ರೆಜೀನಗರ್ (ಪ.ಬಂಗಾಳ): ಟಿಎಂಸಿಯಿಂದ ಉಚ್ಚಾಟನೆ ಆಗಿ ಹೊಸ ಪಕ್ಷ ಕಟ್ಟಿದ್ದ ಶಾಸಕ ಹುಮಾಯುನ್ ಕಬೀರ್, ಮುರ್ಷಿದಾಬಾದ್‌ನಲ್ಲಿ ಅಯೋಧ್ಯೆಯ ಬಾಬ್ರಿ ಮಾದರಿಯ ಮಸೀದಿ ನಿರ್ಮಾಣವನ್ನು ಬುಧವಾರದಿಂದ ಆರಂಭಿಸಿದ್ದಾರೆ. 50-55 ಕೋಟಿ ರು. ವೆಚ್ಚದಲ್ಲಿ ಇದನ್ನು 2 ವರ್ಷದಲ್ಲಿ ಪೂರ್ಣಗೊಳಿಸುವುದಾಗಿ ಅವರು ಹೇಳಿದ್ದಾರೆ. ಡಿ.6ರಂದು ಇದರ ಶಂಕುಸ್ಥಾಪನೆ ನಡೆದಿತ್ತು.
ಬುಧವಾರ ಮಧ್ಯಾಹ್ನ ಕಬೀರ್‌ರ ಉಪಸ್ಥಿತಿಯಲ್ಲಿ ಇಟ್ಟಿಗೆ ಇಡುವ ಕಾರ್ಯ
ಬುಧವಾರ ಮಧ್ಯಾಹ್ನ ಕಬೀರ್‌ರ ಉಪಸ್ಥಿತಿಯಲ್ಲಿ ಇಟ್ಟಿಗೆ ಇಡುವ ಕಾರ್ಯ ಆರಂಭವಾಗಿದ್ದು, ಅವರ ಬೆಂಬಲಿಗರು ತಲೆ ಮೇಲೆ ಇಟ್ಟಿಗೆಗಳನ್ನು ಹೊತ್ತುತರುವ ಮೂಲಕ ಕೈಜೋಡಿಸಿದರು.
ಇದನ್ನು ವಿರೋಧಿಸುವವರು ಹಿಂದೆ ಸರಿಯಿರಿ.
ಈ ವೇಳೆ ಮಾತನಾಡಿದ ಕಬೀರ್, ‘ಇದನ್ನು ವಿರೋಧಿಸುವವರು ಹಿಂದೆ ಸರಿಯಿರಿ. ಕಾರಣ, ಜನರು ಅವರಿಷ್ಟದ ಧರ್ಮ ಪಾಲನೆ ಹಾಗೂ ಧಾರ್ಮಿಕ ಸ್ಥಳಗಳ ನಿರ್ಮಾಣ ಮಾಡಲು ಸ್ವತಂತ್ರರಾಗಿದ್ದಾರೆ. ಅಲ್ಲಾಹ್‌ನನ್ನು ಮೆಚ್ಚಿಸುವುದಷ್ಟೇ ನನ್ನ ಉದ್ದೇಶ’ ಎಂದರು.
ಅಂತೆಯೇ, ಬೋರ್ಡ್ ಪರೀಕ್ಷೆಗಳು ನಡೆಯುತ್ತಿರುವ ಹಿನ್ನೆಲೆಯಲ್ಲಿ ಪಲಾಶಿಯಿಂದ ಇಟಾಹಾರ್ ವರೆಗೆ 100 ಕಾರುಗಳೊಂದಿಗೆ ನಡೆಸಲುದ್ದೇಶಿಸಿದ್ದ 235 ಕಿ.ಮೀ. ಬಾಬ್ರಿ ಯಾತ್ರೆಯನ್ನು ಕೈಬಿಟ್ಟು, ಗುರುವಾರ ಪಲಾಶಿಯಿಂದ ಬೆಲ್ಡಾಂಗಾದ ತನಕ 50,000 ಜನರೊಂದಿಗೆ 22 ಕಿ.ಮೀ. ಪಾದಯಾತ್ರೆ ನಡೆಸುವುದಾಗಿ ಕಬೀರ್ ತಿಳಿಸಿದ್ದಾರೆ.
