ಬಜಾಜ್‌ನಿಂದ ವಿಶ್ವದ ಮೊದಲ ಸಿಎನ್‌ಜಿ ಬೈಕ್‌ ಬಿಡುಗಡೆ

KannadaprabhaNewsNetwork |  
Published : Jul 06, 2024, 12:49 AM ISTUpdated : Jul 06, 2024, 06:46 AM IST
ಸಿಎನ್‌ಜಿ ಬೈಕ್‌ | Kannada Prabha

ಸಾರಾಂಶ

ಸಿಎನ್‌ಜಿ (ಸಾಂದ್ರೀಕೃತ ನೈಸರ್ಗಿಕ ಅನಿಲ) ಮೂಲಕ ಚಲಿಸುವ ವಿಶ್ವದ ಮೊದಲ ಮೋಟಾರ್‌ ಸೈಕಲ್‌ನ್ನು ಬಜಾಜ್‌ ಕಂಪನಿ ಶುಕ್ರವಾರ ಬಿಡುಗಡೆ ಮಾಡಿದೆ. ಇದಕ್ಕೆ ‘ಫ್ರೀಡಂ’ ಎಂದು ಹೆಸರಿಡಲಾಗಿದೆ ಹಾಗೂ ಇದರ ಬೆಲೆ ₹ 95 ಸಾವಿರ ರು.ನಿಂದ ಆರಂಭವಾಗಲಿದೆ.

ಮುಂಬೈ: ಸಿಎನ್‌ಜಿ (ಸಾಂದ್ರೀಕೃತ ನೈಸರ್ಗಿಕ ಅನಿಲ) ಮೂಲಕ ಚಲಿಸುವ ವಿಶ್ವದ ಮೊದಲ ಮೋಟಾರ್‌ ಸೈಕಲ್‌ನ್ನು ಬಜಾಜ್‌ ಕಂಪನಿ ಶುಕ್ರವಾರ ಬಿಡುಗಡೆ ಮಾಡಿದೆ. ಇದಕ್ಕೆ ‘ಫ್ರೀಡಂ’ ಎಂದು ಹೆಸರಿಡಲಾಗಿದೆ ಹಾಗೂ ಇದರ ಬೆಲೆ ₹ 95 ಸಾವಿರ ರು.ನಿಂದ ಆರಂಭವಾಗಲಿದೆ.

ಈ ಬೈಕ್‌ ಪೆಟ್ರೋಲ್‌ ಹಾಗೂ ಸಿಎನ್‌ಜಿನಿಂದಲೂ ಚಲಿಸುತ್ತದೆ. ಚಾಲಕರು ಅದನ್ನು ಆಯ್ಕೆ ಮಾಡಿಕೊಳ್ಳಬೇಕಾಗುತ್ತದೆ ಎಂದು ಕಂಪನಿ ತಿಳಿಸಿದೆ.

ಫ್ರೀಡಂ ಎನ್‌ಜಿಒ4 ಡ್ರಮ್‌ ಬೈಕ್‌ ಬೆಲೆ ₹ 95,000, ಮಿಡ್-ಸ್ಪೆಕ್ ಎನ್‌ಜಿಒ4 ಡ್ರಮ್ ಎಲ್‌ಇಡಿ ಬೈಕ್‌ ಬೆಲೆ ₹ 1.05 ಲಕ್ಷ ಹಾಗೂ ಟಾಪ್-ಸ್ಪೆಕ್ ಎನ್‌ಜಿಒ4 ಡಿಸ್ಕ್ ಎಲ್‌ಇಡಿ ಬೈಕ್‌ ಬೆಲೆ ₹ 1.10 ಲಕ್ಷ ಬೆಲೆ ಇದೆ. ಮಹಾರಾಷ್ಟ್ರ ಮತ್ತು ಗುಜರಾತ್‌ನಲ್ಲಿ ಬುಕ್ಕಿಂಗ್ ಆರಂಭವಾಗಿದೆ ಎಂದು ಕಂಪನಿ ತಿಳಿಸಿದೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ರಾಮಮಂದಿರ ಹುಂಡಿ ಕಳವು ಪ್ರಕರಣಚಂಪತ್‌ ರಾಯ್‌ ರಾಜೀನಾಮೆ-ನೈತಿಕ ಹೊಣೆ ಹೊತ್ತು ರಾಯ್‌, ಟ್ರಸ್ಟಿ ಮಿಶ್ರಾ ಪದತ್ಯಾಗ
ಮೈಕ್‌ ಮೂಲಕ ಆಜಾನ್‌ ಕರೆ ನಿಷೇಧಕ್ಕೆ ಡೆನ್ಮಾಕ್‌ ಚಿಂತನೆ