ಬಿಹಾರ ಚುನಾವಣೆ: ಈಗಲೇ ಗ್ಯಾರಂಟಿ ಭಾಗ್ಯ ಘೋಷಣೆ

KannadaprabhaNewsNetwork |  
Published : Sep 15, 2025, 01:01 AM IST
ಬಿಹಾರ | Kannada Prabha

ಸಾರಾಂಶ

ವರ್ಷಾಂತ್ಯದಲ್ಲಿ ವಿಧಾನಸಭಾ ಚುನಾವಣೆ ನಡೆಯಲಿರುವ ಬಿಹಾರದಲ್ಲಿ ರಾಜಕೀಯ ಪಕ್ಷಗಳು ಆಕರ್ಷಕ ಯೋಜನೆಗಳು, ಉಚಿತ ಕೊಡುಗೆಗಳ ಘೋಷಣೆ ಮೂಲಕ ಭರದಿಂದ ಸಿದ್ಧತೆ ನಡೆಸಿವೆ. ಇದೀಗ ಪೋಸ್ಟರ್‌ಗಳು, ಕರಪತ್ರಗಳನ್ನು ಹಿಂದಿಕ್ಕಿ, ಮತದಾರರನ್ನು ಸೆಳೆಯಲು ಎಟಿಎಂ ಕಾರ್ಡ್‌ ಮತ್ತು ಚೆಕ್‌ಬುಕ್‌ ಮಾದರಿಯ ಪತ್ರಗಳು ಲಗ್ಗೆಯಿಟ್ಟಿವೆ.

ಎಟಿಎಂ ಕಾರ್ಡ್‌, ಚೆಕ್‌ಬುಕ್‌ ಮಾದರಿ ಕರಪತ್ರ ಬಿಡುಗಡೆ

-ಪೋಸ್ಟರ್‌, ಕರಪತ್ರಗಳ ಬದಲಿಗೆ ಹೊಸ ಮಾದರಿ ಲಗ್ಗೆ-ಕಾಂಗ್ರೆಸ್‌, ಜನ್‌ ಸುರಾಜ್‌ ಪಕ್ಷಗಳಿಂದ ಪ್ರಚಾರ ತಂತ್ರ

ಪಟನಾ: ವರ್ಷಾಂತ್ಯದಲ್ಲಿ ವಿಧಾನಸಭಾ ಚುನಾವಣೆ ನಡೆಯಲಿರುವ ಬಿಹಾರದಲ್ಲಿ ರಾಜಕೀಯ ಪಕ್ಷಗಳು ಆಕರ್ಷಕ ಯೋಜನೆಗಳು, ಉಚಿತ ಕೊಡುಗೆಗಳ ಘೋಷಣೆ ಮೂಲಕ ಭರದಿಂದ ಸಿದ್ಧತೆ ನಡೆಸಿವೆ. ಇದೀಗ ಪೋಸ್ಟರ್‌ಗಳು, ಕರಪತ್ರಗಳನ್ನು ಹಿಂದಿಕ್ಕಿ, ಮತದಾರರನ್ನು ಸೆಳೆಯಲು ಎಟಿಎಂ ಕಾರ್ಡ್‌ ಮತ್ತು ಚೆಕ್‌ಬುಕ್‌ ಮಾದರಿಯ ಪತ್ರಗಳು ಲಗ್ಗೆಯಿಟ್ಟಿವೆ.

