ಪುಣೆ: ರಾಜಕೀಯ ಪಕ್ಷವೊಂದನ್ನು ಸಂಸ್ಥಾಪಕರಿಂದಲೇ ಕಸಿದು ಮತ್ತೊಬ್ಬರಿಗೆ ನೀಡಿರುವ ಚುನಾವಣಾ ಆಯೋಗದ ನಡೆ ಆಶ್ಚರ್ಯಕರವಾಗಿದೆ ಎಂದು ಎನ್‌ಸಿಪಿ (ಶರದ್ ಪವಾರ್ ಬಣ) ನಾಯಕ ಶರದ್ ಪವಾರ್ ತಿಳಿಸಿದ್ದಾರೆ.
ಭಾನುವಾರ ಮಾತನಾಡಿದ ಅವರು, ‘ಜನರಿಗೆ ಪಕ್ಷದ ಸಿದ್ಧಾಂತ ಮತ್ತು ಯೋಜನೆಗಳು ಮುಖ್ಯವಾಗುತ್ತದೆಯೇ ಹೊರತು, ಚಿಹ್ನೆಯಲ್ಲ.
ಹಾಗಾಗಿ ಜನ ನಮ್ಮನ್ನು ಮುಂದಿನ ಚುನಾವಣೆಯಲ್ಲಿ ನಮ್ಮನ್ನು ಬೆಂಬಲಿಸುತ್ತಾರೆಂದು ನಂಬಿದ್ದು, ಚುನಾವಣಾ ಆಯೋಗದ ನಡೆಯನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಲಾಗಿದೆ’ ಎಂದರು.
ಚುನಾವಣಾ ಆಯೋಗವು ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷದ ಮೂಲ ಹೆಸರು ಮತ್ತು ಕೈಗಡಿಯಾರದ ಚಿಹ್ನೆಯನ್ನು ಅಜಿತ್ ಪವಾರ್ ಬಣಕ್ಕೆ ನೀಡಿ ಆದೇಶಿಸಿತ್ತು.
ಜೊತೆಗೆ ಪಕ್ಷದ ಮೂಲ ಸಂಸ್ಥಾಪಕರಾದ ಶರದ್ ಪವಾರ್ ಬಣಕ್ಕೆ ಹೊಸ ಹೆಸರು ಮತ್ತು ಚಿಹ್ನೆಯನ್ನು ನೀಡಿತ್ತು.