ನಿಮ್ಮ ಬಾಸ್‌ಗೆ ನಿಮ್ಮ ಮೆಸೇಜ್ ನೋಡಲು ಅವಕಾಶವಾಷಿಂಗ್ಟನ್: ನೀವು ಕಂಪನಿ ನೀಡಿರುವ ಗೂಗಲ್ ಆ್ಯಂಡ್ರಾಯ್ಡ್ ಫೋನ್ ಬಳಸುತ್ತಿದ್ದೀರಾ ಎಚ್ಚರ. ಗೂಗಲ್ ಕಂಪನಿಯು ಆ್ಯಂಡ್ರಾಯ್ಡ್ ಸಾಧನಗಳಲ್ಲಿ, ಅದರಲ್ಲೂ ವಿಶೇಷವಾಗಿ ಪಿಕ್ಸೆಲ್ ಫೋನ್‌ಗಳಲ್ಲಿ ಬದಲಾವಣೆ ತಂದಿದೆ. ನೀವು ಕಂಪನಿ ನಿರ್ವಹಿಸುವ ಪಿಕ್ಸೆಲ್ ಫೋನ್ ಬಳಸಿದರೆ, ನಿಮ್ಮ ಉದ್ಯೋಗದಾತರು ನೀವು ಕಳುಳಿಸುವ ಮತ್ತು ಸ್ವೀಕರಿಸುವ ಸಂದೇಶಗಳನ್ನು ನೋಡಲು ಇದು ಅನುಕೂಲ ಮಾಡಿಕೊಡಲಿದೆ.
ಇದು ಕಂಪನಿ ಫೋನ್‌ಗಳನ್ನೂ ಸಹ ಖಾಸಗಿ ಎಂದು ಪರಿಗಣಿಸಿ ಬಳಕೆ ಮಾಡುವ ಉದ್ಯೋಗಿಗಳಿಗೆ ಈ ಬದಲಾವಣೆಯು ಗಂಭೀರ ಕಳವಳ ಹುಟ್ಟುಹಾಕಿದೆ.