ಜನ ಸುರಾಜ್‌ ಪಕ್ಷದ ನೇತಾರ ಪ್ರಶಾಂತ್‌ ಕಿಶೋರ್‌ ಎಟಿಎಂ ಕಾರ್ಡ್‌ ಹೋಲುವ ‘ಪರಿವಾರ ಲಾಭ ಕಾರ್ಡ್‌’ ಅನ್ನು ಬಿಡುಗಡೆ ಮಾಡಿದ್ದಾರೆ. ಯುವಕರಿಗೆ ಉದ್ಯೋಗ, ವೃದ್ಧರು, ವಿಧವೆಯರು ಮತ್ತು ಅಂಗವಿಕಲರಿಗೆ ಪಿಂಚಣಿ, ಮಹಿಳೆಯರಿಗೆ ಕಡಿಮೆ ಬಡ್ಡಿದರದಲ್ಲಿ ಸಾಲ, 15ನೇ ವಯಸ್ಸಿನವರೆಗೆ ಉಚಿತ ಶಿಕ್ಷಣ, ರೈತರಿಗೆ ಸಹಾಯಧನ ಮುಂತಾದ ಭರವಸೆಗಳನ್ನು ಈ ಕಾರ್ಡ್‌ನಲ್ಲಿ ವಿವರಿಸಲಾಗಿದೆ. ಇತ್ತ ಆರ್‌ಜೆಡಿ ಜೊತೆ ಮೈತ್ರಿ ಮಾಡಿಕೊಂಡಿರುವ ಕಾಂಗ್ರೆಸ್‌ ಸಹ ಮತದಾರರನ್ನು ಸೆಳೆಯಲು ವಿಶೇಷ ತಂತ್ರ ಹೂಡಿದೆ. ಚೆಕ್‌ಬುಕ್‌ ಮಾದರಿಯಲ್ಲಿ ಕಿರು ಪುಸ್ತಕವನ್ನು ಬಿಡುಗಡೆ ಮಾಡಿದ್ದು, ಅದರಲ್ಲಿ 25 ಲಕ್ಷ ರು.ಗಳವರೆಗೆ ಉಚಿತ ವೈದ್ಯಕೀಯ ಚಿಕಿತ್ಸೆ, ವಿಧವೆಯರು, ಅಂಗವಿಕಲರು ಮತ್ತು ವೃದ್ಧರಿಗೆ ಮಾಸಿಕ 1,500 ರು. ಸಹಾಯಧನ, ಶಾಲಾ ವಿದ್ಯಾರ್ಥಿಗಳಿಗೆ ಉಚಿತ ಟ್ಯಾಬ್ಲೆಟ್‌ಗಳು, 200 ಯೂನಿಟ್ ಉಚಿತ ವಿದ್ಯುತ್, ಭೂರಹಿತ ಕುಟುಂಬಗಳಿಗೆ ನಿವೇಶನ ಮತ್ತು ಮಹಿಳೆಯರಿಗೆ ಮಾಸಿಕ 2,500 ರು. ನೀಡುವುದಾಗಿ ಭರವಸೆ ನೀಡಿದೆ. ಎರಡೂ ಪಕ್ಷಗಳು ಮನೆಮನೆಗೆ ಕಾರ್ಡ್‌ಗಳನ್ನು ತಲುಪಿಸುತ್ತಿದ್ದು, ತಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ಆಶ್ವಾಸನೆಗಳನ್ನು ಈಡೇರಿಸುವ ಭರವಸೆ ನೀಡಿವೆ.

ಮತ್ತೊಂದೆಡೆ ಜೆಡಿಯು, ಬಿಜೆಪಿ ನೇತೃತ್ವದ ನಿತೀಶ್‌ ಕುಮಾರ್‌ ಸರ್ಕಾರ ಕಳೆದ 2-3 ತಿಂಗಳಿನಿಂದಲೇ ಹೊಸ ಹೊಸ ಗ್ಯಾರಂಟಿ ಜಾರಿಯ, ಗೆದ್ದುಬಂದರೆ ಮತ್ತಷ್ಟು ಗ್ಯಾರಂಟಿ ಜಾರಿಯ ಭರವಸೆ ನೀಡಿದೆ.

PREV

Recommended Stories

ನನಗೆ ಏಡ್ಸ್‌ ಬಂದಿಲ್ಲ: ಉಗ್ರ ಇಸ್ಲಾಂಮತ ಪ್ರಚಾರಕ ಝಾಕಿರ್‌ ನಾಯ್ಕ್‌
ಹಿಂದೂ ಸಮಾಜದಲ್ಲಿ ಸಮಾನತೆ ಇದ್ದಿದ್ದರೆ ಜನ ಏಕೆ ಮತಾಂತರಗೊಳ್ಳುತ್ತಿದ್ದರು? : ಸಿದ್ದರಾಮಯ್ಯ