ದೂರದೃಷ್ಟಿಯ ಉದ್ಯಮಿ ಟಾಟಾ ಸಮೂಹದ ಸಂಸ್ಥಾಪಕ ಜೆಮ್ಶೆಡ್‌ಜೀ ಮರಿ ಮೊಮ್ಮಗ ರತನ್‌ ಜೀವಗಾಥೆ

Published : Oct 10, 2024, 05:08 AM ISTUpdated : Oct 10, 2024, 07:33 AM IST
Biography of Ratan

ಸಾರಾಂಶ

ರತನ್‌ ಟಾಟಾ ಅವರು ಟಾಟಾ ಸಮೂಹದ ಸಂಸ್ಥಾಪಕ ಜೆಮ್ಶೆಡ್‌ಜೀ ಟಾಟಾ ಅವರ ಮರಿ ಮೊಮ್ಮಗ. 1937ರಲ್ಲಿ ಮುಂಬೈನಲ್ಲಿ ಅವರು ಜನಿಸಿದರು.

1 ರತನ್‌ ಟಾಟಾ ಅವರು ಟಾಟಾ ಸಮೂಹದ ಸಂಸ್ಥಾಪಕ ಜೆಮ್ಶೆಡ್‌ಜೀ ಟಾಟಾ ಅವರ ಮರಿ ಮೊಮ್ಮಗ. 1937ರಲ್ಲಿ ಮುಂಬೈನಲ್ಲಿ ಅವರು ಜನಿಸಿದರು.

2 1948ರಲ್ಲಿ ತಂದೆ-ತಾಯಿ ಪ್ರತ್ಯೇಕಗೊಂಡಾಗ ಅಜ್ಜಿ ನವಾಜ್‌ಬಾಯಿ ಆರ್‌.ಟಾಟಾ ಅವರೇ ರತನ್‌ ಟಾಟಾ ಅವರನ್ನು ಬೆಳೆಸಿದರು.

3 ನಾಲ್ಕು ಬಾರಿ ರತನ್‌ ಟಾಟಾ ಅವರ ಬದುಕಿನಲ್ಲಿ ಮದುವೆಯ ಅವಕಾಶ ಒದಗಿ ಬಂದಿತ್ತು. ಆದರೂ ಅವರು ಕೊನೆಯವರೆಗೂ ಏಕಾಂಗಿಯಾಗಿಯೇ ಉಳಿದುಬಿಟ್ಟರು.

4 ಅಮೆರಿಕದ ಲಾಸ್‌ ಏಂಜಲೀಸ್‌ನಲ್ಲಿದ್ದಾಗ ರತನ್‌ ಟಾಟಾ ಅವರು ಯುವತಿಯೊಬ್ಬಳ ಜತೆ ಪ್ರೀತಿಯಲ್ಲಿ ಬಿದ್ದಿದ್ದರು. ಆದರೆ 1962ರಲ್ಲಿ ಭಾರತ-ಚೀನಾ ಯುದ್ಧ ನಡೆಯುತ್ತಿದ್ದ ಕಾರಣ ಯುವತಿಯ ಪೋಷಕರು ಆಕೆಯನ್ನು ಭಾರತಕ್ಕೆ ತೆರಳಲು ಅವಕಾಶ ನೀಡಲಿಲ್ಲ. ಹೀಗಾಗಿ ಆ ಸಂಬಂಧ ಮದುವೆಯವರೆಗೆ ಹೋಗಲೇ ಇಲ್ಲ.

5 ವೃತ್ತಿ ಜೀವನದ ಆರಂಭದಲ್ಲಿ ಅಂದರೆ 1961ರಲ್ಲಿ ರತನ್‌ ಟಾಟಾ ಅವರು ಟಾಟಾ ಸ್ಟೀಲ್‌ ಶಾಪ್‌ನ ಫ್ಲೋರ್‌ ನಿರ್ವಹಣೆಯ ಜವಾಬ್ದಾರಿ ನೋಡಿಕೊಳ್ಳುತ್ತಿದ್ದರು. ಈ ಅನುಭವ ಮುಂದೆ ಅವರಿಗೆ ಟಾಟಾ ಸಮೂಹದ ನಾಯಕತ್ವ ನಿರ್ವಹಣೆಯಲ್ಲಿ ಸಾಕಷ್ಟು ನೆರವಾಯಿತು.

