;Resize=(412,232))
ವಾಷಿಂಗ್ಟನ್: ಜಗತ್ತಿನಾದ್ಯಂಥ ಮಳೆ ಕೊರತೆ, ಉಷ್ಣಾಂಶದಲ್ಲಿ ಭಾರೀ ಏರಿಕೆಗೆ ಕಾರಣವಾಗಿರುವ ಎಲ್‌ನಿನೋ ವಿದ್ಯಮಾನ, ಮುಂದಿನ ಮಾರ್ಚ್ ವೇಳೆಗೆ ಭಾರತದಲ್ಲಿ ಹೆಚ್ಚುವರಿ 55000 ಜನರ ಸಾವಿಗೆ ಕಾರಣವಾಗಬಹುದು ಎಂದು ವರದಿಯೊಂದು ಎಚ್ಚರಿಸಿದೆ.
ಕ್ಲೈಮ್ಯಾಟ್ ಇಂಪ್ಯಾಕ್ಟ್ ಲ್ಯಾಬ್‌ನ, ‘ಎಲ್ ನಿನೊ ಹೀಟ್ ಮಾರ್ಟಾಲಿಟಿ ಟ್ರ್ಯಾಕರ್’ ಅನ್ವಯ ಮುಂದಿನ 6 ತಿಂಗಳಿನಲ್ಲಿ ಜಗತ್ತಿನಾದ್ಯಂತ 373,000 ಹೆಚ್ಚುವರಿ ಸಾವು ಸಂಭವಿಸಲಿದೆ. ವಿಶ್ವದ ಇತರೆ ಭಾಗಗಳಿಗೆ ಹೋಲಿಸಿದರೆ ಎನ್‌ನಿನೋದಿಂದ ಉಂಟಾಗುವ ಅಧಿಕ ಉಷ್ಣಾಂಶದ ಸಾವುಗಳು ಜಾಗತಿಕ ದಕ್ಷಿಣ ದೇಶಗಳಲ್ಲೇ ಹೆಚ್ಚು ಸಂಭವಿಸಲಿದೆ.
ಅದರಲ್ಲೂ ಆಗ್ನೇಯ ಏಷ್ಯಾವು ಪ್ರಮುಖ ಹಾಟ್‌ಸ್ಪಾಟ್ ಆಗಿ ಮುಂದುವರಿಯಲಿದೆ ಎಂದು ವರದಿ ಹೇಳಿದೆ.