ಮುಂಬೈ: ಮಹಾರಾಷ್ಟ್ರ ಡಿಸಿಎಂ ಏಕನಾಥ ಶಿಂಧೆ ಅವರನ್ನು ದೇಶದ್ರೋಹಿ ಎಂದು ಕರೆದು ಶಿವಸೈನಿಕರ ಕೆಂಗಣ್ಣಿಗೆ ಗುರಿಯಾಗಿರುವ ಹಾಸ್ಯ ಕಲಾವಿದ ಕುನಾಲ್ ಕಾಮ್ರಾ ಇದೀಗ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಟೀಕಿಸಿದ್ದಾರೆ.
‘ದೇಶದಲ್ಲಿ ಸರ್ಕಾರದೊಂದಿಗೆ ಹಣದುಬ್ಬರವೂ ಬಂದಿದೆ. ಜನರ ಗಳಿಕೆಯನ್ನು ದೋಚಲು ಸೀರೆಯುಟ್ಟ ಸಹೋದರಿಯೂ ಬಂದಿದ್ದಾರೆ. ವೇತನವ ಕದ್ದು ಮಧ್ಯಮ ವರ್ಗದವರ ಹೊಸಕಿ ಹಾಕಲು ಇವರು ಆಗಮಿಸಿದ್ದಾರೆ. ಪಾಪ್‌ಕಾರ್ನ್ ತಿನ್ನಿಸಲು ಬಂದಿಹರು, ನಿರ್ಮಲಾ ಎಂದು ಕರೆಯಲ್ಪಡುವವರು’ ಎಂದು ಕಾಮ್ರಾ ವ್ಯಂಗ್ಯವಾಗಿ ಹಾಡಿದ್ದಾರೆ.