₹3000 ಕೋಟಿ ಮೌಲ್ಯದ 1700 ಕೇಜಿ ಮಿಯಾಂವ್‌ ಮಿಯಾಂವ್‌ ಡ್ರಗ್ಸ್‌ ವಶ

KannadaprabhaNewsNetwork |  
Published : Feb 21, 2024, 02:07 AM ISTUpdated : Feb 21, 2024, 08:52 AM IST
ವಶಪಡಿಸಿಕೊಂಡ ಮೆಫೆಡ್ರೋನ್‌(ಎಂಡಿ) | Kannada Prabha

ಸಾರಾಂಶ

ಮಿಯಾಂವ್‌ ಮಿಯಾಂವ್‌ ಡ್ರಗ್ಸ್‌ ಎಂದೇ ಕುಖ್ಯಾತವಾಗಿರುವ ಮೆಫಡ್ರೋಣ್‌ ಡ್ರಗ್ಸ್‌ನ ಅತಿದೊಡ್ಡ ಡ್ರಗ್ಸ್‌ಜಾಲವನ್ನು ಪುಣೆ ಪೊಲೀಸರು ಭೆದಿಸುತ್ತಿದ್ದು, ಇದುವರೆಗೂ 3 ಸಾವಿರ ಕೋಟಿ ರು. ಮೌಲ್ಯದ 1700 ಕೆಜಿ ಡ್ರಗ್ಸ್‌ ವಶಪಡಿಸಿಕೊಂಡಿದ್ದಾರೆ.

ಪುಣೆ: ಮಹಾರಾಷ್ಟ್ರ ಪೊಲೀಸರು ಅತಿ ದೊಡ್ಡ ಡ್ರಗ್ಸ್‌ ಜಾಲವನ್ನು ಭೇದಿಸಿದ್ದಾರೆ. 3000 ಕೋಟಿ ಮೌಲ್ಯದ 1700 ಕೇಜಿ ಮೆಫೆಡ್ರೋನ್‌ (ಎಂಡಿ)ಯನ್ನು ವಶಪಡಿಸಿಕೊಂಡಿದ್ದು, ಮೂವರು ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ. 

ಪುಣೆ ಹಾಗೂ ದೆಹಲಿಯಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಬೃಹತ್‌ ಜಾಲವನ್ನು ಪುಣೆ ಪೊಲೀಸರು ಪತ್ತೆಹಚ್ಚಿದ್ದಾರೆ.

ಭಾನುವಾರದಿಂದ ಆರಂಭವಾದ ಈ ಕಾರ್ಯಾಚರಣೆಯಲ್ಲಿ ಮೊದಲಿಗೆ ಪುಣೆ ಹೊರವಲಯದಲ್ಲಿನ ಕುರುಕುಂಭ್‌ ಪ್ರದೇಶದಲ್ಲಿ 700 ಕೇಜಿಯ ಎಂಡಿಯನ್ನು ಪೊಲೀಸರು ವಶಪಡಿಸಿಕೊಂಡು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. 

ಇವರ ವಿಚಾರಣೆ ನಡೆಸಿದ ಬಳಿಕ ದೆಹಲಿಯಲ್ಲೂ ಜಾಲ ಇರುವುದು ಪತ್ತೆಯಾಗಿದೆ. ಬಳಿಕ ಮಂಗಳವಾರ ಇದರ ಬೆನ್ನತ್ತಿದೆ ಪೊಲೀಸರು ದಕ್ಷಿಣ ದೆಹಲಿಯ ಉಗ್ರಾಣದಲ್ಲಿರಿಸಿದ್ದ 400 ಕೇಜಿ ಎಂಡಿ ವಶಪಡಿಸಿಕೊಂಡಿದ್ದಾರೆ. ಇಲ್ಲಿ ಇಬ್ಬರನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಈ ಕುರಿತು ಮಾತನಾಡಿದ ಪುಣೆ ಪೊಲೀಸ್‌ ಕಮಿಷನರ್‌ ಅಮಿತೇಶ್‌ ಕುಮಾರ್‌, ಎರಡು ದಿನಗಳಿಂದ ನಡೆಯುತ್ತಿರುವ ಈ ಕಾರ್ಯಾಚರಣೆಯಲ್ಲಿ ಒಟ್ಟು 2000 ಕೋಟಿ ರು.ಗಿಂತಲೂ ಅಧಿಕ ಮೌಲ್ಯದ ಎಂಡಿ ವಶಪಡಿಸಿಕೊಳ್ಳಲಾಗಿದೆ ಎಂದು ಮಾಹಿತಿ ಹೇಳಿದರು.

ಕೊರಿಯರ್‌ ರೀತಿ ಸಾಗಾಟ: ಮೂವರು ಆರೋಪಿಗಳು ಡ್ರಗ್ಸ್‌ ಹಂಚಿಕೊಳ್ಳಲು ಇದನ್ನು ಸಮಾಜದಲ್ಲಿ ಮರೆಮಾಚಲು ಕೊರಿಯರ್‌ ಬಾಯ್‌ ರೀತಿ ಕಾರ್ಯನಿರ್ವಹಿಸುತ್ತಿದ್ದರು.

PREV