ತಿನ್ನೋ ಮುನ್ನ ಹುಷಾರ್‌! ಮೇವಿನ ಹೊಟ್ಟು ಬಳಸಿ ಬಿಸ್ಕೆಟ್‌ ,ಹಾಲಿನ ಕ್ರೀಂನಲ್ಲಿ ವಿಷಕಾರಿ ಅಂಶ

Published : Oct 18, 2026, 08:34 AM IST
Chai biscuits

ಸಾರಾಂಶ

ಪ್ರಸಿದ್ಧ ಪ್ರಿಯಾಗೋಲ್ಡ್ ಬಿಸ್ಕೆಟ್‌ ತಯಾರಿಕೆಯಲ್ಲಿ ಜಾನುವಾರುಗಳ ಮೇವಿನ ಹೊಟ್ಟನ್ನು ಬಳಸಿದ್ದಕ್ಕಾಗಿ ತಯಾರಕ ಸಂಸ್ಥೆಯಾದ ಸೂರ್ಯ ಫುಡ್ & ಅಗ್ರೋ ಕಂಪನಿಯ ವಿರುದ್ಧ ಭಾರತೀಯ ಆಹಾರ ಭದ್ರತೆ ಮತ್ತು ಗುಣಮಟ್ಟ ಪ್ರಾಧಿಕಾರವು ಕಾನೂನು ಕ್ರಮವನ್ನು ಆರಂಭಿಸಿದೆ

ನವದೆಹಲಿ: ಪ್ರಸಿದ್ಧ ಪ್ರಿಯಾಗೋಲ್ಡ್ ಬಿಸ್ಕೆಟ್‌ ತಯಾರಿಕೆಯಲ್ಲಿ ಜಾನುವಾರುಗಳ ಮೇವಿನ ಹೊಟ್ಟನ್ನು ಬಳಸಿದ್ದಕ್ಕಾಗಿ ತಯಾರಕ ಸಂಸ್ಥೆಯಾದ ಸೂರ್ಯ ಫುಡ್ & ಅಗ್ರೋ ಕಂಪನಿಯ ವಿರುದ್ಧ ಭಾರತೀಯ ಆಹಾರ ಭದ್ರತೆ ಮತ್ತು ಗುಣಮಟ್ಟ ಪ್ರಾಧಿಕಾರವು (ಎಫ್‌ಎಸ್‌ಎಸ್‌ಎಐ) ಕಾನೂನು ಕ್ರಮವನ್ನು ಆರಂಭಿಸಿದೆ. ಇದರ ಜೊತೆಗೆ ದೊಡ್ಲ ಡೈರಿ ಮತ್ತು ಯುಇಐಆರ್‌ ಆರ್ಗ್ಯಾನಿಕ್‌ ಫುಡ್ಸ್‌ ಸಂಸ್ಥೆಗಳ ವಿರುದ್ಧವೂ ಗಂಭೀರ ನಿಯಮ ಉಲ್ಲಂಘನೆಯಾಗಿ ಕಾನೂನು ಕ್ರಮ ಕೈಗೊಳ್ಳಲಾಗಿದೆ.

ಎಫ್‌ಎಸ್‌ಎಸ್‌ಎಐ ಅಧಿಕಾರಿಗಳು ಸೂರ್ಯ ಸಂಸ್ಥೆಯ ಮೇಲೆ ದಾಳಿ ನಡೆಸಿ ಪರಿಶೀಲನೆ ನಡೆಸಿದ್ದರು. ಈ ವೇಳೆ ಮಾನವ ಸೇವನೆಗೆ ಯೋಗ್ಯವಲ್ಲದ ಹಾಗೂ ದನಗಳ ಮೇವಿಗಾಗಿ ಮೀಸಲಿಟ್ಟಿದ್ದ ಹೊಟ್ಟನ್ನು ಫೈಬರ್ ಆಧಾರವಾಗಿ ಬಿಸ್ಕೆಟ್ ತಯಾರಿಕೆಗೆ ಬಳಸುತ್ತಿರುವುದು ಕಂಡುಬಂದಿದೆ. ಜತೆಗೆ ಘಟಕದಲ್ಲಿ ಹಲವು ಲೋಪಗಳು ಕಂಡುಬಂದ ಹಿನ್ನೆಲೆಯಲ್ಲಿ ಸಂಸ್ಥೆಯ ಪರವಾನಗಿಯನ್ನು ಅಮಾನತುಗೊಳಿಸಲಾಗಿದೆ ಎಂದು ಎಫ್‌ಎಸ್‌ಎಸ್‌ಐ ಜಾಲತಾಣದಲ್ಲಿ ಮಾಹಿತಿ ಪೋಸ್ಟ್ ಮಾಡಿದೆ.

