ಒಡಿಶಾ ಸಿಎಂ ರೇಸಲ್ಲಿ ಪ್ರಧಾನ್‌, ಓರಂ, ಸಂಬಿತ್‌, ಪಾಂಡಾ

KannadaprabhaNewsNetwork |  
Published : Jun 06, 2024, 02:00 AM IST
ಧರ್ಮೇಂದ್ರ ಪ್ರಧಾನ್‌ | Kannada Prabha

ಸಾರಾಂಶ

ಒಡಿಶಾ ಸಿಎಂ ರೇಸಲ್ಲಿ ಪ್ರಧಾನ್‌, ಓರಂ, ಸಂಬಿತ್‌, ಪಾಂಡಾ ಮುಂಚೂಣಿಯಲ್ಲಿದ್ದು, ಚೊಚ್ಚಲ ಬಾರಿ ಅಧಿಕಾರ ಹಿಡಿಯುತ್ತಿರುವ ಬಿಜೆಪಿ ಪಕ್ಷ ಕಟ್ಟುವ, ಬೆಳೆಸುವ ನಾಯಕರಿಗಾಗಿ ಹುಡುಕಾಟ ನಡೆಸಿದೆ.

ಭುವನೇಶ್ವರ: ಒಡಿಶಾದಲ್ಲಿ ಇದೇ ಮೊದಲ ಬಾರಿಗೆ ಅಧಿಕಾರ ಹಿಡಿಯುವ ಅವಕಾಶ ಪಡೆದಿರುವ ಬಿಜೆಪಿಯಲ್ಲಿ ಇದೀಗ ಮುಖ್ಯಮಂತ್ರಿ ಯಾರಾಗಬಹುದು ಎಂಬ ಚರ್ಚೆ ಬಲವಾಗಿ ನಡೆದಿದೆ.2 ದಶಕಗಳಿಗಿಂತಲೂ ಹೆಚ್ಚಿನ ಅವಧಿ ಏಕಾಂಗಿಯಾಗಿ ಅಧಿಕಾರ ಚಲಾಯಿಸಿದ ಬಿಜು ಜನತಾ ದಳ (ಬಿಜೆಡಿ)ಯನ್ನು ಅಧಿಕಾರದಿಂದ ಕೆಳಗೆ ಇಳಿಸುವಲ್ಲಿ ಯಶಸ್ವಿಯಾಗಿರುವ ಬಿಜೆಪಿ, ಇದೀಗ ರಾಜ್ಯದಲ್ಲಿ ಪಕ್ಷವನ್ನು ಬಲವಾಗಿ ಬೇರುಬಿಡಲು ನೆರವಾಗಬಲ್ಲ ಮುಖ್ಯಮಂತ್ರಿಗಾಗಿ ಕಸರತ್ತು ಆರಂಭಿಸಿದೆ.ಮೂಲಗಳ ಪ್ರಕಾರ, ಕೇಂದ್ರ ಮಾಜಿ ಸಚಿವ ಜುರಾಲ್‌ ಓರಂ, ಪಕ್ಷದ ರಾಷ್ಟ್ರೀಯ ಉಪಾಧ್ಯಕ್ಷ ಬೈಜಯಂತ್‌ ‘ಜೈ’ ಪಾಂಡಾ, ಕೇಂದ್ರ ಸಚಿವ ಧಮೇಂದ್ರ ಪ್ರಧಾನ್‌ ಮತ್ತು ಪಕ್ಷದ ವಕ್ತಾರ ಸಂಬಿತ್‌ ಪಾತ್ರ ಅವರ ಹೆಸರನ್ನು ಸಿಎಂ ಹುದ್ದೆಗೆ ಪ್ರಮುಖವಾಗಿ ಪರಿಗಣಿಸುವ ಸಾಧ್ಯತೆ ಇದೆ ಎನ್ನಲಾಗಿದೆ.ಒಡಿಶಾದ 147 ವಿಧಾನಸಭಾ ಸ್ಥಾನದಲ್ಲಿ ಬಿಜೆಪಿ 78 ಮತ್ತು ಬಿಜೆಡಿ 51, ಕಾಂಗ್ರೆಸ್‌ 14, ಪಕ್ಷೇತರರು 3, ಸಿಪಿಎಂ 1 ಸ್ಥಾನ ಗೆದ್ದಿವೆ. ಆದರೆ ಓರಂ, ಪಾಂಡ, ಪಾತ್ರ ಹಾಗೂ ಪ್ರಧಾನ್‌ ಈಗಾಗಲೇ ಲೋಕಸಭೆಗೆ ಆಯ್ಕೆಯಾಗಿದ್ದಾರೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ಹಿಂಸಾಪೀಡಿತ ಮಣಿಪುರಕ್ಕೆ 1 ವರ್ಷದ ಬಳಿಕ ಸರ್ಕಾರ
ಆಸ್ಟ್ರೇಲಿಯಾದಲ್ಲಿ 426 ಕೆಜಿಯ ಗಾಂಧಿ ಕಂಚಿನ ಪ್ರತಿಮೆ ಧ್ವಂಸ, ಕಳವು