6 ದೇಶದ ಅತಿದೊಡ್ಡ ಉದ್ಯಮವಾಗಿರುವ ಟಾಟಾ ಸಮೂಹದ ಮುಖ್ಯಸ್ಥರಾಗಿ 1991ರಲ್ಲಿ ಅವರು ಅಧಿಕಾರ ಸ್ವೀಕರಿಸಿದರು. 2012ರವರೆಗೂ ಸಂಸ್ಥೆಯ ಮುಖ್ಯಸ್ಥರಾಗಿ ಮುಂದುವರಿದರು.

7 ಭಾರತದ ಆರ್ಥಿಕತೆಯಲ್ಲಿ ಉದಾರೀಕರಣದ ಪ್ರಕ್ರಿಯೆ ನಡೆಯುತ್ತಿದ್ದಾಗಲೇ ಅವರು ಟಾಟಾ ಗ್ರೂಪ್‌ಗೆ ಮರುಸ್ವರೂಪ ನೀಡುವ ಪ್ರಕ್ರಿಯೆ ಆರಂಭಿಸಿದರು. ಭಾರತದ ಜನಪ್ರಿಯ ಕಾರುಗಳಾದ ಟಾಟಾ ನ್ಯಾನೋ ಮತ್ತು ಟಾಟಾ ಇಂಡಿಕಾದ ಮಾರಾಟ ವಿಸ್ತರಣೆಯಲ್ಲಿ ಇವರ ಪಾತ್ರ ಮಹತ್ವದ್ದು.

8 ಜನಪ್ರಿಯ ಟೀ ಸಂಸ್ಥೆಯಾದ ಟೆಟ್ಲೆ ಸಂಸ್ಥೆಯನ್ನು ಟಾಟಾ ಟೀ ಖರೀದಿಸುವಲ್ಲಿ, ಯುರೋಪ್‌ನ ಐಷಾರಾಮಿ ಕಾರುಗಳಾದ ಜಾಗ್ವಾರ್‌ ಮತ್ತು ಲ್ಯಾಂಡ್‌ ರೋವರ್‌ ಅನ್ನು ಟಾಟಾ ಮೋಟಾರ್ಸ್‌ ತೆಕ್ಕೆಗೆ ತರುವಲ್ಲಿ ಹಾಗೂ 2004ರಲ್ಲಿ ಕೋರಸ್‌ ಸಂಸ್ಥೆಯನ್ನು ಟಾಟಾ ಸ್ಟೀಲ್‌ ಖರೀದಿ ಮಾಡುವ ಹಿಂದೆ ಇವರ ಪಾತ್ರ ನಿರ್ಣಾಯಕವಾಗಿತ್ತು.

9 ಮಧ್ಯಮ ವರ್ಗಕ್ಕೆ ಕೈಗೆಟಕಬಹುದಾದ, ವಿಶ್ವದ ಅತಿ ಅಗ್ಗದ ಕಾರು ಉತ್ಪಾದಿಸುವುದಾಗಿ ಮಾತು ಕೊಟ್ಟಿದ್ದ ಅವರು 2019ರಲ್ಲಿ ಅದನ್ನು ಈಡೇರಿಸಿದರು. 1 ಲಕ್ಷ ರು. ಬೆಲೆಯ ಟಾಟಾ ನ್ಯಾನೋ ಕಾರನ್ನು ದೇಶದಲ್ಲಿ ಪರಿಚಯಿಸಿದರು.

10 ಟಾಟಾ ಸಮೂಹದ ಮುಖ್ಯಸ್ಥನ ಹುದ್ದೆಯಿಂದ ಕೆಳಗಿಳಿದ ಬಳಿಕ ಅವರು ಟಾಟಾ ಸಮೂಹದ ವಿಶ್ರಾಂತ ಅಧ್ಯಕ್ಷರಾಗಿ ಮುಂದುವರಿದರು.

PREV

Recommended Stories

15 ವರ್ಷ ಬಳಿಕ ಗುಜರಿ ವ್ಯಾಪ್ತಿಗೆಎಲೆಕ್ಟ್ರಿಕ್‌ ವಾಹನಗಳು ಬರಲ್ಲ?
ಡೆಂಘೀ ವಿರುದ್ಧ ಹೋರಾಟಕ್ಕೆ ಯುರೋಪ್ - ಭಾರತ ವಿಜ್ಞಾನಿಗಳ ಮೈತ್ರಿ