ಸೈಬರ್ ವಂಚನೆ -ಸಂತ್ರಸ್ತರಿಗೆ ಬ್ಯಾಂಕ್‌ಗಳೇ ನಷ್ಟ ಭರಿಸುವಂತೆ ಸೂಚನೆ

Published : Oct 30, 2026, 11:50 AM IST
Cyber Fraud

ಸಾರಾಂಶ

ಡಿಜಿಟಲ್‌ ವಂಚನೆ ಪ್ರಕರಣಗಳಲ್ಲಿ ಬ್ಯಾಂಕ್‌ಗಳ ವೈಫಲ್ಯ ಕಂಡುಬಂದರೆ, ಸಂತ್ರಸ್ತರ ನಷ್ಟವನ್ನು ಭರಿಸಲು ಬ್ಯಾಂಕ್‌ಗಳನ್ನು ಹೊಣೆಗಾರರನ್ನಾಗಿ ಮಾಡಬೇಕು ಎಂದು ಸುಪ್ರೀಂಕೋರ್ಟ್ ಗುರುವಾರ ಹೇಳಿದೆ.

ನವದೆಹಲಿ: ಡಿಜಿಟಲ್‌ ವಂಚನೆ ಪ್ರಕರಣಗಳಲ್ಲಿ ಬ್ಯಾಂಕ್‌ಗಳ ವೈಫಲ್ಯ ಕಂಡುಬಂದರೆ, ಸಂತ್ರಸ್ತರ ನಷ್ಟವನ್ನು ಭರಿಸಲು ಬ್ಯಾಂಕ್‌ಗಳನ್ನು ಹೊಣೆಗಾರರನ್ನಾಗಿ ಮಾಡಬೇಕು ಎಂದು ಸುಪ್ರೀಂಕೋರ್ಟ್ ಗುರುವಾರ ಹೇಳಿದೆ.

ಆರ್ಥಿಕ ಸಂಸ್ಥೆಗಳು ಸೂಕ್ತ ಮುನ್ನೆಚ್ಚರಿಕೆ ವಹಿಸುವಲ್ಲಿ ವಿಫಲ

ಆರ್ಥಿಕ ಸಂಸ್ಥೆಗಳು ಸೂಕ್ತ ಮುನ್ನೆಚ್ಚರಿಕೆ ವಹಿಸುವಲ್ಲಿ ವಿಫಲವಾಗಿ ಡಿಜಿಟಲ್ ಅರೆಸ್ಟ್‌ನಂತಹ ಅಪರಾಧಗಳು ಸಂಭವಿಸಿದರೆ, ಸಂತ್ರಸ್ತರು ಕಳೆದುಕೊಂಡ ಕನಿಷ್ಠ ಮೊತ್ತವನ್ನಾದರೂ ಬ್ಯಾಂಕ್‌ಗಳು ಪರಿಹಾರವಾಗಿ ನೀಡಬೇಕು ಎಂದು ಕೋರ್ಟ್ ಹೇಳಿದೆ.

ಸಾರ್ವಜನಿಕರ 800 ಕೋಟಿ ರು. ಲೂಟಿ

ಪ್ರಸಕ್ತ ವರ್ಷ ಸೈಬರ್‌ ಅಪರಾಧ ಪ್ರಕರಣ ಇಳಿಕೆಯಾಗಿದ್ದರೂ, ಸಾರ್ವಜನಿಕರ 800 ಕೋಟಿ ರು. ಲೂಟಿ ಆಗಿರುವುದನ್ನು ಗಂಭೀರ ಎಂದು ಹೇಳಿದ ಮುಖ್ಯ ನ್ಯಾ.ಸೂರ್ಯಕಾಂತ್, ನ್ಯಾ.ಜೋಯ್‌ಮಲ್ಯಾ ಬಗ್ಚಿ ಮತ್ತು ನ್ಯಾ.ವಿ.ಮೋಹನಾ ಅವರನ್ನೊಳಗೊಂಡ ಪೀಠವು, ಆರ್‌ಬಿಐ ಪ್ರಸ್ತಾಪಿಸಿರುವ ಹೊಸ ಸೈಬರ್‌ ವಂಚನೆ ನಿಯಂತ್ರಣಾ ಕ್ರಮಗಳು, ಹಣ ಕಳೆದುಕೊಂಡವರಿಗೆ ಪರಿಹಾರ, ವಂಚನೆ ತಡೆಯಲು ಕ್ರಮ ಮತ್ತು ವಂಚನೆ ಪ್ರಕರಣಗಳಲ್ಲಿ ಹೊಣೆಗಾರರನ್ನು ಗುರುತಿಸುವ ಅಂಶಗಳನ್ನು ಒಳಗೊಂಡಿರಬೇಕು ಎಂದು ಸೂಚಿಸಿದೆ.

ವಿದ್ಯಾವಂತರೂ ಮೋಸದ ಬಲೆಗೆ: ವಿದ್ಯಾವಂತರೂ ಡಿಜಿಟಲ್‌ ವಂಚನೆಗೆ ಒಳಗಾಗುತ್ತಿರುವ ಬಗ್ಗೆ ಸುಪ್ರೀಂ ಕಳವಳ ವ್ಯಕ್ತಪಡಿಸಿದೆ. ‘ಓದಿದ ಜನರೇ ಮೋಸ ಹೋಗುತ್ತಿರುವುದು ತೀವ್ರ ನಿರಾಶೆ ತಂದಿದೆ. ಬ್ಯಾಂಕ್‌ಗಳು ಗ್ರಾಹಕರಿಗೆ ರಕ್ಷಣಾ ಕವಚವಾಗಿ ಕೆಲಸ ಮಾಡಬೇಕು. ನಿರ್ಲಕ್ಷ್ಯ ವಹಿಸುವ ಬ್ಯಾಂಕ್‌ಗಳ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು’ ಎಂದು ಎಚ್ಚರಿಸಿದೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.
Read more Articles on

Recommended Stories

ಎಲ್‌ನಿನೋಕ್ಕೆ ಭಾರತದಲ್ಲಿ 6 ತಿಂಗಳಲ್ಲಿ 55000 ಜನರ ಸಾವಿನ ಸಾಧ್ಯತೆ : ವರದಿ
ಅಮೆರಿಕದಲ್ಲಿ ಆರ್‌ಎಸ್‌ಎಸ್‌ನ ‘ಹಿತೈಷಿ’ ಸಂಘಟನೆ ನೋಂದಣಿ