ಸ್ವಿಗ್ಗಿ, ಝೊಮ್ಯಾಟೋ ಮೂಲಕ ಮನೆ ಬಾಗಿಲಿಗೆ ಮದ್ಯ ಪೂರೈಕೆಗೆ ಸಮ್ಮತಿ?

KannadaprabhaNewsNetwork |  
Published : Jul 17, 2024, 12:46 AM IST
ಸ್ವಿಗ್ಗಿ | Kannada Prabha

ಸಾರಾಂಶ

ತರಕಾರಿ, ಹಣ್ಣು, ದಿನಸಿ, ಆಹಾರ ಪದಾರ್ಥಗಳನ್ನು ಬೇಕೆಂದಾಗ ಮನೆ ಬಾಗಿಲಿಗೆ ಪೂರೈಸುವ ಆನ್‌ಲೈನ್‌ ಡೆಲಿವರಿ ವೇದಿಕೆಗಳಾದ ಸ್ವಿಗ್ಗಿ, ಝೊಮ್ಯಾಟೋ ಶೀಘ್ರವೇ ಮನೆ ಬಾಗಿಲಿಗೆ ಬಯಸಿದ ಮದ್ಯವನ್ನೂ ಪೂರೈಕೆ ಮಾಡುವ ಸಾಧ್ಯತೆ ಇದೆ.

ನವದೆಹಲಿ: ತರಕಾರಿ, ಹಣ್ಣು, ದಿನಸಿ, ಆಹಾರ ಪದಾರ್ಥಗಳನ್ನು ಬೇಕೆಂದಾಗ ಮನೆ ಬಾಗಿಲಿಗೆ ಪೂರೈಸುವ ಆನ್‌ಲೈನ್‌ ಡೆಲಿವರಿ ವೇದಿಕೆಗಳಾದ ಸ್ವಿಗ್ಗಿ, ಝೊಮ್ಯಾಟೋ ಶೀಘ್ರವೇ ಮನೆ ಬಾಗಿಲಿಗೆ ಬಯಸಿದ ಮದ್ಯವನ್ನೂ ಪೂರೈಕೆ ಮಾಡುವ ಸಾಧ್ಯತೆ ಇದೆ. ಇಂಥದ್ದೊಂದು ಮನೆ ಬಾಗಿಲ ಸೇವೆ ಆರಂಭಿಸಲು ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳು ಮುಂದಾಗಿವೆ ಎಂದು ಮಾಧ್ಯಮ ವರದಿಯೊಂದು ಹೇಳಿದೆ.ಮೊದಲ ಹಂತದಲ್ಲಿ ಕಡಿಮೆ ಪ್ರಮಾಣದ ಆಲ್ಕೋಹಾಲ್‌ ಅಂಶವಿರುವ ಬಿಯರ್‌, ವೈನ್‌ ಪೂರೈಕೆ ಮಾಡುವ ಉದ್ದೇಶವಿದೆ. ಅದಕ್ಕೆ ವ್ಯಕ್ತವಾಗುವ ಪ್ರತಿಕ್ರಿಯೆ ಆಧರಿಸಿ ಅದನ್ನು ವಿಸ್ತರಣೆ ಮಾಡುವ ಗುರಿ ಇದೆ ಎಂದು ವರದಿಗಳು ತಿಳಿಸಿವೆ.ಹಾಲಿ ಒಡಿಶಾ ಮತ್ತು ಪಶ್ಚಿಮ ಬಂಗಾಳದಲ್ಲಿ ಮಾತ್ರವೇ ಮನೆ ಬಾಗಿಲಿಗೆ ಮದ್ಯ ಪೂರೈಕೆ ಮಾಡುವ ವ್ಯವಸ್ಥೆ ಇದೆ. ಇನ್ನು ಕೋವಿಡ್‌ ವೇಳೆ ಇನ್ನೊಂದಿಷ್ಟು ರಾಜ್ಯಗಳು ಇಂಥ ಸೇವೆ ಆರಂಭಿಸಿ ಬಳಿಕ ಹಿಂದೆ ಪಡೆದಿದ್ದವು. ಅದೇ ಯೋಜನೆಯನ್ನು ಇದೀಗ ಪ್ರಾಯೋಗಿಕವಾಗಿ ಜಾರಿಗೆ ತರಲು ಕರ್ನಾಟಕ, ಹರ್ಯಾಣ, ಪಂಜಾಬ್‌, ತಮಿಳುನಾಡು, ಗೋವಾ, ಕೇರಳ ಮತ್ತು ದೆಹಲಿ ರಾಜ್ಯ ಸರ್ಕಾರಗಳು ಉತ್ಸುಕವಾಗಿದೆ ಎಂದು ವರದಿಗಳು ತಿಳಿಸಿವೆ.ಯೋಜನೆ ಏಕೆ?:

