ಸರ್ಕಾರಿ ಶಾಲೆ, ಕಾಲೇಜಲ್ಲಿ ಎಐ ಹಾಜರಾತಿ ಕಡ್ಡಾಯ!

KannadaprabhaNewsNetwork |  
Published : Feb 17, 2026, 02:00 AM ISTUpdated : Feb 17, 2026, 04:34 AM IST
AI

ಸಾರಾಂಶ

ರಾಜ್ಯದ ಸರ್ಕಾರಿ ಹಾಗೂ ಅನುದಾನಿತ ಶಾಲೆ ಹಾಗೂ ಪಿಯು ಕಾಲೇಜುಗಳ ವಿದ್ಯಾರ್ಥಿಗಳಿಗೆ ಕೃತಕ ಬುದ್ದಿಮತ್ತೆ (ಎಐ) ಆಧಾರಿತ ಮುಖ ಗುರುತಿನ ಹಾಜರಾತಿ ವ್ಯವಸ್ಥೆಯನ್ನು 2026-27ನೇ ಸಾಲಿನ ಆರಂಭದಿಂದಲೇ ಕಡ್ಡಾಯವಾಗಿ ಅನುಷ್ಠಾನಗೊಳಿಸಲು ಶಿಕ್ಷಣ ಇಲಾಖೆಗೆ ಸರ್ಕಾರ ಅನುಮೋದನೆ ನೀಡಿ ಆದೇಶಿಸಿದೆ.

 ಬೆಂಗಳೂರು :  ರಾಜ್ಯದ ಸರ್ಕಾರಿ ಹಾಗೂ ಅನುದಾನಿತ ಶಾಲೆ ಹಾಗೂ ಪಿಯು ಕಾಲೇಜುಗಳ ವಿದ್ಯಾರ್ಥಿಗಳಿಗೆ ಕೃತಕ ಬುದ್ದಿಮತ್ತೆ (ಎಐ) ಆಧಾರಿತ ಮುಖ ಗುರುತಿನ ಹಾಜರಾತಿ ವ್ಯವಸ್ಥೆಯನ್ನು 2026-27ನೇ ಸಾಲಿನ ಆರಂಭದಿಂದಲೇ ಕಡ್ಡಾಯವಾಗಿ ಅನುಷ್ಠಾನಗೊಳಿಸಲು ಶಿಕ್ಷಣ ಇಲಾಖೆಗೆ ಸರ್ಕಾರ ಅನುಮೋದನೆ ನೀಡಿ ಆದೇಶಿಸಿದೆ.

ಶಿಕ್ಷಕರ ಡಿಜಿಟಲ್ ಹಾಜರಾತಿಗೆ ಈಗಾಗಲೇ ಆದೇಶ

ಶಿಕ್ಷಕರ ಡಿಜಿಟಲ್ ಹಾಜರಾತಿಗೆ ಈಗಾಗಲೇ ಆದೇಶ ಮಾಡಲಾಗಿದ್ದು, ಅದನ್ನು ಸಮರ್ಪಕವಾಗಿ ಈ ಸಾಲಿನಿಂದಲೇ ಜಾರಿಗೊಳಿಸಬೇಕು. ಬರುವ ಶೈಕ್ಷಣಿಕ ಸಾಲಿನಿಂದ ವಿದ್ಯಾರ್ಥಿಗಳಿಗೂ ಎಐ ಆಧಾರಿತ ಡಿಜಿಟಲ್ ಹಾಜರಾತಿ ಪ್ರಕ್ರಿಯೆ ಅನುಷ್ಠಾನಗೊಳಿಸಬೇಕೆಂದು ಸೂಚಿಸಿದೆ.

ಇ ಆಡಳಿತ ಇಲಾಖೆ 2.16 ಕೋಟಿ ರು. ವೆಚ್ಚದಲ್ಲಿ ಅಭಿವೃದ್ಧಿ ಪಡಿಸಿರುವ ‘ಕೃತಕ ಬುದ್ಧಿಮತ್ತೆ ಆಧಾರಿತ ವಿದ್ಯಾರ್ಥಿಗಳ ಮುಖ ಚಹರೆ ಮೇಲ್ವಿಚಾರಣೆ ವ್ಯವಸ್ಥೆ’ ಯನ್ನು ಮುಂದಿನ ಶೈಕ್ಷಣಿಕ ವರ್ಷದ (2026-27) ಆರಂಭದಿಂದಲೇ ಸರ್ಕಾರಿ ಮತ್ತು ಅನುದಾನಿತ ಶಾಲಾ ಕಾಲೇಜುಗಳಲ್ಲಿ ಜಾರಿಗೊಳಿಸಬೇಕು. ಈ ವ್ಯವಸ್ಥೆಯನ್ನು ಮುಂದಿನ ಮೇ ತಿಂಗಳೊಳಗೆ ಅಭಿವೃದ್ಧಿ ಪಡಿಸಿ, ಅನುಷ್ಠಾನಗೊಳಿಸಲು ಇ-ಆಡಳಿತ ಕೇಂದ್ರ ಕ್ರಮ ವಹಿಸಬೇಕು.  

