ನವದೆಹಲಿ: ಕರ್ನಾಟಕವೂ ಸೇರಿದಂತೆ 7 ರಾಜ್ಯಗಳಲ್ಲಿ ಖಾಲಿಯಾಗಲಿರುವ 14 ರಾಜ್ಯಸಭಾ ಸ್ಥಾನಗಳಿಗೆ ಬಿಜೆಪಿ ಅಭ್ಯರ್ಥಿಗಳ ಪಟ್ಟಿಯನ್ನು ಭಾನುವಾರ ಬಿಡುಗಡೆ ಮಾಡಿದ್ದು, ಇತ್ತೀಚೆಗಷ್ಟೇ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ್ದ ಮಾಜಿ ಕೇಂದ್ರ ಸಚಿವ ಆರ್‌ಪಿಎನ್ ಸಿಂಗ್ ಅವರಿಗೆ ಉತ್ತರ ಪ್ರದೇಶದಿಂದ ಟಿಕೆಟ್ ನೀಡಲಾಗಿದೆ.
ಕರ್ನಾಟಕದಿಂದ ಹಿರಿಯ ನಾಯಕ ನಾರಾಯಣ ಭಾಂಡಗೆ ಅವರಿಗೆ ಟಿಕೆಟ್ ನೀಡಲಾಗಿದೆ. ಜೊತೆಗೆ ಉತ್ತರ ಪ್ರದೇಶದಲ್ಲೂ ಪ್ರಮುಖ ನಾಯಕ ಡಾ. ಸುಧಾಂಶು ತ್ರಿವೇದಿಗೆ ಟಿಕೆಟ್ ನೀಡಲಾಗಿದ್ದು, ಹರಿಯಾಣದಿಂದ ಮಾಜಿ ಬಿಜೆಪಿ ಅಧ್ಯಕ್ಷ ಸುಭಾಷ್ ಬರಾಲಾ, ಉತ್ತರಾಖಂಡ ಬಿಜೆಪಿ ಅಧ್ಯಕ್ಷ ಮಹೇಂದ್ರ ಭಟ್ ಅವರಿಗೆ ಟಿಕೆಟ್ ನೀಡಲಾಗಿದೆ.
ಉತ್ತರಾಖಂಡದ ಹಾಲಿ ಸಂಸದ ಅನಿಲ್ ಬಲೂನಿಗೆ ಟಿಕೆಟ್ ಸಿಕ್ಕಿಲ್ಲ. ಇನ್ನು ಪಟ್ಟಿಯಲ್ಲಿ ಬಿಹಾರದ ನಾಯಕ ಸುಶೀಲ್ ಮೋದಿ ಹೆಸರೂ ಇಲ್ಲ.
ಇದರ ಜೊತೆಗೆ ಉತ್ತರ ಪ್ರದೇಶದಿಂದ 7, ಉತ್ತರಾಖಂಡದಿಂದ ಬಿಹಾರದಿಂದ 2, ಛತ್ತೀಸ್‌ಗಢ, ಉತ್ತರಾಖಂಡ, ಪಶ್ಚಿಮ ಬಂಗಾಳ, ಹರಿಯಾಣ, ಕರ್ನಾಟಕದಿಂದ ತಲಾ 1 ಅಭ್ಯರ್ಥಿಗೆ ಬಿಜೆಪಿ ರಾಜ್ಯಸಭಾ ಟಿಕೆಟ್ ಪ್ರಕಟಿಸಿದೆ.