ಅಯೋಧ್ಯೆ: ಇಲ್ಲಿ ನಿರ್ಮಾಣವಾಗಿರುವ ರಾಮಮಂದಿರ ಉದ್ಘಾಟನೆಯಾಗಿ ಫೆ.22ರ ಗುರುವಾರಕ್ಕೆ ಒಂದು ತಿಂಗಳು ತುಂಬಲಿದೆ. ಆದರೆ ತಿಂಗಳಾದರೂ ದೇವಸ್ಥಾನಕ್ಕೆ ಬರುತ್ತಿರುವ ಭಕ್ತರ ಸಂಖ್ಯೆ ಕುಸಿತ ಕಂಡಿಲ್ಲ.
ಈಗಲೂ ಪ್ರತಿನಿತ್ಯ 1ರಿಂದ 2 ಲಕ್ಷ ಜನರು ಬಾಲರಾಮನ ದರ್ಶನ ಪಡೆಯುತ್ತಿದ್ದಾರೆ ಎಂದು ದೇವಸ್ಥಾನದ ಟ್ರಸ್ಟ್ ಹೇಳಿದೆ. ಅಯೋಧ್ಯೆಯನ್ನು ಸಂಪರ್ಕಿಸುವ ಹೆದ್ದಾರಿಗಳಲ್ಲಿ ಸುಮಾರು 12 ಕಿ.ಮೀ.ವರೆಗೂ ಬಸ್‌ಗಳು ಸಾಲುಗಟ್ಟಿ ನಿಂತಿವೆ.
ಸಾಂಪ್ರಾದಾಯಿಕ ಉಡುಗೆಗಳನ್ನು ತೊಟ್ಟ ಲಕ್ಷಾಂತರ ಭಕ್ತರು ದೇಶದ ವಿವಿಧ ಮೂಲೆಗಳಿಂದ ನಿತ್ಯವೂ ಮಂದಿರಕ್ಕೆ ಭೇಟಿ ನೀಡುತ್ತಿದ್ದಾರೆ.
ಅಯೋಧ್ಯೆಯನ್ನು ಸಂಪರ್ಕಿಸುವ ರಸ್ತೆಗಳಲ್ಲಿ ಎಡಭಾಗದಲ್ಲಿ ನಡೆದು ಹೋಗಲು ಭಕ್ತರಿಗೆ ಸಕಲ ವ್ಯವಸ್ಥೆ ಮಾಡಲಾಗಿದೆ.
ನಿತ್ಯ 1-2 ಲಕ್ಷ ಮಂದಿ ಭೇಟಿ: ದೇವಸ್ಥಾನದ ಟ್ರಸ್ಟ್ ನೀಡಿರುವ ಮಾಹಿತಿಯ ಪ್ರಕಾರ ಈಗಲೂ ಪ್ರತಿನಿತ್ಯ 1ರಿಂದ 2 ಲಕ್ಷ ಮಂದಿ ಮಂದಿರಕ್ಕೆ ಭೇಟಿ ನೀಡುತ್ತಿದ್ದಾರೆ.
ಮೊದಲ 10 ದಿನದಲ್ಲೇ ಸುಮಾರು 25 ಲಕ್ಷ ಮಂದಿ ರಾಮನ ದರ್ಶನ ಪಡೆದಿದ್ದರು. ಈವರೆಗೆ ಸುಮಾರು 50ರಿಂದ 60 ಲಕ್ಷ ಮಂದಿ ಅಯೋಧ್ಯೆಗೆ ಭೇಟಿ ನೀಡಿದ್ದಾರೆ ಎನ್ನಲಾಗಿದೆ.