8 ತಿಂಗಳ ಮಗುವಿನ ಡೈಪರ್‌ನಲ್ಲಿ ₹50 ಲಕ್ಷ ಚಿನ್ನ ಕಳ್ಳಸಾಗಣೆ ಯತ್ನ

Published : Sep 03, 2026, 10:41 AM IST
Gold

ಸಾರಾಂಶ

8 ತಿಂಗಳ ಹಸುಗೂಸಿನ ಡೈಪರ್‌ ಒಳಗೆ 50 ಲಕ್ಷ ರು. ಮೌಲ್ಯದ ಅರ್ಧ ಕೆ.ಜಿ. ಚಿನ್ನವನ್ನಿಟ್ಟು ಕಳ್ಳಸಾಗಣೆ ಮಾಡುತ್ತಿದ್ದ ಪ್ರಕರಣವನ್ನು ಕರಿಪುರ ವಿಮಾನ ನಿಲ್ದಾಣದಲ್ಲಿ ಕಂದಾಯ ಗುಪ್ತಚರ ನಿರ್ದೇಶನಾಲಯದ ಅಧಿಕಾರಿಗಳು ಭೇದಿಸಿದ್ದಾರೆ.

ಕಲ್ಲಿಕೋಟೆ: 8 ತಿಂಗಳ ಹಸುಗೂಸಿನ ಡೈಪರ್‌ ಒಳಗೆ 50 ಲಕ್ಷ ರು. ಮೌಲ್ಯದ ಅರ್ಧ ಕೆ.ಜಿ. ಚಿನ್ನವನ್ನಿಟ್ಟು ಕಳ್ಳಸಾಗಣೆ ಮಾಡುತ್ತಿದ್ದ ಪ್ರಕರಣವನ್ನು ಕರಿಪುರ ವಿಮಾನ ನಿಲ್ದಾಣದಲ್ಲಿ ಕಂದಾಯ ಗುಪ್ತಚರ ನಿರ್ದೇಶನಾಲಯದ ಅಧಿಕಾರಿಗಳು ಭೇದಿಸಿದ್ದಾರೆ. ಮಗುವಿನ ತಂದೆಯಿಂದ ಒಟ್ಟು 1 ಕೋಟಿ ರು. ಬೆಲೆಯ ಚಿನ್ನ ವಶಪಡಿಸಿಕೊಳ್ಳಲಾಗಿದೆ.

ಯುಎಇಯಿಂದ ತಂದೆ ಹಾಗೂ ಇನ್ನಿಬ್ಬರು ಮಕ್ಕಳೊಂದಿಗೆ ಈ ಮಗು

ಯುಎಇಯಿಂದ ತಂದೆ ಹಾಗೂ ಇನ್ನಿಬ್ಬರು ಮಕ್ಕಳೊಂದಿಗೆ ಈ ಮಗು ಬಂದಿತ್ತು. ಚಿನ್ನ ಕಳ್ಳಸಾಗಣೆಯಾಗುತ್ತಿರುವ ಬಗ್ಗೆ ಮಾಹಿತಿ ಸಿಕ್ಕ ಹಿನ್ನೆಲೆಯಲ್ಲಿ ಅಧಿಕಾರಿಗಳು ಮಲಪ್ಪುರಂ ಮೂಲದ ಈ ಪರಿವಾರದ ವಿಚಾರಣೆ ನಡೆಸಿದ್ದಾರೆ. ಈ ವೇಳೆ ಡೈಪರ್‌ನಲ್ಲಿ ಹಾಗೂ ತನ್ನ ದೇಹದಲ್ಲಿ ಅಡಗಿಸಿಟ್ಟಿದ್ದ ಚಿನ್ನದ ಬಗ್ಗೆ ಮಗುವಿನ ತಂದೆ ಬಾಯ್ಬಿಟ್ಟಿದ್ದಾನೆ.

ವಶಪಡಿಸಿಕೊಂಡಿರುವ ಅಧಿಕಾರಿಗಳು

ಅದನ್ನು ವಶಪಡಿಸಿಕೊಂಡಿರುವ ಅಧಿಕಾರಿಗಳು, ಇದರ ಹಿಂದಿರುವ ಕೈಗಳ ಪತ್ತೆಗಿಳಿದಿದ್ದಾರೆ. ಜತೆಗೆ, ಇಂತಹ ಕೃತ್ಯಕ್ಕೆ ಮಗುವನ್ನು ಮುಂಚೆಯೂ ಬಳಸಿಕೊಳ್ಳಲಾಗಿತ್ತೇ ಎಂಬ ಬಗ್ಗೆಯೂ ತನಿಖೆ ನಡೆದಿದೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.
Read more Articles on

Recommended Stories

‘ಆಪರೇಷನ್‌ ಸಿಂದೂರ’ ವೀರ ಜೀತೇಂದ್ರ ಅಯೋಧ್ಯೆ ರಾಮಮಂದಿರ ಮೊದಲ ಸಿಇಒ
ಪುತ್ರಿ ಶುಲ್ಕ ಭರಿಸಲು ಬರಿಗಾಲಲ್ಲೇಮ್ಯಾರಾಥಾನ್‌ ಓಡಿ ಗೆದ್ದ ಮಹಿಳೆ!