತವಾಗಿ ಇಳಿಯುತ್ತಾ ಬಂದಿದೆ.3 ತಿಂಗಳಲ್ಲಿ 10 ಗ್ರಾಂ ಚಿನ್ನದ ಬೆಲೆ 30000 ರು.ವರೆಗೆ ಮತ್ತು ಬೆಳ್ಳಿ ದರ ಕೆಜಿಗೆ 1.50 ಲಕ್ಷ ರು.ವರೆಗೂ ಇಳಿಕೆ ಕಂಡಿದೆ.