ಟಾಟಾ ಸಮೂಹದ ಮುಖ್ಯಸ್ಥರಾಗಿದ್ದ ಉದ್ಯಮಿ ರತನ್‌ ಟಾಟಾ ಇನ್ನಿಲ್ಲ - ಅನಾರೋಗ್ಯದಿಂದ ನಿಧನ

Published : Oct 10, 2024, 04:51 AM ISTUpdated : Oct 10, 2024, 04:52 AM IST
Rathan TATA

ಸಾರಾಂಶ

ಭಾರತದ ಅತಿದೊಡ್ಡ ಸಮೂಹ ಸಂಸ್ಥೆಗಳಲ್ಲಿ ಒಂದಾದ ಟಾಟಾ ಸಮೂಹದ ಮುಖ್ಯಸ್ಥರಾಗಿದ್ದ ಹಾಗೂ ದೇಶ-ವಿದೇಶಗಳಲ್ಲಿ ಮನೆಮಾತಾಗಿದ್ದ ರತನ್ ಟಾಟಾ (86) ಬುಧವಾರ ತಡರಾತ್ರಿ ಇಹಲೋಕ ತ್ಯಜಿಸಿದ್ದಾರೆ.

ಮುಂಬೈ: ಭಾರತದ ಅತಿದೊಡ್ಡ ಸಮೂಹ ಸಂಸ್ಥೆಗಳಲ್ಲಿ ಒಂದಾದ ಟಾಟಾ ಸಮೂಹದ ಮುಖ್ಯಸ್ಥರಾಗಿದ್ದ ಹಾಗೂ ದೇಶ-ವಿದೇಶಗಳಲ್ಲಿ ಮನೆಮಾತಾಗಿದ್ದ ರತನ್ ಟಾಟಾ (86) ಬುಧವಾರ ತಡರಾತ್ರಿ ಇಹಲೋಕ ತ್ಯಜಿಸಿದ್ದಾರೆ. ಟಾಟಾ ಸಮೂಹ ಬುಧವಾರ ತಡರಾತ್ರಿ 11.50ಕ್ಕೆ ಇದರ ಅಧಿಕೃತ ಘೋಷಣೆ ಮಾಡಿದೆ.

ಸೋಮವಾರವೇ ಟಾಟಾ ಆರೋಗ್ಯ ಹದಗೆಟ್ಟಿದೆ ಎಂದು ವರದಿಯಾಗಿತ್ತು. ಆದರೆ ಟಾಟಾ ಅವರು, ‘ನಾನು ಸ್ವಸ್ಥನಾಗಿದ್ದೇನೆ ಹಾಗೂ ವಯೋಸಹಜ ಕಾಯಿಲೆಗಳು ಹಾಗೂ ಇತರ ವೈದ್ಯಕೀಯ ಸಮಸ್ಯೆಗಳ ಕಾರಣ ವಾಡಿಕೆಯ ತಪಾಸಣೆಗೆ ಆಸ್ಪತ್ರೆಗೆ ದಾಖಲಾಗಿದ್ದೇನೆ’ ಎಂದು ಸ್ಪಷ್ಟಪಡಿಸಿದ್ದರು ಹಾಗೂ ‘ಉತ್ಸಾಹದಿಂದ ಇದ್ದೇನೆ’ ಎಂದು ದೇಶವಾಸಿಗಳಲ್ಲಿ ಧೈರ್ಯ ತುಂಬಿದ್ದರು. ಆದರೆ ಬುಧವಾರ ಸಂಜೆ ಅವರ ಸ್ಥಿತಿ ಗಂಭೀರವಾಗಿದೆ ಎಂಬ ಸುದ್ದಿ ಮತ್ತೆ ಹರಡಿತ್ತು. ಆದರೆ ಯಾರೂ ಅಧಿಕೃತ ಹೇಳಿಕೆ ನೀಡಿರಲಿಲ್ಲ. ಇದಾದ ಕೆಲವು ಗಂಟೆಗಳ ಬಳಿಕ ಬುಧವಾರ ಮಧ್ಯರಾತ್ರಿ ಅವರ ಸಾವಿನ ಘೋಷಣೆ ಹೊರಬಿದ್ದಿದೆ.

ಟಾಟಾ ಅವರ ನಿಧನಕ್ಕೆ ಗಣ್ಯರು ಹಾಗೋ ಸೋಷಿಯಲ್‌ ಮೀಡಿಯಾದಲ್ಲಿ ಸಂತಾಪದ ಮಹಾಪೂರವೇ ಹರಿದುಬಂದಿದೆ.

ಟಾಟಾ ಅವರು 1991ರಲ್ಲಿ ಟಾಟಾ ಸ್ಟೀಲ್‌ ಸಮೂಹಕ್ಕೆ ಅಧ್ಯಕ್ಷರಾಗಿದ್ದರು ಮತ್ತು 100 ವರ್ಷಗಳ ಹಿಂದೆ ತಮ್ಮ ಮುತ್ತಜ್ಜ ಸ್ಥಾಪಿಸಿದ ಗುಂಪನ್ನು 2012 ರವರೆಗೆ ನಡೆಸುತ್ತಿದ್ದರು.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ಕ್ಯಾನ್ಸರ್‌ ಅಂಶದ ಆತಂಕ: ದೇಶವ್ಯಾಪಿ ಮೊಟ್ಟೆ ಟೆಸ್ಟ್‌
ವೈದ್ಯೆಯ ಹಿಜಾಬ್‌ ಎಳೆದ ಸಿಎಂ ನಿತೀಶ್‌: ವಿವಾದ