ಬ್ಯಾಂಕ್‌ ನೌಕರರ ವೇತನ ಶೇ.17ರಷ್ಟು ಹೆಚ್ಚಳ

KannadaprabhaNewsNetwork |  
Published : Mar 09, 2024, 01:30 AM ISTUpdated : Mar 09, 2024, 08:36 AM IST
ವೇತನ ಹೆಚ್ಚಳ | Kannada Prabha

ಸಾರಾಂಶ

ವೇತನ ಏರಿಕೆಗೆ ನೌಕರರು, ಬ್ಯಾಂಕ್‌ಗಳ ಸಹಮತಿ ದೊರೆತಿದ್ದು ವಾರಕ್ಕೆ ಐದು ದಿನ ಕೆಲಸ ಆದೇಶಕ್ಕೆ ಸರ್ಕಾರದ ಅನುಮತಿ ಬಾಕಿ ಉಳಿದುಕೊಂಡಿದ್ದು, ಕೆಲವೇ ದಿನಗಳಲ್ಲಿ ಆದೇಶವಾಗುವ ನಿರೀಕ್ಷೆಯಿದೆ.

ನವದೆಹಲಿ: ಬ್ಯಾಂಕ್‌ ನೌಕರರ ವೇತನವನ್ನು ವಾರ್ಷಿಕ ಶೇ.17ರಷ್ಟು ಹೆಚ್ಚಳ ಮಾಡುವ ಸಂಬಂಧ ಭಾರತೀಯ ಬ್ಯಾಂಕ್‌ಗಳ ಒಕ್ಕೂಟ ಮತ್ತು ಬ್ಯಾಂಕ್‌ ನೌಕರರ ಸಂಘಟನೆಗಳು ಸಹಮತ ವ್ಯಕ್ತಪಡಿಸಿವೆ. 

2022ರ ನವೆಂಬರ್‌ನಿಂದಲೇ ಪೂರ್ವಾನ್ವಯವಾಗಿ ವೇತನ ಏರಿಕೆ ಜಾರಿಯಾಗಿದೆ.ಇದರಿಂದಾಗಿ ಸುಮಾರು 8 ಲಕ್ಷ ಬ್ಯಾಂಕ್‌ ನೌಕರರಿಗೆ ಲಾಭವಾಗಲಿದ್ದು, ಸರ್ಕಾರಕ್ಕೆ ವಾರ್ಷಿಕ 8,284 ಕೋಟಿ ರು. ಹೆಚ್ಚುವರಿ ಹೊರೆ ಬೀಳಲಿದೆ. 

ಇದಕ್ಕಾಗಿ ಹೊಸ ವೇತನ ಶ್ರೇಣಿಯನ್ನು ರಚಿಸಲಾಗಿದ್ದು, ತುಟ್ಟಿಭತ್ಯೆಯನ್ನು ಮೂಲವೇತನದೊಂದಿಗೆ ವಿಲೀನ ಮಾಡಲಾಗಿದೆ.

ಅಲ್ಲದೆ ಮಹಿಳಾ ಉದ್ಯೋಗಿಗಳಿಗೆ ತಿಂಗಳಲ್ಲಿ ಒಂದು ದಿನ ತುರ್ತು ಆರೋಗ್ಯ ರಜೆಯನ್ನು ವೈದ್ಯರ ಪ್ರಮಾಣಪತ್ರ ರಹಿತವಾಗಿ ತೆಗೆದುಕೊಳ್ಳಲು ಅವಕಾಶ ಕಲ್ಪಿಸಿದೆ. 

ಅಲ್ಲದೆ ರಜಾ ದಿನಗಳಲ್ಲಿ ಕೆಲಸ ಮಾಡಿದುದನ್ನು ನಿವೃತ್ತಿ ಅಥವಾ ಮರಣದ ಸಮಯದಲ್ಲಿ ನಗದೀಕರಿಸಿಕೊಳ್ಳುವ ಮಿತಿಯನ್ನು 255 ದಿನಕ್ಕೆ ಹೆಚ್ಚಳ ಮಾಡಲಾಗಿದೆ. ಈ ಆದೇಶವು ಅ.31, 2022ಗಿಂತ ಮುಂಚೆ ಪಿಂಚಣಿಗೆ ಅರ್ಹಗೊಂಡಿದ್ದವರಿಗೂ ಅನ್ವಯಿಸಲಿದೆ. 

ಈ ನಡುವೆ ವಾರಕ್ಕೆ ಕೇವಲ ಐದೇ ದಿನ ಕೆಲಸ ಕುರಿತೂ ಉಭಯ ಸಂಘಟನೆಗಳು ಸಹಮತಿ ಸೂಚಿಸಿವೆ. ಇದಕ್ಕೆ ಕೇಂದ್ರ ಸರ್ಕಾರದ ಅನುಮೋದನೆ ಸಿಕ್ಕ ಬಳಿಕ ಅದು ಜಾರಿಯಾಗಲಿದೆ.

PREV

Recommended Stories

15 ವರ್ಷ ಬಳಿಕ ಗುಜರಿ ವ್ಯಾಪ್ತಿಗೆಎಲೆಕ್ಟ್ರಿಕ್‌ ವಾಹನಗಳು ಬರಲ್ಲ?
ಡೆಂಘೀ ವಿರುದ್ಧ ಹೋರಾಟಕ್ಕೆ ಯುರೋಪ್ - ಭಾರತ ವಿಜ್ಞಾನಿಗಳ ಮೈತ್ರಿ