ಅಯೋಧ್ಯೆ: ಇಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಭವ್ಯ ರಾಮಮಂದಿರಕ್ಕೆ ಹಲವು ಉದ್ಯಮಿಗಳು ಭಾರೀ ಪ್ರಮಾಣದ ಚಿನ್ನವನ್ನು ಉಡುಗೊರೆಯಾಗಿ ನೀಡಿದ್ದಾರೆ.
ಗುಜರಾತ್‌ನ ಸೂರತ್‌ನಲ್ಲಿ ಅತಿದೊಡ್ಡ ವಜ್ರದ ವ್ಯಾಪಾರಿ ಕುಟುಂಬವಾಗಿರುವ ದಿಲೀಪ್ ಕುಮಾರ್. ವಿ ಲೇಖಿ ಅವರು ರಾಮಮಂದಿರಕ್ಕೆ 101 ಕೇಜಿ ಚಿನ್ನವನ್ನು ದಾನವಾಗಿ ನೀಡಿದ್ದಾರೆ.
ಇದನ್ನು ದೇಗುಲದ ಬಾಗಿಲುಗಳಿಗೆ, ಗರ್ಭಗೃಹಕ್ಕೆ, ತ್ರಿಶೂಲ, ಡಮರು ಹಾಗೂ ಮಂದಿರದ ಕಂಬಗಳಿಗೆ ಲೇಪನ ಮಾಡಲು ಬಳಕೆ ಮಾಡಲಾಗಿದೆ.
ಇದು ರಾಮಮಂದಿರಕ್ಕೆ ನೀಡಲಾದ ಅತಿದೊಡ್ಡ ಕೊಡುಗೆಯೂ ಸಹ ಆಗಿದೆ. ವಸ್ಥಾನದ ನೆಲಮಹಡಿಯಲ್ಲಿ 14 ಚಿನ್ನದ ಬಾಗಿಲುಗಳನ್ನು ಅಳವಡಿಸಲಾಗಿದೆ.
ರಿಲಯನ್ಸ್ ಇಂಡಸ್ಟ್ರೀಸ್‌ನ ಮುಖ್ಯಸ್ಥ ಮುಕೇಶ್ ಅಂಬಾನಿ ಅವರ ಕುಟುಂಬ ರಾಮಮಂದಿರಕ್ಕೆ 33 ಕೇಜಿ ಚಿನ್ನ ಹಾಗೂ 3 ಚಿನ್ನದ ಕಿರೀಟಗಳನ್ನು ದಾನವಾಗಿ ನೀಡಿದೆ ಎನ್ನಲಾಗಿದೆ.
ಇದಲ್ಲದೇ ಸೂರತ್‌ನ ಮತ್ತೊಬ್ಬ ವಜ್ರದ ವ್ಯಾಪಾರಿ ಬರೋಬ್ಬರಿ 11 ಕೋಟಿ ರು. ಬೆಲೆ ಬಾಳುವ ಚಿನ್ನದ ಕಿರೀಟವನ್ನು ದಾನವಾಗಿ ನೀಡಿದ್ದಾರೆ. 6 ಕೇಜಿ ತೂಕವಿರುವ ಈ ಕಿರೀಟದಲ್ಲಿ 4.5 ಕೇಜಿಯಷ್ಟು ಚಿನ್ನವಿದ್ದು, ವಜ್ರ ಮತ್ತು ರತ್ನಗಳಿಂದ ಅಲಂಕಾರ ಮಾಡಲಾಗಿದೆ. ಮತ್ತೊಬ್ಬ ದಾನಿ 16.3 ಕೋಟಿ ರು.ಗಳನ್ನು ದಾನವಾಗಿ ನೀಡಿದ್ದಾರೆ.