ಸಾಬೂನು ಪುಡಿಯಿಂದ ಕ್ರೀಂ:

ಇನ್ನೊಂದೆಡೆ, ದೊಡ್ಲ ಡೈರಿಯ ‘ಫುಲ್ ಕ್ರೀಂ ಹಾಲಿನ’ ಮಾದರಿಯನ್ನು ಪರೀಕ್ಷಿಸಿದಾಗ ಅದರಲ್ಲಿ ಸಾಬೂನು/ಕಾಸ್ಟಿಕ್ ಸೋಡಾ ಮಿಶ್ರಣವಾಗಿರುವುದು ದೃಢಪಟ್ಟಿದೆ. ಯುಇಐಆರ್ ಆರ್ಗ್ಯಾನಿಕ್ ಫುಡ್ಸ್ ಮಾರಾಟ ಮಾಡುತ್ತಿದ್ದ ಒಣದ್ರಾಕ್ಷಿಯಲ್ಲಿ ಕ್ರಿಮಿನಾಶಕದ ಅವಶೇಷಗಳು ಪತ್ತೆಯಾಗಿವೆ. ಈ ಹಿನ್ನೆಲೆಯಲ್ಲಿ ಮೂರೂ ಸಂಸ್ಥೆಗಳ ವಿರುದ್ಧ ಪ್ರಾಸಿಕ್ಯೂಷನ್ ನಡೆಸಲು ಪ್ರಾಧಿಕಾರವು ಸಮ್ಮತಿ ನೀಡಿದೆ.

ಅವಧಿ ಮುಗಿದ ಆಹಾರ ಮಾರಾಟ:

ಮಹಾರಾಷ್ಟ್ರದ ಆಹಾರ ಮತ್ತು ಔಷಧ ಆಡಳಿತ (ಎಫ್‌ಡಿಎ) ನಡೆಸಿದ ಕಾರ್ಯಚರಣೆಯಲ್ಲಿ 48 ಲಕ್ಷ ರು. ಮೌಲ್ಯದ ಅವಧಿ ಮುಗಿದ ಆಹಾರ ಪದಾರ್ಥಗಳನ್ನು ವಶಪಡಿಸಿಕೊಳ್ಳಲಾಗಿದ್ದು, ರಿಲಯನ್ಸ್‌ ಕನ್ಸ್ಯೂಮರ್ ಪ್ರಾಡಕ್ಟ್ಸ್, ರಿಲಯನ್ಸ್‌ ರಿಟೇಲ್, ಬ್ಲಿಂಕಿಟ್ ಹಾಗೂ ಝೊಮ್ಯಾಟೋ ಹೈಪರ್‌ಪ್ಯೂರ್ ಸಂಸ್ಥೆಗಳ ಉನ್ನತ ಅಧಿಕಾರಿಗಳು ಸೇರಿದಂತೆ 10 ಜನರ ವಿರುದ್ಧ ಎಫ್‌ಐಆರ್ ದಾಖಲಾಗಿದೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.
Read more Articles on

Recommended Stories

ಟೋಲ್‌ ಪ್ಲಾಜಾದಲ್ಲಿ ಕೊಳಕು ಶೌಚ ಹುಡುಕಿ ₹1000 ಗೆಲ್ಲಿ!
ಮಕ್ಕಳ ಇಂಟರ್ನೆಟ್‌ ಬಳಕೆ ನಿರ್ಬಂಧಿಸಲಾಗದು: ಸುಪ್ರೀಂ