ಬಿಹಾರದಲ್ಲಿ ಮೊಬೈಲ್‌ ಮೂಲಕವೇ ವೋಟಿಂಗ್‌!

KannadaprabhaNewsNetwork |  
Published : Jun 28, 2025, 12:18 AM ISTUpdated : Jun 28, 2025, 05:56 AM IST
ಬಿಹಾರ | Kannada Prabha

ಸಾರಾಂಶ

ಬಿಹಾರದಲ್ಲಿ ಶನಿವಾರ ನಡೆಯಲಿರುವ 6 ಪುರಸಭೆಗಳ ಚುನಾವಣೆಗಳಲ್ಲಿ ಮೊಬೈಲ್‌ ಮೂಲಕ ಮತ ಚಲಾಯಿಸುವ ಸೌಲಭ್ಯವನ್ನು ಒದಗಿಸಲಾಗಿದೆ. ಇದು ದೇಶದಲ್ಲಾಗುತ್ತಿರುವ ಇಂತಹ ಮೊದಲ ಪ್ರಯೋಗವಾಗಿದೆ. ಈ ಕುರಿತು ರಾಜ್ಯ ಚುನಾವಣಾ ಆಯುಕ್ತ ದೀಪಕ್‌ ಪ್ರಸಾದ್‌ ಮಾಹಿತಿ ನೀಡಿದ್ದಾರೆ.

ಪಟನಾ: ಬಿಹಾರದಲ್ಲಿ ಶನಿವಾರ ನಡೆಯಲಿರುವ 6 ಪುರಸಭೆಗಳ ಚುನಾವಣೆಗಳಲ್ಲಿ ಮೊಬೈಲ್‌ ಮೂಲಕ ಮತ ಚಲಾಯಿಸುವ ಸೌಲಭ್ಯವನ್ನು ಒದಗಿಸಲಾಗಿದೆ. ಇದು ದೇಶದಲ್ಲಾಗುತ್ತಿರುವ ಇಂತಹ ಮೊದಲ ಪ್ರಯೋಗವಾಗಿದೆ. ಈ ಕುರಿತು ರಾಜ್ಯ ಚುನಾವಣಾ ಆಯುಕ್ತ ದೀಪಕ್‌ ಪ್ರಸಾದ್‌ ಮಾಹಿತಿ ನೀಡಿದ್ದಾರೆ.

ಯಾರಿಗೆ ಈ ವ್ಯವಸ್ಥೆ ಲಭ್ಯ

ಅಂಗವಿಕಲರು, ವೃದ್ಧರು, ಗರ್ಭಿಣಿಯರು, ವಲಸೆ ಕಾರ್ಮಿಕರು ಅಥವಾ ಸಂಚಾರ ಸಮಸ್ಯೆಯಿಂದಾಗಿ ಮತಗಟ್ಟೆಗಳಿಗೆ ತೆರಳಿ ವೋಟ್‌ ಮಾಡಲು ಆಗದವರಿಗಾಗಿ ಇ-ವೋಟಿಂಗ್‌ ಅವಕಾಶ ಕಲ್ಪಿಸಲಾಗಿದೆ. ಇದಕ್ಕಾಗಿ ಸೆಂಟರ್‌ ಫಾರ್‌ ಡೆವಲಪ್‌ಮೆಂಟ್‌ ಆಫ್‌ ಅಡ್ವಾನ್ಸ್ಟ್‌ ಕಂಪ್ಯೂಟಿಂಗ್‌ ಹಾಗೂ ಬಿಹಾರ ಸರ್ಕಾರ ಆ್ಯಪ್‌ಗಳನ್ನು ಅಭಿವೃದ್ಧಿಪಡಿಸಿವೆ.

ವಿಧಾನಸಭಾ ಚುನಾವಣೆಯಲ್ಲೂ ಬಳಕೆ?

