ಮೋದಿ ಸರ್ಕಾರದ ಮಹತ್ವಾಕಾಂಕ್ಷಿ ‘ಒಂದು ದೇಶ ಒಂದು ಚುನಾವಣೆ’ ಮಸೂದೆ ಮಂಡನೆ ವೇಳೆ ಲೋಕಸಭೆಯಲ್ಲಿ 20 ಬಿಜೆಪಿ ಸಂಸದರು ಗೈರು ಹಾಜರಾಗಿದ್ದಾರೆ. ಹೀಗಾಗಿ ಇವರಿಗೆ ಸಂಸದರಿಗೆ ಪಕ್ಷ ನೋಟಿಸ್ ಕಳಿಸಲು ನಿರ್ಧರಿಸಿದೆ ಎನ್ನಲಾಗಿದೆ.
ನವದೆಹಲಿ: ಮೋದಿ ಸರ್ಕಾರದ ಮಹತ್ವಾಕಾಂಕ್ಷಿ ‘ಒಂದು ದೇಶ ಒಂದು ಚುನಾವಣೆ’ ಮಸೂದೆ ಮಂಡನೆ ವೇಳೆ ಲೋಕಸಭೆಯಲ್ಲಿ 20 ಬಿಜೆಪಿ ಸಂಸದರು ಗೈರು ಹಾಜರಾಗಿದ್ದಾರೆ. ಹೀಗಾಗಿ ಇವರಿಗೆ ಸಂಸದರಿಗೆ ಪಕ್ಷ ನೋಟಿಸ್ ಕಳಿಸಲು ನಿರ್ಧರಿಸಿದೆ ಎನ್ನಲಾಗಿದೆ.
ಈ ಮಸೂದೆ ಮಂಡನೆ ವೇಳೆ ಎಲ್ಲ ಬಿಜೆಪಿ ಸದಸ್ಯರೂ ಕಡ್ಡಾಯವಾಗಿ ಹಾಜರಿರಬೇಕು ಎಂದು ವಿಪ್ ನೀಡಲಾಗಿತ್ತು. ಆದರೆ ವಿಪ್ ಉಲ್ಲಂಭಿಸಿದ ಇವರು ಗೈರಾಗಿದ್ದಾರೆ. ಇದರಿಂದ ಎನ್‌ಡಿಎ ಬಲ 293 ಇದ್ದರೂ ಮಸೂದೆ ಮಂಡನೆ ಪರ 269 ಮತ ಮಾತ್ರ ಚಲಾವಣೆ ಆಗಿವೆ. ಹೀಗಾಗಿ ಇವರಿಗೆ ನೋಟಿಸ್ ಕಳಿಸಲು ಪಕ್ಷ ತೀರ್ಮಾನಿಸಿದೆ ಎಂದು ಮೂಲಗಳು ಹೇಳಿವೆ.
ಇವರ ಗೈರಿಂದ ಮಸೂದೆಗೆ ಯಾವುದೇ ರೀತಿಯ ತೊಡಕಾಗದಿದ್ದರೂ, ಸರ್ಕಾರಕ್ಕೆ ಸಾಂವಿಧಾನಿಕ ತಿದ್ದುಪಡಿ ತರಲು 3ನೇ 2ರಷ್ಟು ಬೆಂಬಲವಿಲ್ಲ ಎಂದು ಟೀಕಿಸಲು ವಿಪಕ್ಷ ಕಾಂಗ್ರೆಸ್‌ಗೆ ಅನುವು ಮಾಡಿಕೊಟ್ಟಂತಾಗಿದೆ.
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.