ಅಹಮದಾಬಾದ್: ಗುಜರಾತ್‌ನ ಭೀಕರ ವಿಮಾನ ದುರಂತ ನಡೆದ ಸ್ಥಳದಲ್ಲಿ ಪ್ರಯಾಣಿಕರ ಮೃತದೇಹಗಳು, ವಿಮಾನದ ಅವಶೇಷಗಳು ಮಾತ್ರವಲ್ಲದೆ, ಪ್ರಯಾಣಿಕರ ಸಾಮಾನು ಸರಂಜಾಮುಗಳೂ ದೊರೆಯುತ್ತಿವೆ. ಸುಟ್ಟು ಕರಕಲಾಗಿ ಬಿದ್ದಿರುವ ವಿಮಾನದ ಅವಶೇಷಗಳ ನಡುವೆ, ಪ್ರಯಾಣಿಕರೊಬ್ಬರ ಬಳಿಯಿದ್ದ ಭಗವದ್ಗೀತೆ ಪುಸ್ತಕ ಸಂಪೂರ್ಣ ಸುರಕ್ಷಿತವಾಗಿ ದೊರಕಿದ್ದು, ಗಮನ ಸೆಳೆದಿದೆ. ದುರಂತ ಸ್ಥಳದಲ್ಲಿ ಪರಿಶೀಲನೆ ವೇಳೆ ಭಗವದ್ಗೀತೆ ಪುಸ್ತಕ ದೊರಕಿದೆ. ವಿಮಾನದ ಅವಶೇಷಗಳೆಲ್ಲ ಸುಟ್ಟು ಕರಕಲಾಗಿದ್ದರೂ ಅದರ ನಡುವೆ ಈ ಪುಸ್ತಕ ಮಾತ್ರ ಸುಡದೇ ಉಳಿದಿರುವುದು ಅಚ್ಚರಿ ಮೂಡಿಸಿದೆ ಎಂದು ರಕ್ಷಣಾ ಸಿಬ್ಬಂದಿ ಹೇಳಿದ್ದಾರೆ.