ಮುಸ್ಲಿಮರ ಸೆಳೆಯಲು ಬಿಜೆಪಿ ಹೊಸ ತಂತ್ರ

KannadaprabhaNewsNetwork | Updated : Feb 22 2024, 09:16 AM IST

ಸಾರಾಂಶ

ಎನ್‌ಡಿಎ ಮೈತ್ರಿಕೂಟ ಮುಂಬರುವ ಲೋಕಸಭಾ ಚುನಾವಣೆಯಲ್ಲಿ 400ಕ್ಕೂ ಹೆಚ್ಚು ಸ್ಥಾನಗಳಲ್ಲಿ ಜಯಗಳಿಸಲು ಕಾರ್ಯತಂತ್ರಗಳನ್ನು ಬಿಜೆಪಿ ರೂಪಿಸುತ್ತಿದೆ.

ನವದೆಹಲಿ: ಎನ್‌ಡಿಎ ಮೈತ್ರಿಕೂಟ ಮುಂಬರುವ ಲೋಕಸಭಾ ಚುನಾವಣೆಯಲ್ಲಿ 400ಕ್ಕೂ ಹೆಚ್ಚು ಸ್ಥಾನಗಳಲ್ಲಿ ಜಯಗಳಿಸಲು ಕಾರ್ಯತಂತ್ರಗಳನ್ನು ಬಿಜೆಪಿ ರೂಪಿಸುತ್ತಿದೆ. 

ಇದಕ್ಕಾಗಿ ಮುಸ್ಲಿಮರನ್ನು ಸೆಳೆಯಲು ಹೊಸ ತಂತ್ರಗಳನ್ನು ಬಿಜೆಪಿ ಹೆಣೆಯುತ್ತಿದೆ ಎಂದು ವರದಿಗಳು ತಿಳಿಸಿವೆ. 

ಅತಿ ಹೆಚ್ಚು ಸ್ಥಾನಗಳನ್ನು ತಮ್ಮದಾಗಿಸಿಕೊಳ್ಳಲು ಉತ್ತರ ಪ್ರದೇಶದಲ್ಲಿನ 80 ಸ್ಥಾನಗಳನ್ನು ಗೆಲ್ಲುವುದು ಅನಿವಾರ್ಯವಾಗಲಿದೆ. 

ಉತ್ತರ ಪ್ರದೇಶದಲ್ಲಿ ಶೇ.20ಕ್ಕೂ ಹೆಚ್ಚು ಪ್ರಮಾಣದಲ್ಲಿ ಮುಸ್ಲಿಂ ಜನರಿದ್ದು, 29 ಲೋಕಸಭಾ ಕ್ಷೇತ್ರಗಳಲ್ಲಿ ಇವರು ನಿರ್ಣಾಯಕ ಮತದಾರರಾಗಿದ್ದಾರೆ. 

ಹೀಗಾಗಿ ಇವರನ್ನು ಸೆಳೆಯಲು ಬಿಜೆಪಿ ಬುಧವಾರದಿಂದಲೇ ಹೊಸ ಕಾರ್ಯತಂತ್ರಗಳ ಮೊರೆ ಹೋಗಿದೆ. 

ಮದರಸಾ, ಮಸೀದಿಗಳಲ್ಲಿ ಪ್ರಚಾರ: ಮದರಸಾ ಮತ್ತು ಮಸೀದಿಗಳಲ್ಲಿ ಪ್ರಚಾರ ನಡೆಸಲು ಪಕ್ಷದ ಅಲ್ಪಸಂಖ್ಯಾತ ವಿಭಾಗ ಯೋಜನೆ ರೂಪಿಸಿದೆ. 

ಅಲ್ಲದೇ ಉರ್ದು, ಅರೇಬಿಕ್ ಭಾಷೆಗಳಲ್ಲೂ ಪ್ರಚಾರಕ್ಕೆ ಸಿದ್ಧತೆ ನಡೆಸಲಾಗಿದೆ. ದರ್ಗಾ ಹಜರತ್‌ ಕಾಸಿಮ್‌ ಶಹೀದ್‌ ಮಸೀದಿಯಲ್ಲಿ ಈಗಾಗಲೇ ಪ್ರಚಾರ ಆರಂಭಿಸಲಾಗಿದೆ. 

ಜೊತೆಗೆ ಮನ್‌ ಕಿ ಬಾತ್‌ ಪುಸ್ತಕಗಳನ್ನು ಉರ್ದು ಭಾಷೆಗೆ ಭಾಷಾಂತರಿಸಿ ಹಂಚಲಾಗುತ್ತಿದೆ. ದೇಶಾದ್ಯಂತ ಮುಸ್ಲಿಮರನ್ನು ಸೆಳೆಯಲು ಸಹ ಕಾರ್ಯರ್ತ್ರಗಳನ್ನು ರೂಪಿಸಲಾಗುತ್ತಿದೆ. 

ಈಗಾಗಲೇ ಪಸ್ಮಾಂದಾ ಮುಸ್ಲಿಮರ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರು ಹಲವು ವೇದಿಕೆಗಳಲ್ಲಿ ಮಾತನಾಡಿದ್ದಾರೆ. 

ದೇಶದಲ್ಲಿರುವ 60 ಲೋಕಸಭಾ ಸ್ಥಾನಗಳನ್ನು ಬಿಜೆಪಿ ಗುರುತಿಸಿದ್ದು, ಇಲ್ಲಿ ಅಲ್ಪಸಂಖ್ಯಾತರನ್ನು ಸೆಳೆಯಲು ಯೋಜನೆ ರೂಪಿಸಲಾಗಿದೆ.

Share this article