;Resize=(412,232))
ತಿರುವನಂತಪುರಂ: ಕೇರಳದ ಪಾಲಕ್ಕಾಡ್ ರೈಲು ವಿಭಾಗದಿಂದ ಮಂಗಳೂರು ಹಾಗೂ ಕರ್ನಾಟಕದ ಕೆಲವು ರೈಲ್ವೆ ನಿಲ್ದಾಣ/ಮಾರ್ಗಗಳನ್ನು ಪ್ರತ್ಯೇಕಿಸಿ ನೈಋತ್ಯ ರೈಲ್ವೆ ವಲಯದ ಮೈಸೂರು ವಿಭಾಗಕ್ಕೆ ಸೇರಿಸಿದ್ದನ್ನು ರದ್ದುಪಡಿಸಲು ಸಾಧ್ಯವಿಲ್ಲ ಎಂದು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಸ್ಪಷ್ಟಪಡಿಸಿದ್ದಾರೆ.
- ಹೀಗಂತ ಕೇರಳದ ಕಾಂಗ್ರೆಸ್ ಸಂಸದ ಕೋಡಿಕುನ್ನಿಲ್ ಸುರೇಶ್ ಶುಕ್ರವಾರ ತಿಳಿಸಿದ್ದಾರೆ.
ಪತ್ರಕರ್ತರ ಜತೆ ಮಾತನಾಡಿದ ಸುರೇಶ್, ‘ಪಾಲಕ್ಕಾಡ್ ರೈಲ್ವೆ ವಿಭಾಗದ ಪ್ರಸ್ತಾವಿತ ಪುನರ್ವಿಂಗಡಣೆಯ ಕುರಿತು ಇಂದು ಬೆಳಿಗ್ಗೆ ನಾನು ರೈಲ್ವೆ ಸಚಿವರೊಂದಿಗೆ ಮಾತನಾಡಿದೆ. ವಿಲೀನವನ್ನು ಪುನರ್ವಿಮರ್ಶಿಸಲು ಮತ್ತು ಮರುಪರಿಶೀಲಿಸಲು ಕೋರಿದೆ. ಈ ಬಗ್ಗೆ ಕೇರಳ ಸಂಸದರ ಸಭೆ ಕರೆದು ಮಾತನಾಡಬೇಕು ಎಂದೂ ಕೋರಿದೆ ಆದರೆ ದುರದೃಷ್ಟವಶಾತ್, ರೈಲ್ವೆ ಸಚಿವರು ಆಡಳಿತಾತ್ಮಕ ಮತ್ತು ಅಭಿವೃದ್ಧಿ ದೃಷ್ಟಿಕೋನದಿಂದ ಈ ವಿಲೀನ ಅಗತ್ಯ ಮತ್ತು ಅನಿವಾರ್ಯ ಎಂದು ಉತ್ತರಿಸಿದರು’ ಎಂದರು.
ಇದೇ ವೇಳೆ, ‘ಕೇರಳ ಸರ್ಕಾರವು ಕೋಚ್ ಕಾರ್ಖಾನೆ ಸ್ಥಾಪಿಸಲು 200 ಎಕರೆ ಭೂಮಿಯನ್ನು ಗುರುತಿಸಿತ್ತು. ಆದರೆ ರೈಲ್ವೆ ಇಲಾಖೆ ಆ ಕೋಚ್ ಕಾರ್ಖಾನೆ ಬೇಡಿಕೆ ಈಡೇರಿಸುವಲ್ಲಿ ವಿಫಲವಾಗಿದೆ ಹಾಗೂ ಭರವಸೆಯಿಂದ ಹಿಂದೆ ಸರಿದಿದೆ. ಈಗ, ಯಾವುದೇ ಭರವಸೆಗಳಿಲ್ಲದೆ, ರೈಲ್ವೆ ಸಚಿವಾಲಯವು ಮಂಗಳೂರು ವಿಭಾಗವನ್ನು ಮೈಸೂರು ವಿಭಾಗಕ್ಕೆ ವಿಲೀನಗೊಳಿಸಲು ನಿರ್ಧರಿಸಿದೆ’ ಎಂದು ಬೇಸರ ವ್ಯಕ್ತಪಡಿಸಿದರು.==
ಕೇರಳದಲ್ಲಿ ಎಲ್ಲ ವಿರೋಧ ಪಕ್ಷದವರು ಸಹ ನನ್ನ ವಿರುದ್ಧ ಮಾತನಾಡುತ್ತಿದ್ದಾರೆ. ಮಾತನಾಡುವವರು ಮಾತನಾಡಲಿ. ಅಲ್ಲಿ ಎಲ್ಲಾ ಪಕ್ಷದವರು ನನ್ನ ವಿರುದ್ಧ ಬಟ್ಟೆ ಬಿಚ್ಚಿ ನಿಂತ್ಕೊಂಡು ಮಾತನಾಡಿದರೂ ಅಷ್ಟೇ. ಮಂಗಳೂರು ರೈಲ್ವೆ ವಲಯ ಮೈಸೂರಿನ ಕೈತಪ್ಪಲ್ಲ.
ವಿ.ಸೋಮಣ್ಣ, ರೈಲ್ವೆ ಖಾತೆ ರಾಜ್ಯ ಸಚಿವ