ಕೋಲ್ಕತಾ: ಪಶ್ಚಿಮ ಬಂಗಾಳದಿಂದ ಪತ್ರಕರ್ತೆ ಸಾಗರಿಕಾ ಘೋಷ್ ಸೇರಿದಂತೆ ನಾಲ್ವರಿಗೆ ತೃಣಮೂಲ ಕಾಂಗ್ರೆಸ್ ಪಕ್ಷವು ರಾಜ್ಯಸಭೆ ಟಿಕೆಟ್ ಘೋಷಿಸಿದೆ. ಖ್ಯಾತ ಪತ್ರಕರ್ತ ರಾಜ್‌ದೀಪ್ ಸರದೇಸಾಯಿ ಅವರ ಪತ್ನಿ ಸಾಗರಿಕಾ ಘೋಷ್ ಟೈಮ್ಸ್ ಆಫ್ ಇಂಡಿಯಾ, ಔಟ್‌ಲುಕ್, ಸಿಎನ್‌ಎನ್-ಐಬಿಎನ್, ಬಿಬಿಸಿ ಮುಂತಾದ ಖ್ಯಾತ ಸುದ್ದಿಸಂಸ್ಥೆಗಳಲ್ಲಿ ಕಾರ್ಯ ನಿರ್ವಹಿಸಿದ ಅನುಭವ ಹೊಂದಿದ್ದಾರೆ.
ಇವರ ಜೊತೆಗೆ ಮಾಜಿ ಸಂಸದರಾದ ಸುಷ್ಮಿತಾ ದೇವ್, ಮಮತಾ ಬಾಲಾ ಠಾಕೂರ್ ಹಾಗೂ ಹಾಲಿ ರಾಜ್ಯಸಭಾ ಸದಸ್ಯ ಮೊಹಮ್ಮದ್ ನದೀಮುಲ್ ಹಕ್ ಅವರಿಗೂ ತೃಣಮೂಲ ಕಾಂಗ್ರೆಸ್ ಟಿಕೆಟ್ ಘೋಷಿಸಿದೆ.
ಈ ಬಾರಿ ಪಶ್ಚಿಮ ಬಂಗಾಳದಲ್ಲಿ 5 ರಾಜ್ಯಸಭಾ ಸ್ಥಾನ ತೆರವಾಗುತ್ತಿದ್ದು, 4 ಸ್ಥಾನಗಳನ್ನು ತೃಣಮೂಲ ಕಾಂಗ್ರೆಸ್ ಗೆಲ್ಲಬಹುದಾಗಿದೆ. ಹೀಗಾಗಿ ಈ ನಾಲ್ವರ ಗೆಲುವೂ ಸಲೀಸಾಗಿದೆ. ಮತ್ತೊಂದು ಸ್ಥಾನದಲ್ಲಿ ಸ್ಪರ್ಧಿಸಿದರೆ ಬಿಜೆಪಿ ಜೊತೆ ಸೆಣಸಾಡಬೇಕಾಗುತ್ತದೆ.