ಹಾಜರಾತಿ ತಪ್ಪದಂತೆ ಸೆರೆ ಹಿಡಿಯಲು ತಂತ್ರಜ್ಞಾನ

ಎಲ್ಲ ರೀತಿಯ ಪರಿಸರದಲ್ಲಿ (ಕಡಿಮೆ ಬೆಳಕು ಇರುವ ಸ್ಥಳ) ಯಾವುದೇ ವಿದ್ಯಾರ್ಥಿಯ ಹಾಜರಾತಿ ತಪ್ಪದಂತೆ ಸೆರೆ ಹಿಡಿಯಲು ತಂತ್ರಜ್ಞಾನ ಅಭಿವೃದ್ಧಿ ಪಡಿಸಬೇಕು. ವಿದ್ಯಾರ್ಥಿಗಳ ನೋಂದಣಿಯನ್ನು ಸ್ಯಾಟ್ಸ್ ಜೊತೆ ತಾಳೆ ನೋಡಬೇಕು. ಶಾಲಾ ಕಾಲೇಜಿಗೆ ಗೈರಾಗುವ ವಿದ್ಯಾರ್ಥಿಗಳನ್ನು ಟ್ರ್ಯಾಕ್ ಮಾಡಲು ಮತ್ತು ವಿದ್ಯಾರ್ಥಿಗಳು ಶಾಲೆಯಿಂದ ಹೊರಗುಳಿಯದಂತೆ ಈ ತಂತ್ರಾಂಶ ಬಳಸಿ ಕ್ರಮ ವಹಿಸಬೇಕು. ದಿನನಿತ್ಯದ ಹಾಜರಾತಿ ಸ್ಯಾಟ್ಸ್ ತಂತ್ರಾಂಶದ ಮೂಲಕ ಸಾರ್ವಜನಿಕರಿಗೆ ಲಭ್ಯವಾಗಬೇಕು. ಅಧಿಕಾರಿ, ಸಿಬ್ಬಂದಿಗೆ ನೀಡಬೇಕಾದ ತರಬೇತಿ ಪ್ರಕ್ರಿಯೆಗಳನ್ನು ಮೇ ತಿಂಗಳೊಳಗೆ ಮುಕ್ತಾಯಗೊಳಿಸಬೇಕು’ ಎಂದು ಸೂಚಿಸಲಾಗಿದೆ.

- ಈ ಹಿಂದೆ ಶಿಕ್ಷಕರಿಗೆ ಎಐ ಹಾಜರಾತಿಗೆ ಆದೇಶ ನೀಡಲಾಗಿತ್ತು

- 2026-27ನೇ ಸಾಲಿನಿಂದ ಇದು ವಿದ್ಯಾರ್ಥಿಗಳಿಗೂ ಅನ್ವಯ

- ಶಾಲೆಗಳಲ್ಲಿ ಮುಖ ಚಹರೆ ಮೇಲ್ವಿಚಾರಣೆ ವ್ಯವಸ್ಥೆ ಅಳವಡಿಸಿ

- ಶಿಕ್ಷಣ ಇಲಾಖೆ ಪ್ರಸ್ತಾವಕ್ಕೆ ರಾಜ್ಯ ಸರ್ಕಾರ ಅಸ್ತು, ಆದೇಶ

- ₹2.16 ಕೋಟಿ ವೆಚ್ಚದಲ್ಲಿ ಎಐ ಹಾಜರಾತಿ ವ್ಯವಸ್ಥೆ ಅಭಿವೃದ್ಧಿ

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.
Read more Articles on

Recommended Stories

ಬಾಗೇಪಲ್ಲಿ ಕಾಂಗ್ರೆಸ್‌ಶಾಸಕ ಸುಬ್ಬಾರೆಡ್ಡಿ ಆಯ್ಕೆಯೇ ಅಸಿಂಧು!
20 ಕಾಂಗ್ರೆಸ್‌ ಶಾಸಕರು ಇಂದು ವಿದೇಶಕ್ಕೆ