ಮದ್ಯ ನೀತಿ ಹಗರಣ : ಖುಲಾಸೆ ಬೆನ್ನಲ್ಲೇ ಸಂತಸದಿಂದ ಕೇಜ್ರಿವಾಲ್‌ ಕಣ್ಣೀರು

KannadaprabhaNewsNetwork |  
Published : Feb 28, 2026, 02:00 AM ISTUpdated : Feb 28, 2026, 05:40 AM IST
Kejriwal

ಸಾರಾಂಶ

ಮದ್ಯ ನೀತಿ ಹಗರಣದಲ್ಲಿ ಜೈಲು ಪಾಲಾಗಿದ್ದ ದೆಹಲಿ ಮಾಜಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ ತೀರ್ಪು ಹೊರಬರುತ್ತಿದ್ದಂತೆ ಮಾಧ್ಯಮದ ಎದುರು, ನಾನು ಭ್ರಷ್ಟ ಅಲ್ಲ ಎಂದು ಹೇಳಿ ಕಣ್ಣೀರು ಹಾಕಿದರು.

 ನವದೆಹಲಿ: ಮದ್ಯ ನೀತಿ ಹಗರಣದಲ್ಲಿ ಜೈಲು ಪಾಲಾಗಿದ್ದ ದೆಹಲಿ ಮಾಜಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ ತೀರ್ಪು ಹೊರಬರುತ್ತಿದ್ದಂತೆ ಮಾಧ್ಯಮದ ಎದುರು, ನಾನು ಭ್ರಷ್ಟ ಅಲ್ಲ ಎಂದು ಹೇಳಿ ಕಣ್ಣೀರು ಹಾಕಿದರು.

ಇದು ಸಂಪೂರ್ಣವಾಗಿ ನಕಲಿ ಪ್ರಕರಣ

ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಇದು ಸಂಪೂರ್ಣವಾಗಿ ನಕಲಿ ಪ್ರಕರಣ. ಇದರ ಹಿಂದೆ ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಪಾತ್ರವಿದೆ. ಸ್ವತಂತ್ರ ಭಾರತದ ಇತಿಹಾಸದಲ್ಲೇ ಇದೊಂದು ಅತಿದೊಡ್ಡ ರಾಜಕೀಯ ಷಡ್ಯಂತ್ರ. ನಾನು, ಸಿಸೋಡಿಯಾ ಮತ್ತು ಎಎಪಿ ‘ಕಟ್ಟರ್‌ ಇಮಾನ್‌ದಾರ್‌’ ಎಂದು ಕೋರ್ಟ್‌ ಸಾಬೀತುಪಡಿಸಿದೆ’ ಎಂದು ಗದ್ಗದಿತರಾದರು.

‘ಹೊಸದಾಗಿ ದಿಲ್ಲಿ ಚುನಾವಣೆ ನಡೆಸಿ. ಬಿಜೆಪಿ 10 ಸೀಟು ಗೆದ್ರೆ ರಾಜಕೀಯ ನಿವೃತ್ತನಾಗುವೆ’ ಎಂದು ಕೇಜ್ರಿವಾಲ್ ಸವಾಲು ಹಾಕಿದರು.ಪ್ರಕರಣದಲ್ಲಿ ‘ಶೌರ್ಯ’ ತೋರಿದ್ದಕ್ಕಾಗಿ ನ್ಯಾಯಾಧೀಶರಿಗೆ ಮತ್ತು ಕೋರ್ಟ್‌ಗೆ ಕೇಜ್ರಿವಾಲ್‌ ಪತ್ನಿ ಸುನೀತಾ ಕೇಜ್ರಿವಾಲ್‌ ಧನ್ಯವಾದ ಅರ್ಪಿಸಿದರು.

ಸುಳ್ಳಿನ ಜೇಡರ ಬಲೆಗೆ ಕತ್ತರಿ

ಸತ್ಯ ಜಯಿಸುತ್ತದೆ. ರಾಜಕೀಯ ಸೇಡಿನ ಭಾಗವಾಗಿ ನನ್ನ ವಿರುದ್ಧ ಆರೋಪ ಮಾಡಲಾಗಿತ್ತು. ದೆಹಲಿ ಅಬಕಾರಿ ನೀತಿ ಪ್ರಕರಣದಲ್ಲಿ ನ್ಯಾಯಾಂಗವು ಸುಳ್ಳಿನ ಜೇಡರ ಬಲೆಯನ್ನು ಕತ್ತರಿಸಿ ಹಾಕಿದೆ.’-ಕೆ. ಕವಿತಾ, ತೆಲಂಗಾಣ ಜಾಗೃತಿ ಅಧ್ಯಕ್ಷೆ-

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.
Read more Articles on

Recommended Stories

ಬೊಲಿವಿಯಾದಲ್ಲಿ ಸರಕು ಸಾಗಣೆ ವಿಮಾನ ಪತನ : 15 ಮಂದಿ ಸಾವು
ಆಫ್ಘನ್‌ ಮೇಲೆ ಪಾಕ್‌ ದಾಳಿ : ಸಾವಿನ ಸಂಖ್ಯೆ 331ಕ್ಕೇರಿಕೆ