ನವದೆಹಲಿ: ಲಡಾಖ್ ಗಡಿಯಲ್ಲಿರುವ ವಾಸ್ತವ ಗಡಿ ನಿಯಂತ್ರಣಾ ರೇಖೆಯಲ್ಲಿ ಶಾಂತಿ ಸೌಹಾರ್ದತೆಯನ್ನು ಕಾಪಾಡಲು ಭಾರತ ಮತ್ತು ಚೀನಾ ಸಮ್ಮತಿ ವ್ಯಕ್ತಪಡಿಸಿವೆ.
ಫೆ.19ರಂದು ಲಡಾಖನ್ ಚುಶೂಲ್- ಮೋಲ್ಡೋ ಗಡಿ ಪ್ರದೇಶದಲ್ಲಿ ಉಭಯ ದೇಶಗಳ ಕಮಾಂಡರ್ ಹಂತದ ಮಾತುಕತೆ ನಡೆಯಿತು. ಹಿಂದಿನ ಸಭೆಗಳಲ್ಲಿ ಒಪ್ಪಿಕೊಂಡ ಅಂಶಗಳ ಆಧಾರದಲ್ಲೇ ಈ ಸಭೆ ಸೌಹಾರ್ದಯುತ ವಾತಾವರಣದಲ್ಲಿ ನಡೆಯಿತು.
ಈ ವೇಳೆ ವಿವಾದಿತ ಪ್ರದೇಶದಲ್ಲಿ ಶಾಂತಿ ಕಾಪಾಡಲು ಸಮ್ಮತಿ ವ್ಯಕ್ತಪಡಿಸಿದವು. ಈ ಪ್ರದೇಶದಿಂದ ಪೂರ್ಣ ಪ್ರಮಾಣದಲ್ಲಿ ಸೇನಾ ವಾಪಾಸಾತಿ ಮಾತುಕತೆಯ ಉದ್ದೇಶವಾಗಿತ್ತು ಎಂದು ಭಾರತೀಯ ವಿದೇಶಾಂಗ ಇಲಾಖೆ ತನ್ನ ಹೇಳಿಕೆಯಲ್ಲಿ ತಿಳಿಸಿದೆ.
2020ರಲ್ಲಿ ಚೀನಾ ಈ ಪ್ರದೇಶದಲ್ಲಿ ಅತಿಕ್ರಮಣಕ್ಕೆ ಯತ್ನಿಸಿ ಭಾರತೀಯರ ಯೋಧರ ಮೇಲೆ ಕಲ್ಲು, ಮೊಳೆ, ದೊಣ್ಣೆ ಮುಂತಾದವುಗಳ ಮೂಲಕ ಹಲ್ಲೆಗೆ ಯತ್ನಿಸಿತ್ತು.
ಇದಕ್ಕೆ ಭಾರತೀಯ ಯೋಧರು ಸೂಕ್ತ ಪ್ರತ್ಯುತ್ತರ ನೀಡಿದ್ದರು. ಅದಾದ ಬಳಿಕ ಈ ಪ್ರದೇಶದಲ್ಲಿ ಸಂಘರ್ಷಮಯ ವಾತಾವರಣ ನಿರ್ಮಾಣವಾಗಿದೆ.