ತಾಯಿ ತನ್ನ ಮಕ್ಕಳಿಗಾಗಿ ಯಾವ ರೀತಿ ತ್ಯಾಗಕ್ಕೆ ಬೇಕಿದ್ದರೂ ಸಿದ್ಧಳಾಗುತ್ತಾಳೆ ಎನ್ನುವುದಕ್ಕೆ ಈ ಅಮ್ಮನೇ ಸಾಕ್ಷಿ. ಮಹಾರಾಷ್ಟ್ರದ ಬೀಡ್ ಜಿಲ್ಲೆಯಲ್ಲಿ 47 ವರ್ಷದ ತಾಯಿ ರಮಾಬಾಯಿ ರಣವೀರ್ ಅವರು ತನ್ನ ಮಗಳ ಶಾಲಾ ಶುಲ್ಕಕ್ಕಾಗಿ ಸೀರೆಯುಟ್ಟು, ಬರಿಗಾಲಿನಲ್ಲಿಯೇ ಮ್ಯಾರಾಥಾನ್ ಓಡಿ ಗೆದ್ದಿದ್ದಾರೆ.
ಸೀರೆಯಲ್ಲೇ ರನ್ ಮಾಡಿದ 47 ವರ್ಷದ ಮಹಾ ಮಹಿಳೆಬೀಡ್: ತಾಯಿ ತನ್ನ ಮಕ್ಕಳಿಗಾಗಿ ಯಾವ ರೀತಿ ತ್ಯಾಗಕ್ಕೆ ಬೇಕಿದ್ದರೂ ಸಿದ್ಧಳಾಗುತ್ತಾಳೆ ಎನ್ನುವುದಕ್ಕೆ ಈ ಅಮ್ಮನೇ ಸಾಕ್ಷಿ. ಮಹಾರಾಷ್ಟ್ರದ ಬೀಡ್ ಜಿಲ್ಲೆಯಲ್ಲಿ 47 ವರ್ಷದ ತಾಯಿ ರಮಾಬಾಯಿ ರಣವೀರ್ ಅವರು ತನ್ನ ಮಗಳ ಶಾಲಾ ಶುಲ್ಕಕ್ಕಾಗಿ ಸೀರೆಯುಟ್ಟು, ಬರಿಗಾಲಿನಲ್ಲಿಯೇ ಮ್ಯಾರಾಥಾನ್ ಓಡಿ ಗೆದ್ದಿದ್ದಾರೆ.
ಜಿಲ್ಲೆಯ ಅಂಬಾಜೋಗೈನಲ್ಲಿ ಸಂಸ್ಥೆಯೊಂದರ ಅಮೃತಮಹೋತ್ಸವದ ಸವಿ ನೆನಪಿಗಾಗಿ ಅಮೃತ್ ದೌಡ್ ಎನ್ನುವ ಮ್ಯಾರಾಥಾನ್ ಹಮ್ಮಿಕೊಳ್ಳಲಾಗಿತ್ತು. ಇದರಲ್ಲಿ ಸಾಕಷ್ಟು ಯುವ ಓಟಗಾರರು ಭಾಗವಹಿಸಿದ್ದರು. ಅದರಲ್ಲಿ 47 ವರ್ಷದ ರಮಾ ಅವರು ಓಟಕ್ಕೆ ಸಿದ್ಧರಾಗಿದ್ದರು. ರಮಾ ಸೀರೆ ಹಾಗೂ ಚಪ್ಪಲಿ ಧರಿಸಿ ಓಡುವುದಕ್ಕೆ ಪ್ರಾರಂಭಿಸಿದರು. ಆದರೆ ಮಾರ್ಗ ಮಧ್ಯದಲ್ಲಿ ಚಪ್ಪಲಿಗಳು ಜಾರುವುದಕ್ಕೆ ಪ್ರಾರಂಭಿಸಿತ್ತು. ಈ ಸಂದರ್ಭದಲ್ಲಿ ಆಕೆ ಚಪ್ಪಲಿ ಕಳಚಿಟ್ಟು ಬರಿಗಾಲಿನಲ್ಲಿಯೇ ಓಡುವುದಕ್ಕೆ ಪ್ರಾರಂಭಿಸಿ ಇತರ ಸ್ಪರ್ಧಿಗಳನ್ನೆಲ್ಲ ಸೋಲಿಸಿ ಮೊದಲು ಗುರಿ ಮುಟ್ಟುವ ಮೂಲಕ ಪ್ರಶಸ್ತಿ ಗೆದ್ದರು. ಇದು ಅಲ್ಲಿದ್ದವರಿಗೂ ಸಹ ಭಾವನಾತ್ಮಕ ಕ್ಷಣಕ್ಕೆ ಸಾಕ್ಷಿಯಾಗಿತ್ತು.
ಈ ಮ್ಯಾರಾಥಾನ್‌ನಲ್ಲಿ ಗೆದ್ದಿದ್ದಕ್ಕೆ ಅವರಿಗೆ ಬಹುಮಾನ ರೂಪವಾಗಿ 3000 ರು. ನಗದು ನೀಡಲಾಯಿತು,.ಇದನ್ನು ಖುಷಿಯಿಂದ ಸ್ವೀಕರಿಸಿದ ರಮಾಬಾಯಿ ಅವರು ‘ಮಗಳ ಶಿಕ್ಷಣಕ್ಕೆ ಬಳಸುತ್ತೇನೆ’ ಎಂದು ಆಸೆ ವ್ಯಕ್ತಪಡಿಸಿದ್ದಾರೆ.
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.