ಹತ್ಯೆಯಾದ ಎನ್‌ಸಿಪಿ ನಾಯಕ ಬಾಬಾ ಸಿದ್ದಿಕಿಗೆ ದಾವೂದ್‌ ಇಬ್ರಾಹಿಂ ಜೊತೆ ನಂಟಿತ್ತು: ಬಿಷ್ಣೋಯಿ ಗ್ಯಾಂಗ್‌

KannadaprabhaNewsNetwork |  
Published : Oct 20, 2024, 01:45 AM ISTUpdated : Oct 20, 2024, 05:14 AM IST
Baba Siddiqui

ಸಾರಾಂಶ

‘ಇತ್ತೀಚೆಗೆ ಹತ್ಯೆಯಾದ ಎನ್‌ಸಿಪಿ ನಾಯಕ ಬಾಬಾ ಸಿದ್ದಿಕಿ ಒಳ್ಳೆಯ ಮನುಷ್ಯನಾಗಿರದೆ, ಭೂಗತ ಪಾತಕಿ ದಾವೂದ್‌ ಇಬ್ರಾಹಿಂ ಜೊತೆ ನಂಟು ಹೊಂದಿದ್ದರು. ಹೀಗಾಗಿ ಆವರನ್ನು ಕೊಂದೆವು’ ಗ್ಯಾಂಗ್‌ಸ್ಟರ್‌ ಲಾರೆನ್ಸ್‌ ಬಿಷ್ಣೋಯಿ ಗ್ಯಾಂಗ್‌ನ ಬಂಧಿತ ಶೂಟರ್‌ ಯೋಗೇಶ್‌ ಅಲಿಯಾಸ್‌ ರಾಜು ಹೇಳಿದ್ದಾನೆ.

ಮುಂಬೈ: ‘ಇತ್ತೀಚೆಗೆ ಹತ್ಯೆಯಾದ ಎನ್‌ಸಿಪಿ ನಾಯಕ ಬಾಬಾ ಸಿದ್ದಿಕಿ ಒಳ್ಳೆಯ ಮನುಷ್ಯನಾಗಿರದೆ, ಭೂಗತ ಪಾತಕಿ ದಾವೂದ್‌ ಇಬ್ರಾಹಿಂ ಜೊತೆ ನಂಟು ಹೊಂದಿದ್ದರು. ಹೀಗಾಗಿ ಆವರನ್ನು ಕೊಂದೆವು’ ಗ್ಯಾಂಗ್‌ಸ್ಟರ್‌ ಲಾರೆನ್ಸ್‌ ಬಿಷ್ಣೋಯಿ ಗ್ಯಾಂಗ್‌ನ ಬಂಧಿತ ಶೂಟರ್‌ ಯೋಗೇಶ್‌ ಅಲಿಯಾಸ್‌ ರಾಜು ಹೇಳಿದ್ದಾನೆ.

ಬಿಷ್ಣೋಯಿ ಹಾಗೂ ಹಾಶಿಮ್‌ ಬಾಬಾ ಗ್ಯಾಂಗ್‌ನೊಂದಿಗೆ ಗುರುತಿಸಿಕೊಂಡಿದ್ದ ಈತ ಅ.12ರಂದು ನಡೆದ ಸಿದ್ದಿಕಿ ಹತ್ಯೆಯಲ್ಲಿ ಭಾಗಿಯಾಗಿಲ್ಲ. ಆದರೆ ದೆಹಲಿಯ ಗ್ರೇಟರ್‌ ಕೈಲಾಶ್‌ ಪ್ರದೇಶದಲ್ಲಿ ನಾದಿರ್‌ ಶಾ ಎಂಬ ಜಿಮ್‌ ಓನರ್‌ನನ್ನು ಕೊಂದಿದ್ದ. ಹೀಗಾಗಿ ಆತನನ್ನು ಉತ್ತರ ಪ್ರದೇಶದ ಮಥುರಾದಲ್ಲಿ ಬಂಧಿಸಲಾಗಿದೆ.

ಆ ಪ್ರಕರಣದ ವಿಚಾರಣೆ ವೇಳೆ ಸಿದ್ದಿಕಿ ಹತ್ಯೆ ಬಗ್ಗೆಯೂ ಹೇಳಿಕೆ ನೀಡಿರುವ ರಾಜು, ‘ಸಿದ್ದಿಕಿ ವಿರುದ್ಧ ಮಹಾರಾಷ್ಟ್ರ ಸಂಘಟಿತ ಅಪರಾಧ ನಿಯಂತ್ರಣ ಅಧಿನಿಯಮದಡಿ ಪ್ರಕರಣಗಳು ದಾಖಲಾಗಿದ್ದವು. 1993ರಲ್ಲಿ ನಡೆದ ಮುಂಬೈ ಸ್ಫೋಟದ ಹಿಂದಿರುವ ಪಾತಕಿ ದಾವೂದ್‌ನೊಂದಿಗೆ ಸಂಬಂಧ ಇಟ್ಟುಕೊಂಡಿದ್ದ. ಅಂಥವರೊಂದಿಗೆ ನಂಟಿರುವವರಿಗೆ ಇದೇ ಗತಿಯಾಗುವುದು’ ಎಂದು ಹೇಳಿದ್ದಾನೆ. 

ಶೂಟರ್‌ ಫೋನಲ್ಲಿ ಸಿದ್ದಿಕಿ ಪುತ್ರನ ಚಿತ್ರ:

ತನಿಖೆ ವೇಳೆ ಶೂಟರ್‌ನ ಫೋನಿನಲ್ಲಿ ಸಿದ್ದಿಕಿ ಪುತ್ರ ಜೀಶನ್‌ ಸಿದ್ದಿಕಿ ಅವರ ಫೋಟೋ ಪತ್ತೆಯಾಗಿದೆ. ಅದನ್ನು ಸ್ನ್ಯಾಪ್‌ಚ್ಯಾಟ್‌ ಮೂಲಕ ಹಂಚಿಕೊಳ್ಳಲಾಗಿತ್ತು ಎಂದು ತಿಳಿದುಬಂದಿದೆ. ‘ಶೂಟರ್‌ಗಳು ಹಾಗೂ ಸಂಚುಕೋರರ ನಡುವೆ ಸ್ನ್ಯಾಪ್‌ಚ್ಯಾಟ್‌ ಮೂಲಕ ಸಂದೇಶಗಳು ರವಾನೆಯಾಗುತ್ತಿದ್ದು, ಕೂಡಲೇ ಅದನ್ನು ಡಿಲೀಟ್‌ ಮಾಡಲಾಗುತ್ತಿತ್ತು’ ಎಂದು ಮುಂಬೈ ಪೊಲೀಸರು ತಿಳಿಸಿದ್ದಾರೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ದೇಶದ ಮೊದಲ ಗಣರಾಜ್ಯೋತ್ಸವ ಸಂಭ್ರಮಕ್ಕೆ ಆಗಿದ್ದ ವೆಚ್ಚ ಎಷ್ಟು ? ಕುತೂಹಲಕಾರಿ ಸಂಗತಿಯಿದು
ಇಂದು ‘ವಂದೇ..’ ಪರಿಕಲ್ಪನೆಯಲ್ಲಿ 77ನೇ ಗಣರಾಜ್ಯ ದಿನ