ಮಹಿಳೆಯರು ಮನೆಯಿಂದ ಹೊರಬರಬಾರದು: ಇಸ್ಲಾಂ ಧರ್ಮಗುರು

KannadaprabhaNewsNetwork |  
Published : Sep 01, 2026, 04:30 AM IST
Kerala

ಸಾರಾಂಶ

‘ಮಹಿಳೆಯರು ಮನೆಯಲ್ಲೇ ಇರಬೇಕು. ಅವರು ಸಾರ್ವಜನಿಕ ಜೀವನವನ್ನು ಪ್ರವೇಶಿಸುವುದು ಪವಿತ್ರ ಕುರಾನ್‌ ಪ್ರಕಾರ ನಿಷಿದ್ಧ’ ಎಂದು ಕೇರಳದ ಪ್ರಸಿದ್ಧ ಮುಸ್ಲಿಂ ಧರ್ಮಗುರು ಕಾಂತಪುರಂ ಎ.ಪಿ. ಅಬೂಬಕ್ಕರ್‌ ಮುಸ್ಲಿಯಾರ್‌ ಹೇಳಿದ್ದಾರೆ. ಇದು ತೀವ್ರ ವಿವಾದಕ್ಕೆ ಕಾರಣವಾಗಿದೆ.

ಕೊಚ್ಚಿ: ‘ಮಹಿಳೆಯರು ಮನೆಯಲ್ಲೇ ಇರಬೇಕು. ಅವರು ಸಾರ್ವಜನಿಕ ಜೀವನವನ್ನು ಪ್ರವೇಶಿಸುವುದು ಪವಿತ್ರ ಕುರಾನ್‌ ಪ್ರಕಾರ ನಿಷಿದ್ಧ’ ಎಂದು ಕೇರಳದ ಪ್ರಸಿದ್ಧ ಮುಸ್ಲಿಂ ಧರ್ಮಗುರು ಕಾಂತಪುರಂ ಎ.ಪಿ. ಅಬೂಬಕ್ಕರ್‌ ಮುಸ್ಲಿಯಾರ್‌ ಹೇಳಿದ್ದಾರೆ. ಇದು ತೀವ್ರ ವಿವಾದಕ್ಕೆ ಕಾರಣವಾಗಿದೆ.

ಕೊಚ್ಚಿಯಲ್ಲಿ ನಡೆದ ಇಸ್ಲಾಮಿಕ್‌ ಸಮ್ಮೇಳನ

ಕೊಚ್ಚಿಯಲ್ಲಿ ನಡೆದ ಇಸ್ಲಾಮಿಕ್‌ ಸಮ್ಮೇಳನವೊಂದರಲ್ಲಿ ಮಾತನಾಡಿದ ಅವರು, ‘ಸ್ತ್ರೀಯರು ತಮ್ಮ ಮನೆಗೆ ಸೀಮಿತವಾಗಿರಬೇಕು. ಅವರ ಸಾರ್ವಜನಿಕ ಜೀವನಕ್ಕೆ ಬರಬಾರದು ಎಂದು ಕುರಾನ್‌ ಹೇಳುತ್ತದೆ. ಈ ನಿಯಮ ಮಹಿಳೆಯರನ್ನು ಹತ್ತಿಕ್ಕುವ ಸಲುವಾಗಿ ಇರುವುದಲ್ಲ, ಬದಲಾಗಿ ಅವರ ಗೌರವ ಮತ್ತು ರಕ್ಷಣೆಗಾಗಿ ಇದೆ.

ಸಾರ್ವಜನಿಕ ಜೀವನಕ್ಕೆ ಮಹಿಳೆಯರನ್ನು ತರುವುದು ಮಹಾನ್ ವಿನಾಶಕ್ಕೆ ಕಾರಣ

ಸಾರ್ವಜನಿಕ ಜೀವನಕ್ಕೆ ಮಹಿಳೆಯರನ್ನು ತರುವುದು ಮಹಾನ್ ವಿನಾಶಕ್ಕೆ ಕಾರಣವಾಗುತ್ತದೆ. ಸ್ತ್ರೀಯರು ನೆಕ್ಲೇಸ್‌ ಇದ್ದಂತೆ. ನೆಕ್ಲೇಸ್‌ ತನ್ನ ಸೌಂದರ್ಯವನ್ನು ಉಳಿಸಿಕೊಳ್ಳಬೇಕಾದರೆ, ಅದನ್ನು ಪೆಟ್ಟಿಗೆಯೊಳಗೆ ಸುರಕ್ಷಿತವಾಗಿ ಇಡಬೇಕು’ ಎಂದಿದ್ದಾರೆ. ಕಾಂತಪುರಂ ಹೇಳಿಕೆಗೆ ಸಿಪಿಎಂ ನಾಯಕಿ ಹಾಗೂ ಅಖಿಲ ಭಾರತ ಜನತಾಂತ್ರಿಕ ಮಹಿಳಾ ಸಂಘದ ಸದಸ್ಯೆ ಪಿ.ಕೆ. ಶ್ರೀಮತಿ ಕಿಡಿ ಕಾರಿದ್ದಾರೆ. ‘ಮತ್ತೊಮ್ಮೆ ಮಹಿಳಾ ದ್ವೇಷವನ್ನು ಕಾರಲಾಗುತ್ತಿದೆ. ಇಂತಹ ಹೇಳಿಕೆಗಳನ್ನು ಕೇವಲ ಮುಪ್ಪಿನ ಬಡಬಡಿಕೆ ಎಂದು ತಳ್ಳಿಹಾಕಿದರೆ, ಇತಿಹಾಸವು ಆಧುನಿಕ ಕೇರಳವನ್ನು ಕ್ಷಮಿಸುವುದಿಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.
Read more Articles on

Recommended Stories

ಸ್ಥಳೀಯ ಭಾಷೆ ಬಂದವರಿಗಷ್ಟೇ ಹುದ್ದೆ: ಕನ್ನಡಿಗರ ಹೋರಾಟಕ್ಕೆ ಬಿಒಬಿ ಮಣೆ
ಇರಾನ್‌ ಮೇಲೆ ಅಮೆರಿಕ ದಾಳಿ : ಹೋರ್ಮುಜ್‌ ಮತ್ತೆ ಉದ್ವಿಗ್ನ