;Resize=(412,232))
ನವದೆಹಲಿ: ಕಳಪೆ ಗುಣಮಟ್ಟ ಹಿನ್ನೆಲೆ ಎವರೆಸ್ಟ್ ಫುಡ್ ಪ್ರಾಡಕ್ಟ್ಸ್ ಮತ್ತು ಲಾಲ್ಜೀ ಗೋಧೂ ಕಂಪನಿಗಳ ಇಂಗು ಮಾರಾಟಕ್ಕೆ ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ (ಎಫ್‌ಎಸ್‌ಎಸ್‌ಎಐ) ನಿರ್ಬಂಧ ವಿಧಿಸಿದೆ.
ಈ ಕುರಿತು ಎಫ್‌ಎಸ್‌ಎಸ್‌ಎಐ ಜಾಲತಾಣದಲ್ಲಿ ಪೋಸ್ಟ್ ಮಾಡಿದೆ. ‘ಎವರೆಸ್ಟ್ ಫುಡ್ ಪ್ರಾಡಕ್ಟ್ಸ್ ಮತ್ತು ಲಾಲ್ಜೀ ಗೋಧೂ ಕಂಪನಿಯ ಉತ್ಪನ್ನಗಳ ಇಂಗು ಕಳಪೆ ಗುಣಮಟ್ಟದ್ದಾಗಿರುವುದರಿಂದ ಅವುಗಳ ವಿರುದ್ಧ ನಿಷೇಧಿತ ಆದೇಶಗಳನ್ನು ಹೊರಡಿಸಲಾಗಿದೆ’ ಎಂದಿದೆ. ತಕ್ಷಣದಿಂದಲೇ ಈ ಕ್ರಮ ಜಾರಿಗೆ ಬರಲಿದೆ. ಎವರೆಸ್ಟ್‌ವಿರುದ್ಧ ತಪ್ಪಾಗಿ ಬ್ರ್ಯಾಂಡ್ ಮಾಡಿರುವ ಆರೋಪವೂ ಕೇಳಿ ಬಂದಿದೆ.
ಎವರೆಸ್ಟ್‌ನ ಎಗ್ ಕರಿ ಮಸಾಲ, ಚಿಕನ್ ಮಸಾಲ ಮತ್ತು ಗರಂ ಮಸಾಲಗಳಲ್ಲಿಯೂ ಸಹ ಎಫ್‌ಎಸ್‌ಎಸ್‌ಎಐ ನಿಯಮ ಉಲ್ಲಂಘನೆಯನ್ನು ಪತ್ತೆಹಚ್ಚಿದೆ. ಆದಾಗ್ಯೂ, ಈ ಮೂರು ಉತ್ಪನ್ನಗಳನ್ನು ನಿಷೇಧಿಸಿಲ್ಲ.