ಹೋರ್ಮುಜ್‌ ಜಲಸಂಧಿಯಲ್ಲಿ ಅಮೆರಿಕ ಮತ್ತು ಇರಾನ್‌ ನಡುವಿನ ಸಂಘರ್ಷ ಮತ್ತೆ ತೀವ್ರಗೊಂಡಿದ್ದು, ಇರಾನ್‌ನ ರಾಕೆಟ್‌ ಲಾಂಚರ್‌ಗಳನ್ನು ಗುರಿಯಾಗಿಸಿಕೊಂಡು ಅಮೆರಿಕ ಭಾನುವಾರ ದಾಳಿ ನಡೆಸಿದೆ. ಈ ಮೂಲಕ ಕಳೆದ 1 ತಿಂಗಳಿನಿಂದ ಕಾಯ್ದುಕೊಂಡಿದ್ದ ತಾತ್ಕಾಲಿಕ ಶಾಂತಿಗೆ ತೆರೆ ಬಿದ್ದಿದೆ.

-ಒಂದು ತಿಂಗಳ ತಾತ್ಕಾಲಿಕ ಶಾಂತಿಗೆ ತೆರೆ

-ಗಲ್ಫ್‌ ದೇಶಗಳ ಮೇಲೆ ಇರಾನ್‌ ಪ್ರತಿದಾಳಿ ವಾಷಿಂಗ್ಟನ್/ಟೆಹ್ರಾನ್‌: ಹೋರ್ಮುಜ್‌ ಜಲಸಂಧಿಯಲ್ಲಿ ಅಮೆರಿಕ ಮತ್ತು ಇರಾನ್‌ ನಡುವಿನ ಸಂಘರ್ಷ ಮತ್ತೆ ತೀವ್ರಗೊಂಡಿದ್ದು, ಇರಾನ್‌ನ ರಾಕೆಟ್‌ ಲಾಂಚರ್‌ಗಳನ್ನು ಗುರಿಯಾಗಿಸಿಕೊಂಡು ಅಮೆರಿಕ ಭಾನುವಾರ ದಾಳಿ ನಡೆಸಿದೆ. ಈ ಮೂಲಕ ಕಳೆದ 1 ತಿಂಗಳಿನಿಂದ ಕಾಯ್ದುಕೊಂಡಿದ್ದ ತಾತ್ಕಾಲಿಕ ಶಾಂತಿಗೆ ತೆರೆ ಬಿದ್ದಿದೆ.

ಹೋರ್ಮುಜ್‌ನ ಅಂತಾರಾಷ್ಟ್ರೀಯ ಹಡಗು ಮಾರ್ಗದಲ್ಲಿ ಸಮುದ್ರ ಸ್ಫೋಟಕಗಳನ್ನು ನಿಯೋಜಿಸಲು ಸಿದ್ಧತೆ ನಡೆಸುತ್ತಿದ್ದ ಇರಾನ್‌ನ ರೆವಲ್ಯೂಷನರಿ ಗಾರ್ಡ್ಸ್‌ ಕೋರ್‌ನ ರಾಕೆಟ್‌ ಲಾಂಚರ್‌ಗಳ ಮೇಲೆ ಅಮೆರಿಕ ಪಡೆಗಳು ಬೃಹತ್‌ ವೈಮಾನಿಕ ದಾಳಿ ನಡೆಸಿವೆ. ಇರಾನ್‌ನ ಲಾರಾಕ್‌ ದ್ವೀಪದ ಬಳಿಯೂ ಪ್ರಬಲ ಸ್ಫೋಟಗಳು ಸಂಭವಿಸಿದ್ದು, ಹಲವು ಯೋಧರು ಮೃತಪಟ್ಟಿದ್ದಾರೆ ಹಾಗೂ ಹಲವರು ಗಾಯಗೊಂಡಿದ್ದಾರೆ.

ಗಲ್ಫ್ ಮೇಲೆ ಪ್ರತೀಕಾರದ ದಾಳಿ:ಅಮೆರಿಕ ತನ್ನ ಈ ಕೃತ್ಯಕ್ಕೆ ಭಾರಿ ಬೆಲೆ ತೆರಬೇಕಾಗುತ್ತದೆ ಎಂದು ಎಚ್ಚರಿಸಿರುವ ಇರಾನ್, ಪ್ರತೀಕಾರವಾಗಿ ಗಲ್ಫ್‌ ದೇಶ ಜೋರ್ಡಾನ್‌ನಲ್ಲಿರುವ ಅಮೆರಿಕ ಸೇನಾ ನೆಲೆಗಳ ಮೇಲೆ ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ಉಡಾಯಿಸಿದೆ. ಆದರೆ ತನ್ನ ವಾಯುಪ್ರದೇಶವನ್ನು ಪ್ರವೇಶಿಸಿದ ಇರಾನ್‌ನ 8 ಕ್ಷಿಪಣಿಗಳನ್ನು ಜೋರ್ಡಾನ್ ಸೇನೆ ಯಶಸ್ವಿಯಾಗಿ ಹೊಡೆದುರುಳಿಸಿದೆ. ಇದರ ಬೆನ್ನಲ್ಲೇ ಯುಎಇ ವಾಯುಪ್ರದೇಶದಲ್ಲೂ ಆತಂಕದ ವಾತಾವರಣ ನಿರ್ಮಾಣವಾಗಿದೆ. ಯುಎಇ ಜಲಪ್ರದೇಶದ ಕಡೆಗೆ ನುಗ್ಗಲು ಯತ್ನಿಸಿದ ಇರಾನ್‌ನ ಡ್ರೋನ್ ಒಂದನ್ನು ಯುಎಇ ವಾಯುಪಡೆಯು ಆಕಾಶದಲ್ಲೇ ಹೊಡೆದುರುಳಿಸಿದೆ.