ದೊಡ್ಡ ನಗರಗಳಲ್ಲಿ ವಲಸಿಗ ಸಮುದಾಯ ಹೆಚ್ಚುತ್ತಿದೆ. ಅವರು ಅಂಗಡಿ ಹುಡುಕಿಕೊಂಡು ಹೋಗುವ ಪ್ರಮೇಯ ತಪ್ಪಿಸಲು ಈ ಯೋಜನೆ ಸಹಕಾರಿ. ಇನ್ನು ಹೊಸ ತಲೆಮಾರಿನ ಜನತೆ ಕಡಿಮೆ ಮದ್ಯದ ಅಂಶ ಹೊಂದಿರುವ ಪಾನೀಯಗಳನ್ನು ಊಟದ ಜೊತೆಗೂ ಸೇವಿಸುವ ಸಂಪ್ರದಾಯ ಆರಂಭಿಸಿದ್ದಾರೆ. ಅಂಥವರಿಗೆ ಈ ಯೋಜನೆ ಅನುಕೂಲ. ಇನ್ನು ಮಹಿಳೆಯರು ಮತ್ತು ವಯೋವೃದ್ಧರು ಸಾಮಾನ್ಯ ಮದ್ಯದ ಅಂಗಡಿಗೆ ಹೋಗಿ ಖರೀದಿಸಲು ಹಿಂಜರಿಯುತ್ತಾರೆ. ಅವರಿಗೆ ಇದು ಹೆಚ್ಚು ಪ್ರಯೋಜನ.ಇವರಿಗೂ ಲಾಭ:

ಒಡಿಶಾ ಮತ್ತು ಪಶ್ಚಿಮ ಬಂಗಾಳದಲ್ಲಿ ಆನ್‌ಲೈನ್‌ ಮೂಲಕ ಮನೆ ಬಾಗಿಲಿಗೆ ಮದ್ಯ ವಿತರಣೆ ಆರಂಭಿಸಿದ ಬಳಿಕ ಮಾರಾಟದಲ್ಲಿ ಶೇ.20-30ರಷ್ಟು ಏರಿಕೆ ಕಂಡುಬಂದಿದೆ. ಇದರಿಂದ ಮದ್ಯ ಉತ್ಪಾದನೆ ಕಂಪನಿಗಳೂ ಲಾಭ, ಮನೆಗೆ ವಿತರಿಸುವ ಆನ್‌ಲೈನ್‌ ಕಂಪನಿಗಳಿಗೂ ಲಾಭ ಮತ್ತೊಂದೆಡೆ ಹೆಚ್ಚು ಮಾರಾಟದಿಂದ ಹೆಚ್ಚುವರಿ ತೆರಿಗೆ ಸಂಗ್ರಹದ ಮೂಲಕ ಸರ್ಕಾರಕ್ಕೂ ಲಾಭ.ಯಾರಿಗೆ ಅವಕಾಶ?:

ಮೊದಲ ಹಂತದಲ್ಲಿ ಸ್ವಿಗ್ಗಿ, ಝೊಮ್ಯಾಟೋ, ಬ್ಲಿಂಕಿಟ್‌, ಬಿಗ್‌ಬ್ಯಾಸ್ಕೆಟ್‌ ಕಂಪನಿಗಳು ಇಂಥ ವಿತರಣೆಯ ಅವಕಾಶ ಪಡೆಯಬಹುದು ಎಂದು ವರದಿ ತಿಳಿಸಿದೆ.

PREV

Recommended Stories

ಆಲಮಟ್ಟಿ ಡ್ಯಾಂ ಎತ್ತರ ಹೆಚ್ಚಳ ವಿರುದ್ಧ ಕೇಂದ್ರಕ್ಕೆ ಮಹಾ ದೂರು
ಸನಾತನ ಧರ್ಮದ ಕೊಂಡಿ ಕಳಚಲು ಶಿಕ್ಷಣದಿಂದ ಮಾತ್ರ ಸಾಧ್ಯ: ಕಮಲ್‌