ಇರಾನ್‌-ಅಮೆರಿಕ ನಡುವೆ ಸಂಘರ್ಷ ಸಾಧ್ಯತೆ ಇರುವ ಬೆನ್ನಲ್ಲೇ ಇರಾನ್‌ನಲ್ಲಿರುವ ಅಮೆರಿಕ ರಾಯಭಾರ ಕಚೇರಿಯು ತುರ್ತು ಭದ್ರತಾ ಎಚ್ಚರಿಕೆ ಹೊರಡಿಸಿದೆ ಹಾಗೂ ಅಮೆರಿಕದ ನಾಗರಿಕರು ಕೂಡಲೇ ಇರಾನ್ ತೊರೆಯಬೇಕು ಎಂದು ಸಲಹೆ ನೀಡಿದೆ.

- ಯುದ್ಧಭೀತಿ ನಡುವೆಯೇ ಮಾರ್ಗಸೂಚಿ

ವಾಷಿಂಗ್ಟನ್‌: ಇರಾನ್‌-ಅಮೆರಿಕ ನಡುವೆ ಸಂಘರ್ಷ ಸಾಧ್ಯತೆ ಇರುವ ಬೆನ್ನಲ್ಲೇ ಇರಾನ್‌ನಲ್ಲಿರುವ ಅಮೆರಿಕ ರಾಯಭಾರ ಕಚೇರಿಯು ತುರ್ತು ಭದ್ರತಾ ಎಚ್ಚರಿಕೆ ಹೊರಡಿಸಿದೆ ಹಾಗೂ ಅಮೆರಿಕದ ನಾಗರಿಕರು ಕೂಡಲೇ ಇರಾನ್ ತೊರೆಯಬೇಕು ಎಂದು ಸಲಹೆ ನೀಡಿದೆ.

‘ಇರಾನ್‌ ಸರ್ಕಾರವು ಮೊಬೈಲ್, ಲ್ಯಾಂಡ್‌ಲೈನ್ ಮತ್ತು ರಾಷ್ಟ್ರೀಯ ಇಂಟರ್ನೆಟ್ ನಿರ್ಬಂಧ ಮುಂದುವರೆಸಿದೆ ಹಾಗೂ ಜನಸಂಚಾರ ಕೂಡ ಕಷ್ಟವಾಗಿದೆ. ಪರಿಸ್ಥಿತಿ ಹೀಗಿದ್ದಾಗ ಅಲ್ಲಿರುವ ಅಮೆರಿಕ ನಾಗರಿಕರು ದೇಶ ತೊರೆಯಬೇಕು. ಆದರೆ ಪ್ರತಿಯೊಂದಕ್ಕೂ ಅಮೆರಿಕ ಸರ್ಕಾರದ ಸಹಾಯ ಬಯಸಬಾರದು’ ಎಂದಿದೆ.

‘ದೇಶ ಬಿಡಲು ಸಾಧ್ಯವಾಗದವರು ಸುರಕ್ಷಿತ ಸ್ಥಳಗಳಲ್ಲಿ ಆಶ್ರಯ ಪಡೆಯಬೇಕು. ಆಹಾರ, ನೀರು ಮತ್ತು ಔಷಧಿಗಳ ದಾಸ್ತಾನು ಇಟ್ಟುಕೊಳ್ಳಬೇಕು. ಆದಷ್ಟು ಹೊರಗೆ ಸಂಚರಿಸದೆ ಜಾಗರೂಕರಾಗಿರಬೇಕು’ ಎಂದು ಸೂಚಿಸಿದೆ.

ಇತ್ತೀಚೆಗೆ ಅಮೆರಿಕ ಯುದ್ಧನೌಕೆಗಳು ಇರಾನ್‌ನತ್ತ ಸಾಗುತ್ತಿವೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ ಎಚ್ಚರಿಸಿದ್ದರು. ಇರಾನ್‌ನಲ್ಲಿ ಸರ್ವೋಚ್ಚ ನಾಯಕ ಖಮೇನಿ ವಿರುದ್ಧ ನಡೆಯುತ್ತಿರುವ ದಂಗೆಯನ್ನು ಬೆಂಬಲಿಸಿ ಅವರು ಈ ಎಚ್ಚರಿಕೆ ನೀಡಿದ್ದರು.