ಜು.14ಕ್ಕೆ ಶುಭಾಂಶು ಭೂಮಿಗೆ ಮರಳುವ ಸಾಧ್ಯತೆ

KannadaprabhaNewsNetwork |  
Published : Jul 11, 2025, 01:47 AM ISTUpdated : Jul 11, 2025, 05:01 AM IST
ಶುಭಾಂಶು ಶುಕ್ಲಾ  | Kannada Prabha

ಸಾರಾಂಶ

ಆಕ್ಸಿಯೋಂ-4 ಮಿಷನ್ ಭಾಗವಾಗಿ ಅಂತಾರಾಷ್ಟ್ರೀಯ ಬಾಹ್ಯಾಕಾಶ ಸಂಸ್ಥೆ(ಐಎಸ್‌ಎಸ್‌)ಗೆ ತೆರಳಿರುವ ಭಾರತೀಯ ಶುಭಾಂಶು ಶುಕ್ಲಾ ಸೇರಿ 4 ಗಗನಯಾತ್ರಿಗಳು ಜು.14ರಂದು ಭೂಮಿಗೆ ಮರಳುವ ಸಾಧ್ಯತೆ ಇದೆ ಎಂದು ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾ  ಮಾಹಿತಿ ನೀಡಿದೆ.

 ನವದೆಹಲಿ: ಆಕ್ಸಿಯೋಂ-4 ಮಿಷನ್ ಭಾಗವಾಗಿ ಅಂತಾರಾಷ್ಟ್ರೀಯ ಬಾಹ್ಯಾಕಾಶ ಸಂಸ್ಥೆ(ಐಎಸ್‌ಎಸ್‌)ಗೆ ತೆರಳಿರುವ ಭಾರತೀಯ ಶುಭಾಂಶು ಶುಕ್ಲಾ ಸೇರಿ 4 ಗಗನಯಾತ್ರಿಗಳು ಜು.14ರಂದು ಭೂಮಿಗೆ ಮರಳುವ ಸಾಧ್ಯತೆ ಇದೆ ಎಂದು ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾ ಗುರುವಾರ ಮಾಹಿತಿ ನೀಡಿದೆ.

ಈ ಕುರಿತು ಹೇಳಿಕೆ ನೀಡಿರುವ ನಾಸಾ ‘ಐಎಸ್‌ಎಸ್‌ನ ಬೆಳವಣಿಗೆಯನ್ನು ನಾವು ಗಮನಿಸುತ್ತಿದ್ದೇವೆ. ಜು.14ರಂದು ಅನ್‌ಡಾಕಿಂಗ್‌ಗೆ ನಾವು ದಿನಾಂಕ ನಿಗದಿ ಮಾಡಿದ್ದೇವೆ’ ಎಂದು ಹೇಳಿದೆ. ಈ ಹಿಂದಿನ ಯೋಜನೆಯಂತೆ14 ದಿನಗಳ ಬಳಿಕ, ಅಂದರೆ ಜು.10ರಂದು ಅವರು ಮರಳಬೇಕಿತ್ತು. ಆದರೆ ಹವಾಮಾನ ವೈಪರೀತ್ಯ ಹಿನ್ನೆಲೆಯಲ್ಲಿ ಮರಳುವಿಕೆ ಪ್ರಕ್ರಿಯೆ ಮುಂದೂಡಲಾಗಿತ್ತು.

230 ಸೂರ್ಯೋದಯಕ್ಕೆ ಸಾಕ್ಷಿ:

ಜು.26ರಂದು ಐಎಸ್‌ಎಸ್‌ ತಲುಪಿರುವ ಗಗನಯಾತ್ರಿಗಳು 2 ವಾರದಲ್ಲಿ ಬಾಹ್ಯಾಕಾಶದಲ್ಲಿ ಸುಮಾರು 100 ಲಕ್ಷ ಕಿ.ಮೀ. ಪ್ರಯಾಣಿಸಿ, ಬರೋಬ್ಬರಿ 230 ಸೂರ್ಯೋದಯಗಳನ್ನು ಕಂಡಿದ್ದಾರೆ. ಇದರರ್ಥ, ಭೂಮಿಯಿಂದ 250 ಮೈಲು ಮೇಲಿರುವ ಅವರು, ಈವರೆಗೆ 230 ಬಾರಿ ಭೂಮಿಗೆ ಪ್ರದಕ್ಷಿಣೆ ಹಾಕಿದ್ದಾರೆ. ಇದರ ಅದ್ಭುತ ಫೋಟೋ, ವಿಡಿಯೋಗಳನ್ನೂ ಸೆರೆಹಿಡಿದು, ಹಂಚಿಕೊಂಡಿದ್ದಾರೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.
Read more Articles on

Recommended Stories

ವಿಷ್ಣು ಆಚಾರಿ ಸೇರಿ ಹಲವರಿಗೆ ಯಕ್ಷಗಾನ ಅಕಾಡೆಮಿ ಪ್ರಶಸ್ತಿ
ದೆಹಲಿ ರಕ್ಷಣೆಗೆ ಸ್ವದೇಶಿ ಕ್ಷಿಪಣಿ ವ್ಯವಸ್ಥೆ