2025ರಿಂದ ಎನ್‌ಟಿಎ ನೇಮಕ ಪರೀಕ್ಷೆ ನಡೆಸಲ್ಲ: ಪ್ರಧಾನ್‌

KannadaprabhaNewsNetwork |  
Published : Dec 18, 2024, 12:45 AM IST
ದಮೇಂದ್ರ ಪ್ರಧಾನ್‌ | Kannada Prabha

ಸಾರಾಂಶ

2025ರಿಂದ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್‌ಟಿಎ) ಯಾವುದೇ ನೇಮಕಾತಿ ಪರೀಕ್ಷೆಗಳನ್ನು ನಡೆಸುವುದಿಲ್ಲ. ಬದಲಿಗೆ ಉನ್ನತ ಶಿಕ್ಷಣದ ಪ್ರವೇಶ ಪರೀಕ್ಷೆಗಳ ಮೇಲಷ್ಟೇ ಗಮನ ಹರಿಸಲಿದೆ.

- ಪ್ರವೇಶ ಪರೀಕ್ಷೆ ಮಾತ್ರ ಎನ್‌ಟಿಎನಿಂದ ಆಯೋಜನೆ

- ಕೇಂದ್ರೀಯ ಪಠ್ಯಪುಸ್ತಕ ಮುದ್ರಣ ಹೆಚ್ಚಳ, ಬೆಲೆ ಇಳಿಕೆ

==- 2026ರಲ್ಲಿ 9-12 ಕ್ಲಾಸ್‌ಗೆ ಹೊಸ ಪಠ್ಯನವದೆಹಲಿ: 2025ರಿಂದ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್‌ಟಿಎ) ಯಾವುದೇ ನೇಮಕಾತಿ ಪರೀಕ್ಷೆಗಳನ್ನು ನಡೆಸುವುದಿಲ್ಲ. ಬದಲಿಗೆ ಉನ್ನತ ಶಿಕ್ಷಣದ ಪ್ರವೇಶ ಪರೀಕ್ಷೆಗಳ ಮೇಲಷ್ಟೇ ಗಮನ ಹರಿಸಲಿದೆ. ಪರೀಕ್ಷೆಗಳಲ್ಲಾಗುವ ದೋಷಗಳನ್ನು ಶೂನ್ಯಕ್ಕೆ ಇಳಿಸಲಾಗುವುದು ಎಂದು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್‌ ಹೇಳಿದ್ದಾರೆ.

ಎನ್‌ಟಿಎ ನಡೆಸಿದ್ದ ವೈದ್ಯಕೀಯ ಪ್ರವೇಶ ಪರೀಕ್ಷೆಯಾದ ನೀಟ್‌ ಹಾಗೂ ಅನ್ಯ ಪರೀಕ್ಷೆಗಳ ಪ್ರಶ್ನೆಪತ್ರಿಕೆ ಸೋರಿಕೆಯಿಂದಾಗಿ ಸಾಲುಸಾಲು ಪರೀಕ್ಷೆಗಳ ರದ್ದತಿ ಆಗಿದ್ದವು. ಹೀಗಾಗಿ ಸರ್ಕಾರ ಈ ನಿರ್ಧಾರ ಕೈಗೊಂಡಿದೆ.

ಇದೇ ವೇಳೆ, ‘ಮುಂದಿನ ವರ್ಷ 15 ಕೋಟಿ ಎನ್‌ಸಿಇಆರ್‌ಟಿ ಪಠ್ಯಪುಸ್ತಕಗಳನ್ನು ಮುದ್ರಿಸಲಾಗುವುದು. ಅವುಗಳ ಬೆಲೆಯನ್ನು ಕಡೆಮೆ ಮಾಡಲಾಗುವುದು. 2026ರಲ್ಲಿ 9-12 ಕ್ಲಾಸ್‌ಗೆ ಹೊಸ ಪಠ್ಯ ಬರಲಿದೆ’ ಎಂದು ಪ್ರಧಾನ್‌ ತಿಳಿಸಿದರು.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ಶಬರಿಮಲೆ ಚಿನ್ನಕನ್ನ: ಕಾಂತಾರ ನಟಗೆ ಇ.ಡಿ. ಸಮನ್ಸ್‌
ಐಎಎಸ್‌, ಐಎಫ್ಎಸ್‌ಗಳಿಗೆ ಯುಪಿಎಸ್ಸಿ 2ನೇ ಚಾನ್ಸ್‌ ಇಲ್ಲ- ಯುಪಿಎಸ್ಸಿ ನಿಯಮ ಬದಲು