ಅರ್ನಬ್‌ ಮತ್ತು ಮುರುಸು ಬಳಿಕ ಇದೀಗ ಅಕ್ವನ್‌ (ದುಷ್ಟ ಶಕ್ತಿ) ಹೆಸರಿನ ಮೂರನೇ ಚಂಡಮಾರುತ ಬಂಗಾಳಕೊಲ್ಲಿಯಲ್ಲಿ ಸೃಷ್ಟಿಯಾಗುತ್ತಿದ್ದು, ನ.16ರಂದು ಆಂಧ್ರ ಮತ್ತು ಒಡಿಶಾ ಕರಾವಳಿಗೆ ಅಪ್ಪಳಿಸುವ ಸಾಧ್ಯತೆ ಇದೆ ಎನ್ನಲಾಗಿದೆ.

ಭುವನೇಶ್ವರ: ಅರ್ನಬ್‌ ಮತ್ತು ಮುರುಸು ಬಳಿಕ ಇದೀಗ ಅಕ್ವನ್‌ (ದುಷ್ಟ ಶಕ್ತಿ) ಹೆಸರಿನ ಮೂರನೇ ಚಂಡಮಾರುತ ಬಂಗಾಳಕೊಲ್ಲಿಯಲ್ಲಿ ಸೃಷ್ಟಿಯಾಗುತ್ತಿದ್ದು, ನ.16ರಂದು ಆಂಧ್ರ ಮತ್ತು ಒಡಿಶಾ ಕರಾವಳಿಗೆ ಅಪ್ಪಳಿಸುವ ಸಾಧ್ಯತೆ ಇದೆ ಎನ್ನಲಾಗಿದೆ.

ಬಂಗಾಳ ಕೊಲ್ಲಿಯಲ್ಲಿ ಸೃಷ್ಟಿಯಾಗಿರುವ ವಾಯುಭಾರ ಕುಸಿತ

ಸದ್ಯ ಹವಾಮಾನ ಇಲಾಖೆಯು ಬಂಗಾಳ ಕೊಲ್ಲಿಯಲ್ಲಿ ಸೃಷ್ಟಿಯಾಗಿರುವ ವಾಯುಭಾರ ಕುಸಿತದ ಮೇಲೆ ಕಣ್ಣಿಟ್ಟಿದ್ದು, ಒಂದು ವೇಳೆ ಅದು ಚಂಡಮಾರುತವಾಗಿ ರೂಪಾಂತರಗೊಂಡರೆ ನ.16ರ ಸಂಜೆ ವೇಳೆ ಉತ್ತರ ಆಂಧ್ರ ಮತ್ತು ದಕ್ಷಿಣ ಒಡಿಶಾ ಕರಾವಳಿಯನ್ನು ಅಪ್ಪಳಿಸುವ ಸಾಧ್ಯತೆ ಇದೆ.

30-40 ಕಿ.ಮೀ. ವೇಗದಲ್ಲಿ ಗುಡುಗು-ಸಿಡಿಲು

ತಮಿಳುನಾಡನ್ನು ದಾಟಿಕೊಂಡು ಆಂಧ್ರ ಮತ್ತು ಒಡಿಶಾ ಕರಾವಳಿಯನ್ನು ಈ ಚಂಡಮಾರುತ ಅಪ್ಪಳಿಸುವ ಸಾಧ್ಯತೆ ಇದೆ ಎನ್ನಲಾಗಿದೆ. ಚಂಡ ಮಾರುತ ಹಿನ್ನೆಲೆಯಲ್ಲಿ ಗಂಟೆಗೆ 30-40 ಕಿ.ಮೀ. ವೇಗದಲ್ಲಿ ಗುಡುಗು-ಸಿಡಿಲು ಸಹಿತ ಆಂಧ್ರ ಮತ್ತು ಒಡಿಶಾ ಕರಾವಳಿಯಲ್ಲಿ ಭಾರೀ ಮಳೆಯಾಗುವ ನಿರೀಕ್ಷೆ ಇದೆ.

ಉತ್ತರ ಆಂಧ್ರ ಕರಾವಳಿ ಮಾತ್ರವಲ್ಲದೆ, ಒಡಿಶಾದ ಬಾಲಾಸೋರ್‌, ಕೇಂದ್ರಾಪುರ, ಕಟಕ್‌ ಸೇರಿ ಹಲವೆಡೆ ಭಾರೀ ಮಳೆ ನಿರೀಕ್ಷಿಸಲಾಗಿದೆ. ಈ ಹಿನ್ನೆಲೆಯಲ್ಲಿ ಪೂರ್ವಕರಾವಳಿಯಲ್ಲಿ ಮೀನುಗಾರರಿಗೆ ಕಡಲಿಗಿಳಿಯದಂತೆ ಮುನ್ನೆಚ್ಚರಿಕೆ ನೀಡಲಾಗಿದೆ.