1 ಕೋಟಿ ಮನೆಗೆ 300 ಯುನಿಟ್‌ ಉಚಿತ ವಿದ್ಯುತ್‌: ಸಂಪುಟ ಅಸ್ತು

KannadaprabhaNewsNetwork |  
Published : Mar 01, 2024, 02:19 AM IST
ಸೌರ ಪ್ಯಾನೆಲ್‌ | Kannada Prabha

ಸಾರಾಂಶ

ಮನೆ ಮೇಲೆ 1 ಕೋಟಿ ಕುಟುಂಬಗಳು ಸೌರ ಸ್ಥಾವರ ಹಾಕಿಕೊಳ್ಳುವ ‘ಪಿಎಂ ಸೂರ್ಯಘರ್’ ಯೋಜನೆಗೆ ಕೇಂದ್ರ ಸಚಿವ ಸಂಪುಟ ಗುರುವಾರ ಅನುಮೋದನೆ ನೀಡಿದೆ.

ನವದೆಹಲಿ: ಮನೆ ಮೇಲೆ 1 ಕೋಟಿ ಕುಟುಂಬಗಳು ಸೌರ ಸ್ಥಾವರ ಹಾಕಿಕೊಳ್ಳುವ ‘ಪಿಎಂ ಸೂರ್ಯಘರ್’ ಯೋಜನೆಗೆ ಕೇಂದ್ರ ಸಚಿವ ಸಂಪುಟ ಗುರುವಾರ ಅನುಮೋದನೆ ನೀಡಿದೆ. ಈ ಯೋಜನೆಯಡಿ 75021 ಕೋಟಿ ರು. ವೆಚ್ಚ ಮಾಡಲು ನಿರ್ಧರಿಸಿದ್ದು, ಇದರಿಂದ 1 ಕೋಟಿ ಕುಟುಂಬಗಳು ಮೇಲ್ಛಾವಣಿ ಸೌರ ಸ್ಥಾವರಗಳನ್ನು ಸ್ಥಾಪಿಸಲು ಹಣಕಾಸಿನ ನೆರವನ್ನು ಪಡೆಯುತ್ತವೆ ಹಾಗೂ ಮೊದಲ 300 ಯುನಿಟ್‌ ವಿದ್ಯುತ್ತನ್ನು ಉಚಿತವಾಗಿ ಬಳಸಿಕೊಂಡು ಮಿಕ್ಕಿದ್ದನ್ನು ಮಾರಲು ಅವಕಾಶ ನೀಡಲಾಗಿದೆ.

ಸಂಪುಟ ಸಭೆಯ ಬಳಿಕ ಮಾಧ್ಯಮಗಳಿಗೆ ಮಾಹಿತಿ ನೀಡಿದ ವಾರ್ತಾ ಸಚಿವ ಅನುರಾಗ್‌ ಠಾಕೂರ್‌, ಮೇಲ್ಛಾವಣಿ ಸೋಲಾರ್‌ ಅಳವಡಿಸುವ 1 ಕೋಟಿ ಮನೆಗಳಿಗೆ ಪ್ರತಿ ತಿಂಗಳು 300 ಯುನಿಟ್‌ಗಳವರೆಗೆ ಉಚಿತ ವಿದ್ಯುತ್‌ ನೀಡುವ ಯೋಜನೆಗೆ ಅನುಮೋದನೆ ನೀಡಲಾಗಿದೆ. ಈ ಯೋಜನೆಯಿಂದಾಗಿ ವಿದ್ಯುತ್‌ ಉತ್ಪಾದನೆಯೊಂದಿಗೆ 17 ಲಕ್ಷ ಜನರಿಗೆ ಉದ್ಯೋಗವಕಾಶ ದೊರೆಯಲಿದೆ ಎಂದು ತಿಳಿಸಿದರು.

ಅಲ್ಲದೇ ಸೌರಫಲಕಗಳನ್ನು ಅಳವಡಿಸಿಕೊಳ್ಳುವ ಕುಟುಂಬಗಳಿಗೆ 2 ಕಿಲೋವ್ಯಾಟ್‌ಗೆ ಶೇ.60ರಷ್ಟು ಅಂದರೆ 60 ಸಾವಿರ ರು. (ಪ್ರಸ್ತುತ ಮಾರುಕಟ್ಟೆ ದರ) ಮತ್ತು 2ರಿಂದ 3 ಕಿಲೋವ್ಯಾಟ್‌ಗೆ ಶೇ.40ರಷ್ಟು ಅಂದರೆ 78 ಸಾವಿರ ರು. (ಪ್ರಸ್ತುತ ಮಾರುಕಟ್ಟೆ ದರ) ಸಹಾಯಧನ ಒದಗಿಸಲಾಗುತ್ತದೆ. ಅಲ್ಲದೇ ಇದರ ಅಳವಡಿಕೆಗಾಗಿ ಮನೆಗಳು ಶೇ.7ರಷ್ಟು ಬಡ್ಡಿದರದಲ್ಲಿ ಸಾಲವನ್ನು ಸಹ ಪಡೆದುಕೊಳ್ಳಬಹುದು. ಅಲ್ಲದೇ ಪ್ರತಿ ಜಿಲ್ಲೆಯಲ್ಲೂ ಒಂದು ಸೌರಗ್ರಾಮವನ್ನು ನಿರ್ಮಾಣ ಮಾಡಲಾಗುವುದು ಎಂದು ಅವರು ತಿಳಿಸಿದರು.

ಆದರೆ ಈ ಯೋಜನೆ ಹೊಸದಾಗಿ ಸೌರಫಲಕ ಹಾಕಿಕೊಳ್ಳುವ ಕುಟುಂಬಕ್ಕೆ ಅನ್ವಯಿಸುತ್ತದೆಯೇ ವಿನಾ ಈಗಾಗಲೇ ಹಾಕಿಕೊಂಡ ಕುಟುಂಬಗಳಿಗೆ ಅಲ್ಲ. ಈ ಯೋಜನೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಫೆ.13ರಂದು ಚಾಲನೆ ನೀಡಿದ್ದರು.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ಸೇನಾಧಿಕಾರಿಗಳ ಕೃತಿ ಪ್ರಕಟಣೆಗೆ ಕಠಿಣ ನಿಯಮ: ಚಿಂತನೆ
ದೇಶದ ಅತಿದೊಡ್ಡರಕ್ಷಣಾ ಖರೀದಿಗೆಸಂಪುಟದ ಸಮ್ಮತಿ