ಹೊಸ ಸರ್ಕಾರದ ಆಡಳಿತಕ್ಕೆ ಮೋದಿ ಈಗಲೇ ಸಿದ್ಧತೆ

KannadaprabhaNewsNetwork |  
Published : Mar 18, 2024, 01:47 AM ISTUpdated : Mar 18, 2024, 11:58 AM IST
ಕ್ಯಾಬಿನೇಟ್‌ ಮೀಟಿಂಗ್‌ನಲ್ಲಿ ಮೋದಿ | Kannada Prabha

ಸಾರಾಂಶ

ಚುನಾವಣೆ ಘೋಷಣೆ ಆದ ಮಾರನೇ ದಿನವಾದ ಭಾನುವಾರ ಬೆಳಿಗ್ಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಕೇಂದ್ರ ಸಚಿವ ಸಂಪುಟ ಸಭೆ ನಡೆಸಿದರು.

ಪಿಟಿಐ ನವದೆಹಲಿ

ಚುನಾವಣೆ ಘೋಷಣೆ ಆದ ಮಾರನೇ ದಿನವಾದ ಭಾನುವಾರ ಬೆಳಿಗ್ಗೆ ಕೇಂದ್ರ ಸಚಿವ ಸಂಪುಟ ಸಭೆ ನಡೆಸಿರುವ ಪ್ರಧಾನಿ ನರೇಂದ್ರ ಮೋದಿ, ತಾವು 3ನೇ ಬಾರಿ ಅಧಿಕಾರಕ್ಕೆ ಬಂದ ನಂತರದ ಮೊದಲ 100 ದಿನಗಳು ಮತ್ತು ಮುಂದಿನ 5 ವರ್ಷಗಳ ಹೊಸ ಸರ್ಕಾರಕ್ಕೆ ಮಾರ್ಗಸೂಚಿಯನ್ನು ರೂಪಿಸುವಂತೆ ಸಚಿವರಿಗೆ ಸೂಚಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. 

ಈ ಮೂಲಕ ಹ್ಯಾಟ್ರಿಕ್‌ ಅವಧಿಗೆ ಅಧಿಕಾರಕ್ಕೆ ಬರುವ ವಿಶ್ವಾಸವನ್ನು ಮೋದಿ ಪರೋಕ್ಷವಾಗಿ ವ್ಯಕ್ತಪಡಿಸಿದ್ದಾರೆ.ಇತ್ತೀಚೆಗೆ ನಡೆದ ಇಡೀ ಮಂತ್ರಿಮಂಡಲದ ಸಭೆಯಲ್ಲಿ ಇದೇ ಮಾದರಿಯ ಸೂಚನೆ ನೀಡಿದ್ದ ಮೋದಿ, ಚುನಾವಣೆ ಘೋಷಣೆ ಆದ ಬಳಿಕವೂ ಅದೇ ನಿರ್ದೇಶನಗಳನ್ನು ಪುನರಾವರ್ತಿಸಿದ್ದಾರೆ. 

ಮೊದಲ 100 ದಿನಗಳು ಮತ್ತು ಮುಂದಿನ 5 ವರ್ಷಗಳ ಕಾರ್ಯಸೂಚಿಯನ್ನು ಹೇಗೆ ಉತ್ತಮವಾಗಿ ಕಾರ್ಯಗತಗೊಳಿಸಬಹುದು ಎಂಬುದರ ಕುರಿತು ಚರ್ಚಿಸಲು ಆಯಾ ಸಚಿವಾಲಯಗಳ ಕಾರ್ಯದರ್ಶಿಗಳು ಮತ್ತು ಇತರ ಅಧಿಕಾರಿಗಳನ್ನು ಭೇಟಿ ಮಾಡಬೇಕು. 

ಈ ಮೂಲಕ ಉತ್ತಮ ಅಜೆಂಡಾ ರೂಪಿಸಬೇಕು ಎಂದು ಸಭೆಯಲ್ಲಿ ಮೋದಿ ತಿಳಿಸಿದರು ಎಂದು ಮೂಲಗಳು ಹೇಳಿವೆ.

ಚುನಾವಣಾ ದಿನಾಂಕ ಶಿಫಾರಸು ರಾಷ್ಟ್ರಪತಿಗೆ: ಚುನಾವಣೆ ಘೋಷಿಸಿರುವ ಚುನಾವಣಾ ಆಯೋಗದ ಶಿಫಾರಸನ್ನು ಅಧ್ಯಕ್ಷ ದ್ರೌಪದಿ ಮುರ್ಮು ಅವರಿಗೆ ಕಳುಹಿಸುವ ನಿರ್ಣಯವನ್ನು ಸಂಪುಟ ಕೈಗೊಂಡಿತು. 

ಆಯೋಗ ಶನಿವಾರವಷ್ಟೇ 7 ಹಂತದ ಸಂಸತ್ತಿನ ಚುನಾವಣೆಯ ದಿನಾಂಕಗಳನ್ನು ಪ್ರಕಟಿಸಿತ್ತು.102 ಸ್ಥಾನಗಳಿಗೆ ಏ.19 ರಂದು ಮೊದಲ ಹಂತದ ಚುನಾವಣೆ ನಡೆಯಲಿದೆ. 

ಈ ಹಂತಕ್ಕೆ ಮಾರ್ಚ್ 20 ರಂದು ಮೊದಲ ಅಧಿಸೂಚನೆಯನ್ನು ಹೊರಡಿಸಲಾಗುತ್ತದೆ. ಅಧಿಸೂಚನೆಯ ಹೊರಡಿಸಿದ ತಕ್ಷಣ ಈ ಹಂತದ ನಾಮಪತ್ರ ಸಲ್ಲಿಕೆ ಪ್ರಕ್ರಿಯೆಯು ಪ್ರಾರಂಭವಾಗುತ್ತದೆ.

PREV

Recommended Stories

ಡೆಂಘೀ ವಿರುದ್ಧ ಹೋರಾಟಕ್ಕೆ ಯುರೋಪ್ - ಭಾರತ ವಿಜ್ಞಾನಿಗಳ ಮೈತ್ರಿ
ಭಾರತ-ಇಂಗ್ಲೆಂಡ್‌ ಸರಣಿ ಕ್ಲೈಮ್ಯಾಕ್ಸ್‌ ಇಂದು !