ವರ್ಷಾಂತ್ಯದಲ್ಲಿ ರಾಜ್ಯದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದ್ದು, ಅದರ ನಡುವೆಯೇ ಈ ವ್ಯವಸ್ಥೆ ಪರಿಚಯ ಮಾಡಿರುವುದು, ವಿಧಾನಸಭಾ ಚುನಾವಣೆಯಲ್ಲೂ ಇದರ ಬಳಕೆಯ ಕುರಿತು ಆಶಾಭಾವನೆ ವ್ಯಕ್ತವಾಗಿದೆ.

ಇ-ವೋಟಿಂಗ್‌ ಪ್ರಕ್ರಿಯೆ ಹೇಗೆ?

ಇ-ಮತದಾನ ಮಾಡಲು ಬಯಸುವವರು ಎ-ಎಸ್‌ಇಸಿಬಿಎಚ್‌ಆರ್‌ ಆ್ಯಪ್‌ ಅನ್ನು ತಮ್ಮ ಮೊಬೈಲ್‌ನಲ್ಲಿ ಇನ್‌ಸ್ಟಾಲ್‌ ಮಾಡಿಕೊಳ್ಳಬೇಕು. ಸದ್ಯಕ್ಕೆ ಆ್ಯಂಡ್ರಾಯ್ಡ್‌ ಫೋನ್‌ಗಳಲ್ಲಿ ಮಾತ್ರವೇ ಇದಕ್ಕೆ ಅವಕಾಶವಿದೆ. ಬಳಿಕ, ಮತದಾರರ ಪಟ್ಟಿಯಲ್ಲಿ ಹೆಸರಿನೊಂದಿಗೆ ನೋಂದಾಯಿಸಲಾಗಿರುವ ದೂರವಾಣಿ ಸಂಖ್ಯೆಯನ್ನು ನಮೂದಿಸಬೇಕು ಹೆಸರು ನೊಂದಾಯಿಸಿಕೊಳ್ಳಬೇಕು.

ಪಾರದರ್ಶಕತೆ, ಸುರಕ್ಷತೆಗೆ ಆದ್ಯತೆ

ಪಾರದರ್ಶಕತೆ ಕಾಪಾಡುವ ಸಲುವಾಗಿ, ಒಂದು ಸಂಖ್ಯೆಯಿಂದ ಇಬ್ಬರು ಮಾತ್ರ ಲಾಗಿನ್‌ ಆಗಲು ಅವಕಾಶವಿದೆ. ಅದಾಗಿಯೂ, ಧೃಡೀಕರಣಕ್ಕೆ ಪ್ರತೀ ಮತವನ್ನು ಮತದಾರರ ಐಡಿ ಜತೆ ತಾಳೆ ಹಾಕಿ ನೋಡಲಾಗುವುದು. ಮೊಬೈಲ್‌ ಇಲ್ಲದವರಿಗೆ ರಾಜ್ಯ ಚುನಾವಣಾ ಆಯೋಗದ ವೆಬ್‌ಸೈಟ್‌ನಲ್ಲಿ ಮತ ಚಲಾಯಿಸುವ ಆಯ್ಕೆಯಿದೆ. ಸಮಗ್ರತೆಯನ್ನು ಕಾಯ್ದುಕೊಳ್ಳಲು ಮುಖ ಹೊಂದಿಕೆ(ಫೇಸ್‌ ಮ್ಯಾಚ್‌), ಸ್ಕ್ಯಾನಿಂಗ್‌ನಂತಹ ವ್ಯವಸ್ಥೆಯಿವೆ. ಈಗಾಗಲೇ 10,000 ಮತದಾರರು ಆ್ಯಪ್‌ನಲ್ಲಿ ನೋಂದಣಿಯಾಗಿದ್ದು, ಈ ಸಂಖ್ಯೆ 50,000 ದಾಟುವ ನಿರೀಕ್ಷೆಯಿದೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.
Read more Articles on

Recommended Stories

ಬೆಂಗಳೂರಿನದ್ದು ಸೇರಿ 16 ಉಪಗ್ರಹಗಳು ಆಗಸದಲ್ಲೇ ಕಾಣೆ
ಅಣ್ಣಾಮಲೈ ರಸಮಲೈ ಎಂದು ರಾಜ್‌ ಠಾಕ್ರೆ ಕೀಳುಭಾಷೆ ಟೀಕೆ